ಎಚ್‌ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್

By Kannadaprabha News  |  First Published Mar 15, 2023, 8:41 PM IST

ಮಾಜಿ ಶಾಸಕ ಬಾಲಕೃಷ್ಣ ನನ್ನ ಪತ್ನಿ ಹಾಗೂ ಗುತ್ತಿಗೆದಾರ ಸೇರಿ ಕಮಿಷನ್‌ ಹೊಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮೋಸ ಮಾಡಿ ಕಾಂಗ್ರೆಸ್‌ಗೆ ತಲೆ ಮಾರಿಕೊಂಡಿದ್ದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಶಾಸಕ ಎ.ಮಂಜುನಾಥ ತಿರುಗೇಟು ನೀಡಿದರು.
 


ಮಾಗಡಿ (ಮಾ.15): ಮಾಜಿ ಶಾಸಕ ಬಾಲಕೃಷ್ಣ ನನ್ನ ಪತ್ನಿ ಹಾಗೂ ಗುತ್ತಿಗೆದಾರ ಸೇರಿ ಕಮಿಷನ್‌ ಹೊಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮೋಸ ಮಾಡಿ ಕಾಂಗ್ರೆಸ್‌ಗೆ ತಲೆ ಮಾರಿಕೊಂಡಿದ್ದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಶಾಸಕ ಎ.ಮಂಜುನಾಥ ತಿರುಗೇಟು ನೀಡಿದರು.

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಪತ್ನಿ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಕಮಿಷನ್‌ ಹೊಡೆಯುತ್ತಿದ್ದಾರೆ ಎಂದು ಬಾಲಕೃಷ್ಣ ಆರೋಪ ಮಾಡಿದ್ದಾರೆ. ಇದಕ್ಕೆ ಅವರು ದೇವಸ್ಥಾನದ ಮುಂದೆ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದಾರೆ. ನಾನು ಕೂಡ ಅವರ ಸವಾಲಿಗೆ ಸಾಬೀತುಪಡಿಸಿದರೆ ಕ್ಷೇತ್ರವನ್ನೇ ಬಿಡುತ್ತೇನೆ ಎಂದು ಸವಾಲು ಹಾಕಿದ್ದೆ. ಇದನ್ನು ತಿಳಿದರೂ ಕೂಡ ಮಾಜಿ ಶಾಸಕ ಬಾಲಕೃಷ್ಣ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಒಂದೇ ಒಂದು ದಾಖಲೆಯನ್ನು ಅವರು ಕೊಡುತ್ತಿಲ್ಲ. ಸುಮ್ಮನೆ ನಮ್ಮ ಕುಟುಂಬದ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

Tap to resize

Latest Videos

ರಾಮ​ದೇ​ವರ ಬೆಟ್ಟದ ದೇಗುಲ ಅಭಿ​ವೃದ್ಧಿ ಸಮಿತಿ ರದ್ದು: ಸಚಿವ ಅಶ್ವತ್ಥ್‌ರಿಂದ ಡಿಸಿಗೆ ಪತ್ರ

ಕುಲುಮೆ ಸಂಘದ ಜಾಗ ಮಾರಾಟ ಮಾಡಿದ್ದಾರೆ: ಪಟ್ಟಣದ ಮಾರುತಿ ಮೋಹನ್‌ ಥಿಯೇಟರ್‌ ಪಕ್ಕದ ಕುಲುಮೆ ಸಂಘಕ್ಕೆ ಸೇರಿದ ಜಾಗವನ್ನು ಮಾಜಿ ಶಾಸಕ ಬಾಲಕೃಷ್ಣ ಅವರ ತಾಯಿ ಹೆಸರಿಗೆ ಪೋತಿ ಖಾತೆ ಮಾಡಿಸಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಕುಲುಮೆ ಸಂಘದ ಅಧ್ಯಕ್ಷರಾಗಿ ಶಾಸಕರ ಹೆಸರಿನಲ್ಲಿ ಬರುತ್ತದೆ. ಅವರ ತಂದೆ ಎಚ್‌.ಜೆ ಚನ್ನಪ್ಪನವರು ಶಾಸಕರಾಗಿದ್ದಾಗ ಕೊಡಲಿಲ್ಲ ಅವರ ಹೆಸರಿನಲ್ಲಿ ಖಾತೆ ಬರುತ್ತಿತ್ತು ಅವರ ಮರಣ ನಂತರ ಖಾತೆ ಮುಂದುವರೆದಿದ್ದು ಅದನ್ನು ಪೋತಿ ಖಾತೆ ಮಾಡಿಸಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದನ್ನು ಬಾಲಕೃಷ್ಣ ಸುಳ್ಳು ಎಂದರೆ ದೇವಸ್ಥಾನದ ಮುಂದೆ ಬಂದು ಕರ್ಪೂರ ಹಚ್ಚಲಿ ಎಂದು ಶಾಸಕ ಎ. ಮಂಜುನಾಥ ಸವಾಲು ಹಾಕಿದರು.

ಚುನಾವಣೆಯಲ್ಲಿ ಮಾಡಿದ ಸಾಲ ಕೊಟ್ಟಿಲ್ಲ: ಮಾಜಿ ಶಾಸಕ ಬಾಲಕೃಷ್ಣ ನನ್ನ ವಿರುದ್ಧ ಸಾಲ ಮಾಡಿದ್ದಾರೆ ಎಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮಾಜಿ ಶಾಸಕ ಬಾಲಕೃಷ್ಣ ಕಳೆದ ಚುನಾವಣೆಯಲ್ಲಿ ರಾಮನಗರದ ಶಿವಲಿಂಗೇಗೌಡರವರ ಹತ್ತಿರ 12 ಕೋಟಿ ಹಣವನ್ನು ಸಾಲವಾಗಿ ಪಡೆದಿದ್ದು ಅವರಿಗೆ ಕೊಡದೆ ಕೇಸ್‌ ಹಾಕಿದ್ದಾರೆ ಎಂದು ತಿರುಗೇಟು ನೀಡಿದರು. ತಾವು ಶಾಸಕರಾಗಿದ್ದಾಗ ಮಾಗಡಿ ಬೆಂಗಳೂರು ಮುಖ್ಯರಸ್ತೆ ಅಗಲೀಕರಣವಾದಾಗ ಈ ಕಮಿಷನ್‌ನಲ್ಲಿ ಬೆಂಗಳೂರಿನಲ್ಲಿ ಮನೆ ಕಟ್ಟಿದ್ದಾರೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಬಂದಿತ್ತು. ತಾವು ಶಾಸಕರಾಗಿದ್ದಾಗ ಏನು ಮಾಡಿದ್ದೀರಿ ಎಂಬುದು ಜನತೆಗೆ ಗೊತ್ತಿದೆ. ಈಗ ನನ್ನ ಮತ್ತು ನನ್ನ ಪತ್ನಿಯ ವಿರುದ್ಧ ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡುತ್ತಾರೆ ಇದು ಸರಿಯಲ್ಲ ಎಂದರು. ಈ ವೇಳೆ ಜೆಡಿಎಸ್‌ ಹಲವು ಮುಖಂಡರು ಇದ್ದರು.

ಬಿ​ಜೆ​ಪಿ ಗೆಲು​ವಿನ ಅಶ್ವಮೇಧ ಕುದುರೆ ನಿಲ್ಲಿಸಿ ತೋರಿ​ಸಲಿ: ಕಟೀಲ್‌ ಸವಾಲು

ನ್ಯಾಯಬೆಲೆ ಅಂಗಡಿಯಿಂದ 5 ಸಾವಿರ ಪಡೆದಿದ್ದಾರೆ: ಬಾಲಕೃಷ್ಣ ಶಾಸಕರಾಗಿದ್ದ ಅವಧಿಯಲ್ಲಿ 172 ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಹಣ ಪಡೆದಿದ್ದಾರೆ. ಪ್ರತಿ ತಿಂಗಳು ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯೇ ನನ್ನ ಬಳಿ ಬಂದು ಇದನ್ನು ಪ್ರತಿ ತಿಂಗಳು ಕೊಡಬೇಕಾ ಎಂದು ನನಗೆ ಕೇಳಿದರು. ನಾನು ಈ ರೀತಿ ಹಣ ಬೇಡ ಎಂದು ವಾಪಸ್ಸು ಕಳಿಸಿದ್ದೇನೆ. ಮಾಜಿ ಶಾಸಕರು ಎಷ್ಟುಹಣ ಲೂಟಿ ಹೊಡೆದಿದ್ದಾರೆ ಎಂಬುದು ಜನತೆಗೆ ಗೊತ್ತಾಗಲಿ ಎಂದರು.

click me!