
ಹೊಸಪೇಟೆ(ಆ.10): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿರುವ ಪೆನ್‌ಡ್ರೈವ್ ಎಂಬುದು ಬುಟ್ಟಿಯೊಳಗಿನ ಹಾವು ಇದ್ದಂತೆ. ಬರಿ ಬುಸ್ ಬುಸ್ ಎನ್ನುತ್ತದೆ. ಹೊರಗೆ ಬರುವುದಿಲ್ಲ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಲೇವಡಿ ಮಾಡಿದರು.
ಕುಮಾರಸ್ವಾಮಿ ಬಳಿ ಪೆನ್‌ಡ್ರೈವ್ ಇದ್ದಿದ್ದರೆ ಇಷ್ಟು ದಿನ ಯಾಕೆ ಬಿಡಲಿಲ್ಲ? ಬುಟ್ಟಿಯೊಳಗೆ ಹಾವಿದೆ ಎಂದು ಭಯ ಬೀಳಿಸುವುದಕ್ಕೆ ಈ ರೀತಿ ಹೇಳುತ್ತಿದ್ದಾರಷ್ಟೆ. ಇದು ಮುಗಿದ ವಿಷಯ. ಕುಮಾರಸ್ವಾಮಿ ಬುಟ್ಟಿಯೊಳಗೆ ಹಾವಿಲ್ಲ, ಆದರೆ, ಹಾವಿದೆ ಎನ್ನುತ್ತಿದ್ದಾರೆ ಎಂದರು.
ಕುಮಾರಸ್ವಾಮಿಯನ್ನು ಹಾವಾಡಿಗರಿಗೆ ಹೋಲಿಸಿದ ಸಚಿವ ಕೆ.ಎನ್. ರಾಜಣ್ಣ: ಜೇಬಲ್ಲಿರೋದನ್ನ ಆಚೆ ಬಿಡಿ
ಹಾಗೇ ಕೃಷಿ ಸಚಿವರ ವಿರುದ್ಧ ಕೆಲ ವ್ಯಕ್ತಿಗಳು ನಕಲಿ ಪತ್ರ ವೈರಲ್ ಮಾಡಿದ್ದಾರೆ. ಯಾರ ಹೆಸರಿನಲ್ಲಿ ಪತ್ರ ವೈರಲ್ ಆಗಿದೆಯೋ ಆ ಅಧಿಕಾರಿಗಳೇ ಈಗ ಆ ಪತ್ರ ನಾವು ಬರೆದಿಲ್ಲ ಅನ್ನುತ್ತಿದ್ದಾರೆ. ಅದರ ಬಗ್ಗೆ ಅಧಿಕಾರಿಗಳು ರೀ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಇನ್ನು, ಈ ಪ್ರಕರಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಪಾತ್ರ ಇಲ್ಲಾ ಬಿಡಿ ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.