ಅಲ್ಪಸಂಖ್ಯಾತರು JDS ನಂಬೋದಿಲ್ಲ: ಜಮೀರ್‌ ಅಹಮದ್‌

By Kannadaprabha NewsFirst Published Nov 4, 2021, 11:33 AM IST
Highlights

*  ಕುಮಾರಸ್ವಾಮಿ ತಪ್ಪಿಗೆ ದೇವೇಗೌಡರು ಕಷ್ಟಪಡುವಂತಾಯಿತು
*  ಸೂಟ್‌ಕೇಸ್‌ ಬರದ್ದಕ್ಕೆ ಎಚ್‌ಡಿಕೆ ಹಾನ್‌ಗಲ್‌ ಪ್ರಚಾರಕ್ಕೆ ಹೋಗಿಲ್ಲ
*  ಕಾರ್ಯಕರ್ತರ ವಿಶ್ವಾಸಕ್ಕೆ ಪಡೆಯದ್ದಕ್ಕೆ ಮನಗೂಳಿ ಸೋತರು
 

ಬೆಂಗಳೂರು(ನ.04):  ಸಿಂದಗಿಯಲ್ಲಿ(Sindagi) ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅಶೋಕ್‌ ಮನಗೂಳಿ(Ashok Managuli) ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸೋಲಿಗೆ ಕಾರಣ. ಉಳಿದಂತೆ ಎರಡೂ ಕಡೆ ಜೆಡಿಎಸ್‌ಗೆ(JDS) ಠೇವಣಿ ಕಳೆಯುವ ಮೂಲಕ ಅಲ್ಪಸಂಖ್ಯಾತರು(Minorities) ಆ ಪಕ್ಷವನ್ನು ನಂಬುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌(Zameer Ahmed Khan) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್‌ನಲ್ಲಿ(Hanagal) ಕಾಂಗ್ರೆಸ್‌(Congress) ಜಯಭೇರಿ ಭಾರಿಸಿದೆ. ಸಿಂದಗಿಯಲ್ಲೂ ಕಳೆದ ಬಾರಿಗಿಂತ ಹೆಚ್ಚು ಮತ ಪಡೆದಿದೆ. ಅಶೋಕ್‌ ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ಎಂಬುದು ಪ್ರಚಾರದಲ್ಲೇ(Campaign) ಗಮನಕ್ಕೆ ಬಂದಿತ್ತು. ಇನ್ನು ಅಲ್ಪಸಂಖ್ಯಾತ ಮತಗಳ(Vote) ವಿಭಜನೆ ಮೂಲಓ ಬಿಜೆಪಿಗ(BJP) ನೆರವಾಗಲು ಯತ್ನಿಸಿದ ಜೆಡಿಎಸ್‌ಗೆ ಜನರು ಎರಡೂ ಕಡೆ ಠೇವಣಿ ಕಳೆದಿದ್ದಾರೆ. ವಿಪರ್ಯಾಸ ಎಂದರೆ ಹಾನಗಲ್‌ನಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಕಡಿಮೆ ಮತ ಪಡೆಯುವ ಮೂಲಕ ಹೀನಾಯ ಸೋಲು ಕಂಡಿದೆ ಎಂದು ಹೇಳಿದರು.

ಇದರಿಂದಾಗಿ ಜೆಡಿ​ಎಸ್‌ ಧೃತಿ​ಗೆ​ಡು​ವು​ದಿಲ್ಲ : ಪಕ್ಷದ ಮೇಲೆ ಯಾವುದೇ ಪರಿಣಾಮ ಇಲ್ಲ

ಬಸವಕಲ್ಯಾಣದಲ್ಲಿ ಮುಸ್ಲಿಂ(Muslim) ಧರ್ಮಗುರುಗಳನ್ನು ಕಣಕ್ಕಿಳಿಸಿ ಸಮುದಾಯದ ಮತ ಛಿದ್ರಗೊಳಿಸಿ ಬಿಜೆಪಿ ಗೆಲುವಿಗೆ ಜೆಡಿಎಸ್‌ ಸಹಕರಿಸಿತ್ತು. ಇದರಿಂದ ಅಲ್ಪಸಂಖ್ಯಾತರು ಜೆಡಿಎಸ್‌ ಗುಣ ತಿಳಿದು ಪಾಠ ಕಲಿತಿದ್ದರು. ಹೀಗಾಗಿ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ(Byelection) ತಕ್ಕ ಪಾಠ ಕಲಿಸಿದ್ದಾರೆ. ನನ್ನ ರಾಜಕೀಯ(Politics) ಗುರುಗಳಾದ ಮಾಜಿ ಪ್ರಧಾನಮಂತ್ರಿ ದೇವೇಗೌಡರನ್ನೂ(HD Devegowda) ಹತ್ತು ದಿನದ ಕಾಲ ಅಲ್ಲೇ ವಾಸ್ತವ್ಯ ಹೂಡುವಂತೆ ಮಾಡಿದರು. ಕುಮಾರಸ್ವಾಮಿ(HD Kumaraswamy) ತಪ್ಪಿಗೆ ದೇವೇಗೌಡರು ಕಷ್ಟಪಡುವಂತಾಯಿತು ಎಂದು ಟೀಕಿಸಿದರು.

ಹಾನಗಲ್‌ನಿಂದ ಎಚ್‌ಡಿಕೆಗೆ ಸೂಟ್‌ಕೇಸ್‌ ಹೋಗಿಲ್ಲ:

ಸಿಂದಗಿಯಲ್ಲಿ ಮೊದಲ ದಿನದಿಂದ ಬೀಡುಬಿಟ್ಟಿದ್ದ ಎಚ್‌.ಡಿ. ಕುಮಾರಸ್ವಾಮಿ ಹಾನಗಲ್‌ ಕ್ಷೇತ್ರಕ್ಕೆ ಅರ್ಧ ದಿನ ಮಾತ್ರ ಹೋಗಿ ಪ್ರಚಾರ ಮಾಡಿದ್ದಾರೆ. ಹಾನಗಲ್‌ನಲ್ಲಿ ಕುಮಾರಸ್ವಾಮಿ ಅವರಿಗೆ ಸೂಟ್‌ಕೇಸ್‌ ಸಿಕ್ಕಿಲ್ಲ. ಹೀಗಾಗಿ ಪ್ರಚಾರಕ್ಕೆ ಹೋಗಿಲ್ಲ ಎಂದು ದೂರಿದರು. ಮುಂದಿನ ದಿನಗಳಲ್ಲಿ ಜೆಡಿಎಸ್‌ಗೆ ಯಾವುದೇ ಭವಿಷ್ಯ ಇಲ್ಲ ಎನ್ನುವುದನ್ನು ಈ ಫಲಿತಾಂಶದ ಮೂಲಕ ಅರ್ಥ ಮಾಡಿಕೊಳ್ಳಬೇಕು. ಅತ್ಯಂತ ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯ ಈ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ರೂ ಸಾವಿರ ಮತ ಗಳಿಸಲಿಲ್ಲ ಜೆಡಿಎಸ್‌

ಬಹಳಷ್ಟು ಪ್ರಯತ್ನ, ಪ್ರಚಾರ ಮಾಡಿಯೂ ಮತ ಪಡೆಯೋಕೆ ಜೆಡಿಎಸ್(JDS) ವಿಫಲವಾಗಿದೆ. ಗೌಡರು, ಮಕ್ಕಳು ಹಾಗೂ ಮೊಮ್ಮಕ್ಕಳು ಸಿಂದಗಿ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ ಸಾವಿರ ಮತವೂ ಬರದಿರುವುದು ಅಚ್ಚರಿಗೆ ಕಾರಣವಾಗಿದೆ.

ನಮ್ಮ ಹೇಳಿಕೆಗಳಿಂದ ಬೇಸರವಾಗಿದ್ರೆ ಕ್ಷಮೆ ಕೇಳ್ತಿನಿ: ಡಿಕೆಶಿ ಮಾತಿನ ಅರ್ಥ ನಿಗೂಢ!

ಉಪಚುನಾವಣೆಯಲ್ಲಿ(Election) ಮುಸ್ಲಿಂ ಅಸ್ತ್ರ ಪ್ರಯೋಗಿಸಿದ್ದ ದಳಪತಿಗಳು ಮತಗಳನ್ನು ಸೆಳೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಅದೇ ಸಮುದಾಯದ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ದರು. ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳೆರಡಲ್ಲೂ ಮುಸ್ಲಿಂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದ ದಳಪತಿಗಳು ಹಾಗಿದ್ದರೂ ಮತಗಳನ್ನು ಪಡೆಯೋಕೆ ವಿಫಲರಾಗಿದ್ದಾರೆ.

ಸಿಂದಗಿಯಲ್ಲಿ ನಾಜಿಯಾ ಅಂಗಡಿ ಹಾಗೂ ಹಾನಗಲ್ ನಲ್ಲಿ ನಿಯಾಜ್ ಶೇಖ್ ಗೆ ಟಿಕೆಟ್ ನೀಡಲಾಗಿತ್ತು. ಆದರೆ, ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಜೆಡಿಎಸ್ ಬೆನ್ನಿಗೆ ನಿಂತಿಲ್ಲ. ಜೆಡಿಎಸ್ ಪಕ್ಷ ಮುಸ್ಲಿಂ ಸಮುದಾಯದ ಪರವಾಗಿದೆ ಎಂದು ಒತ್ತಿ ಹೇಳಿದರೂ ನಿರೀಕ್ಷಿತ ಫಲ ದೊರೆತಿಲ್ಲ.

ಮುಂದಿನ ಸಾರ್ವತ್ರಿಕ ಚುನಾವಣೆಗೆ ಕನಿಷ್ಠ 20ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದ್ದು  ದಳಪತಿಗಳಿಂದ ಭರವಸೆ ಬಂದರೂ ಮುಸ್ಲಿಂ ಸಮುದಾಯ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಸವಕಲ್ಯಾಣ ಉಪಚುನಾವಣೆಯಲ್ಲಿ ಬರೋಬ್ಬರಿ 11 ಸಾವಿರ ಮತಗಳನ್ನ ಪಡೆದಿದ್ದ ಮುಸ್ಲಿಂ ಅಭ್ಯರ್ಥಿ ಆದರೆ, ಈ ಬಾರಿಯ ಉಪಚುನಾವಣೆಯಲ್ಲಿ ಈ ಲೆಕ್ಕಾಚಾರ ವರ್ಕೌಟ್ ಆಗಿಲ್ಲ.
 

click me!