ಕೋಲಾರ ಎಂಪಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಖಚಿತ: ಶಾಸಕ ಕೊತ್ತೂರು ಭವಿಷ್ಯ

By Kannadaprabha News  |  First Published Jun 2, 2024, 5:17 PM IST

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ೧ ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆಂದು ಜೆಡಿಎಸ್, ಬಿಜೆಪಿಯವರು ಮಾತನಾಡಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ ಆದರೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ 29 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಶಾಸಕ ಕೊತ್ತೂರು ಮಂಜುನಾಥ್ ಭವಿಷ್ಯ ನುಡಿದರು.


ಕೋಲಾರ (ಜೂ.02): ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ೧ ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆಂದು ಜೆಡಿಎಸ್, ಬಿಜೆಪಿಯವರು ಮಾತನಾಡಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ ಆದರೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ 29 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಶಾಸಕ ಕೊತ್ತೂರು ಮಂಜುನಾಥ್ ಭವಿಷ್ಯ ನುಡಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ನಾನು ಇಷ್ಟು ಮತಗಳ ಅಂತರದಿಂದ ಗೆಲ್ಲುವುದಾಗಿ ಲೆಕ್ಕಾಚಾರ ಮಾಡಿಕೊಂಡಿದ್ದೇ, ಆದರೆ, ನನ್ನ ಲೆಕ್ಕಾಚಾರಕ್ಕಿಂತ ೫೦೦ ಮತಗಳಷ್ಟೇ ವ್ಯತ್ಯಾಸವಾಗಿತ್ತು. ಈಗಲೂ ಅಷ್ಟೇ ೨೯ ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇವೆ. ೫೦೦ ಮತಗಳು ವ್ಯತ್ಯಾಸವಾಗಬಹುದು ಎಂದರು.

Tap to resize

Latest Videos

ವಾಲ್ಮೀಕಿ ಅಭಿವೃದ್ದಿ ಅಕ್ರಮದಲ್ಲಿ ಸಚಿವರು ತಪ್ಪು ಮಾಡಿದ್ರೂ ಕಠಿಣ ಶಿಕ್ಷೆಯಾಗಲಿ: ಶಾಸಕ ಗೋಪಾಲಕೃಷ್ಣ ಬೇಳೂರು

ಎಂಎಲ್ಸಿಗಳಾದ ಅನಿಲ್ ಕುಮಾರ್, ನಸೀರ್ ಅಹಮದ್ ಸೇರಿದಂತೆ ಅನೇಕ ನಾಯಕರಿರುವ ನಮ್ಮ ತಂಡಕ್ಕೆ ಡಿ.ಟಿ.ಶ್ರೀನಿವಾಸ್ ಆಯ್ಕೆಯಾಗಿ ಬಂದರೆ ಇನ್ನಷ್ಟು ಕೆಲಸ ಮಾಡಲು ಸಹಕಾರಿಯಾಗಲಿದೆ. ರಾಜ್ಯದಲ್ಲಿ ಮೈತ್ರಿ ಏನೇ ಇರಲಿ. ನಾವು ಗೆಲ್ಲುತ್ತೇವೆ. ಖಾಸಗಿ ಶಾಲೆ ಶಿಕ್ಷಕರಿಗೆ ವಿಮೆ ಮಾಡಿಸಿಕೊಡಲಾಗುವುದು ಅನಂತರ ನಾನಾ ಕಾರ್ಯಕ್ರಮ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ರಮೇಶ್‌ಕುಮಾರ್‌ ಎಂಎಲ್ಸಿ ಆಗಲಿ: ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ೧೩೬ ಶಾಸಕರು ಇರುವ ಸರಕಾರವನ್ನು ಕೆಡವಲು ಹೇಗೆ ಸಾಧ್ಯ. ೯೨ ಮಂದಿ ಶಾಸಕರು ಪಕ್ಷದಿಂದ ಹೊರಗೆ ಬರಬೇಕು, ಇಲ್ಲವೇ ೫೦ ಮಂದಿ ಶಾಸಕರು ರಾಜೀನಾಮೆ ನೀಡಬೇಕು. ಇದೆಲ್ಲ ಸಾಧ್ಯವೇ ಎಂದು ಪ್ರಶ್ನಿಸಿದರು. ಹಿರಿಯರನ್ನು ಎಂಎಲ್ಸಿ ಮಾಡಿದರೆ ಮತ್ತಷ್ಟು ಶಕ್ತಿ ಬರುತ್ತದೆ ಎನ್ನುವ ನಿಟ್ಟಿನಲ್ಲಿ ಕೆ.ಆರ್.ರಮೇಶ್‌ಕುಮಾರ್‌ರಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಜಿಲ್ಲೆಯಲ್ಲಿ ಎರಡು, ಮೂರು ಬಾರಿ ಶಾಸಕರಾಗಿರುವವರು ಇದ್ದಾರೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಎಂಎಲ್ಸಿ ಸ್ಥಾನ ಕೊಟ್ಟರೂ ಸ್ವಾಗತಿಸುತ್ತೇವೆ ಎಂದರು.

ವಿಧಾನಾಭೆಯಂತೆಯೇ ಪರಿಷತ್ ನಲ್ಲಿಯೂ ಹೆಚ್ಚಿನ ಸಂಖ್ಯೆಯ ಶಾಸಕರಿದ್ದರೆ ಪರಿಪೂರ್ಣ ಸರ್ಕಾರವಾಗಲು ಸಾಧ್ಯ. ಅತ್ಯಗತ್ಯವಾಗಿ ಬಹುಮತ ಬೇಕಿದ್ದು ಸರಕಾರ ಗಂಭೀರವಾಗಿ ಪರಿಗಣಿಸಿ ಚುನಾವಣೆ ಎದುರಿಸುತ್ತಿದೆ. ೭ನೇ ವೇತನ ಆಯೋಗ ಜಾರಿ, ಎನ್ ಇಪಿ ಕೈಬಿಟ್ಟು ಎಸ್ ಇಪಿ ಜಾರಿ ಭರವಸೆ ನೀಡಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಡಿ.ಟಿ.ಶ್ರೀನಿವಾಸ್‌ರಿಗೆ ಸಮಸ್ಯೆಗಳ ಬಗ್ಗೆ ಅರಿವಿದ್ದು, ಖಾಸಗಿ, ಸರಕಾರಿ ಶಿಕ್ಷಣ ಸಂಸ್ಥೆಗಳಿಂದ ನಮಗೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.

ಪಿಎಸ್‌ಐ ನೇಮಕಾತಿ ಗೊಂದಲ ಪರಿಹಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

₹30 ಕೋಟಿ ಅನುದಾನ: ಮಹಿಳಾ ಕಾಲೇಜು, ಬಾಲಕರ ಕಾಲೇಜಿಗೆ ೩೦ ಕೋಟಿರೂ ಅನುದಾನ ತಂದಿದ್ದು, ನೀತಿ ಸಂಹಿತೆ ಮುಗಿದ ಕೂಡಲೇ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ. ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ದುರಸ್ಥಿಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು ಸರಕಾರದ ಅನುದಾನ, ಸಿಎಸ್‌ಆರ್ ಅನುದಾನ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕೋಚಿಮುಲ್ ನಿರ್ದೇಶಕ ಯೂಸುಫ್ ಷರೀಫ್, ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ಮುಖಂಡರಾದ ವೈ.ಶಿವಕುಮಾರ್, ಖಾದ್ರಿಪುರ ಬಾಬು ಇದ್ದರು.

click me!