ಇವರು ಗೆಲುವಿನ ಸರದಾರ : ಉಸ್ತುವಾರಿ ಹೊತ್ತಲ್ಲಿ ಸೋಲೇ ಇಲ್ಲ

By Kannadaprabha NewsFirst Published May 3, 2021, 10:16 AM IST
Highlights

ಬಿಜೆಪಿಯ ಈ ಮುಖಂಡ ಉಸ್ತುವಾರಿ ವಹಿಸಿಕೊಂಡ ಕ್ಷೇತ್ರಗಳಲ್ಲಿ ಎಂದಿಗೂ ಸೋತಿಲ್ಲ. ಕಳೆದ ಅನೇಕ ವರ್ಷಗಳ ಕಾಲ ಬಿಜೆಪಿ ಗುರುತೇ ಇಲ್ಲದ ಕ್ಷೇತ್ರ ಸಬವಕಲ್ಯಾಣದಲ್ಲಿ ಬಿಜೆಪಿ ಗೆಲ್ಲು ಇವರ ತಂತ್ರಗಾರಿಕೆಯೇ ಪ್ರಮುಖ ಕಾರಣವಾಗಿದೆ. 

ಬೆಂಗಳೂರು (ಮೇ.03):  ಉಪಚುನಾವಣೆಗಳನ್ನು ನಡೆಸುವುದರಲ್ಲಿ ನಿಪುಣರಾಗಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಇದುವರೆಗೆ ಉಸ್ತುವಾರಿಯಾಗಿ ನಿಭಾಯಿಸಿದ ಎಲ್ಲ ಉಪಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು ಗಮನಾರ್ಹ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಅವರು 2010ರಲ್ಲಿ ಎದುರಾದ ಕಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ, 2011ರಲ್ಲಿ ಎದುರಾದ ಕೊಪ್ಪಳ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದರು. ಬಳಿಕ 2016ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೂ ಆಗ ನಡೆದ ದೇವದುರ್ಗ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಹೊತ್ತು ಜಯ ಗಳಿಸುವಂತೆ ನೋಡಿದರು.

Latest Videos

ಪ್ರಬಲ ಮುಖಂಡ ಮಂಗಳಾ ಜಯದ ಹಿಂದೆ ಇದ್ದಿದ್ದು ಇವರ ತಂತ್ರಗಾರಿಕೆ

ಮುಂದೆ 2019ರಲ್ಲಿ ನಡೆದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಸೋಮಣ್ಣ ಉಸ್ತುವಾರಿ ಗೆಲುವಿಗೆ ಕಾರಣವಾಗಿತ್ತು. ಅದೇ ವರ್ಷ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಸೋಲುಣಿಸಿ ಬಿಜೆಪಿಯ ಜಿ.ಎಸ್‌.ಬಸವರಾಜು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸೋಮಣ್ಣ.

ಬಸವಕಲ್ಯಾಣ ಬೈಎಲೆಕ್ಷನ್‌: ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಪ್ರಚಂಡ ಗೆಲುವು

ಇದೀಗ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲೂ ಉಸ್ತುವಾರಿ ಹೊತ್ತು ಪಕ್ಷದ ಗೆಲುವಿಗೆ ಕಾರಣರಾಗಿದ್ದಾರೆ. ಕ್ಷೇತ್ರದ ಇತರ ಉಸ್ತುವಾರಿಗಳಾಗಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸ್ಥಳೀಯ ಸಂಸದ ಭಗವಂತ ಖೂಬಾ ಅವರೊಂದಿಗೆ ರಣತಂತ್ರ ರೂಪಿಸಿದ ಸೋಮಣ್ಣ ಅವರು ಕಾಂಗ್ರೆಸ್‌ ಅಭ್ಯರ್ಥಿಯ ಅನುಕಂಪದ ಅಲೆ ಹಾಗೂ ಪಕ್ಷದ ಬಂಡಾಯ ಅಭ್ಯರ್ಥಿ ಅಬ್ಬರ ಮೀರಿ ಬಿಜೆಪಿಗೆ ಗೆಲುವು ತಂದು ಕೊಡುವಲ್ಲಿ ಶ್ರಮಿಸಿದರು ಪಕ್ಷದ ಮೂಲಗಳು ತಿಳಿಸಿವೆ.

click me!