ಪ್ರಬಲ ಮುಖಂಡ ಮಂಗಳಾ ಜಯದ ಹಿಂದೆ ಇದ್ದಿದ್ದು ಇವರ ತಂತ್ರಗಾರಿಕೆ

Kannadaprabha News   | Asianet News
Published : May 03, 2021, 09:04 AM IST
ಪ್ರಬಲ ಮುಖಂಡ ಮಂಗಳಾ ಜಯದ ಹಿಂದೆ ಇದ್ದಿದ್ದು ಇವರ  ತಂತ್ರಗಾರಿಕೆ

ಸಾರಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಜಯಗಳಿಸಿದ್ದಾರೆ. ಪ್ರಬಲ ಪೈಪೋಟಿ ನಡುವೆ ರೋಚಕ ಜಯಗಳಿಸಿದ್ದು ಈ ಜಯದ ಹಿಂದೆ ಇದ್ದಿದ್ದು ಸಚಿವ ಜಗದೀಶ್ ಶೆಟ್ಟರ್. 

ಬೆಂಗಳೂರು (ಮೇ.03):  ಟಿ-20 ಕ್ರಿಕೆಟ್‌ ಮ್ಯಾಚ್‌ನಂತೆಯೇ ಉಸಿರು ಬಿಗಿಹಿಡಿದು ಫಲಿತಾಂಶಕ್ಕೆ ಕಾಯುವಂತೆ ಮಾಡಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ರೋಚಕ ಜಯದ ಹಿಂದೆ ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ತಂತ್ರಗಾರಿಕೆ ಭಾಗವಾಗಿ ಹೆಣೆದ ರಾಜಕೀಯ ಸಮೀಕರಣ ಯಶಸ್ವಿ ಕಂಡಿದೆ.

ಮಂಗಲಾ ಅಂಗಡಿ ಅವರಿಗೆ ಟಿಕೆಟ್‌ ಸಿಗುವಂತೆ ನೋಡಿಕೊಂಡಿದ್ದಲ್ಲದೆ ಚುನಾವಣೆ ಘೋಷಣೆಯಾದ ದಿನದಿಂದ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದ ಸಚಿವ ಶೆಟ್ಟರ್‌, ಕ್ಷೇತ್ರದ ಬಿಜೆಪಿ ಜನಪ್ರತಿನಿಧಿಗಳನ್ನು ಒಗ್ಗೂಡಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುವಲ್ಲಿ ಯಶಸ್ವಿಯಾದರು. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರಕರಣ ಚುನಾವಣೆಯ ಮೇಲೆ ಪ್ರಭಾವ ಬೀರದಂತೆ ಮತ್ತಷ್ಟುರಾಜಕೀಯ ತಂತ್ರಗಾರಿಕೆಯನ್ನು ಹೆಣೆದರು. ಅರಭಾವಿ ಕ್ಷೇತ್ರದಲ್ಲಿ ಮತ ವಿಭಜನೆಯಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಾರಕಿಹೊಳಿ ಸಹೋದರರನ್ನು ಜೊತೆಯಾಗಿಟ್ಟುಕೊಂಡು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹೋಗದಂತೆ ತಡೆಯುವಲ್ಲಿಯೂ ಸಫಲರಾದರು.

ಸ್ಥಳೀಯ ಸಂಸ್ಥೆ ಬಳಿಕ ಬಿಜೆಪಿಗೆ ಮತ್ತೆ ಎಚ್ಚರಿಕೆ ಗಂಟೆ ...

ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಎಲ್ಲ ಮುಖಂಡರನ್ನೂ ಒಗ್ಗಟ್ಟಿನಿಂದ ಶ್ರಮಿಸುವಂತೆ ನೋಡಿಕೊಂಡ ಶೆಟ್ಟರ್‌ ರಾಜ್ಯದ ಪ್ರತಿಯೊಬ್ಬ ಪ್ರಮುಖ ನಾಯಕರಿಂದ ಪ್ರಚಾರ ಮಾಡಿಸುವಲ್ಲಿ ಯಶಸ್ವಿಯಾದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎರಡು ಬಾರಿ ಪ್ರಚಾರಕ್ಕೆ ಕರೆಸಿಕೊಳ್ಳುವ ಮೂಲಕ ಕ್ಷೇತ್ರದ ಲಿಂಗಾಯತ ಮತಗಳನ್ನು ಸೆಳೆಯುವ ಕಾರ್ಯ ಮಾಡಿದರು.

ಬೆಳಗಾವಿ ಫೈಟ್‌ನಲ್ಲಿ ಕೊನೆಗೂ ಗೆದ್ದು ಬೀಗಿದ ಬಿಜೆಪಿಯ ಮಂಗಳ ಅಂಗಡಿ

ಕ್ಷೇತ್ರದ ಮತ್ತು ಬೆಳಗಾವಿ ಉಸ್ತುವಾರಿಯಾಗಿದ್ದ ವೇಳೆ ಸುರೇಶ್‌ ಅಂಗಡಿ ಮಾರ್ಗದಲ್ಲಿಯೇ ನಡೆದಿದ್ದು, ಒಗ್ಗಟ್ಟಿನ ಸೂತ್ರವನ್ನು ಹೆಣೆದರು. ಯಾವ ನಾಯಕರೂ, ಯಾವ ಹಂತದಲ್ಲಿದಲ್ಲಿಯೂ ಮುನಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿದರು. ಆ ಮೂಲಕ ರೋಚಕ ವಿಜಯಕ್ಕೆ ಕಾರಣರಾಗಿದ್ದಾರೆ. ಈ ಮೊದಲು ಅಥಣಿ ಮತ್ತು ಕಾಗವಾಡ ಉಪಚುನಾವಣೆಯ ಉಸ್ತುವಾರಿ ವಹಿಸಿದ್ದ ಜಗದೀಶ್‌ ಶೆಟ್ಟರ್‌, ಲಿಂಗಾಯತ ಸಮುದಾಯದ ಮತಗಳನ್ನು ಕೇಂದ್ರಿಕರಿಸುವ ಮೂಲಕ ಆ ಎರಡೂ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮಾತ್ರವಲ್ಲ, ಎರಡೂವರೆ ಲಕ್ಷ ಮತಗಳಿಂದ ಉಪಚುನಾವಣೆಯಲ್ಲಿ ಸೋಲನುಭವಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಹೊಸ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಸಿಎಂ ಏನಾದ್ರು ಹೇಳಲಿ ಎಂದು ಸ್ಫೋಟಕ ಭವಿಷ್ಯವಾಣಿ ನುಡಿದ ಶಾಸಕ ಇಕ್ಬಾಲ್ ಹುಸೇನ್
Karnataka News Live: ಡಿಸಿಎಂ ಏನಾದ್ರು ಹೇಳಲಿ ಎಂದು ಸ್ಫೋಟಕ ಭವಿಷ್ಯವಾಣಿ ನುಡಿದ ಶಾಸಕ ಇಕ್ಬಾಲ್ ಹುಸೇನ್