'ಮರಾಠಿಗರನ್ನು ಕನ್ನಡಿಗರ ಜತೆಗೆ ಮುಖ್ಯವಾಹಿನಿಗೆ ತರಲು ಪ್ರಾಧಿಕಾರ ರಚನೆ'

By Suvarna NewsFirst Published Nov 17, 2020, 4:01 PM IST
Highlights

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ರಾಜ್ಯ ಸರ್ಕಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದ್ರೆ ವಸತಿ ಸಚಿವ ವಿ.ಸೋಮಣ್ಣ, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಯಚೂರು, (ನ.17) : ಮರಾಠಿಗರನ್ನು ಸಹ ಕನ್ನಡಿಗರ ಜತೆಗೆ ಮುಖ್ಯವಾಹಿನಿಗೆ ತರಲು ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಸತಿ ಸಚಿವ ವಿ.ಸೋಮಣ್ಣ ಅವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಸಮರ್ಥಿಸಿಕೊಂಡರು.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪಿಸಿರೋದು ಮರಾಠಿಗರ ಅಭಿವೃದ್ದಿಗೆ ಅಲ್ಲ. ಮರಾಠಿಗರನ್ನು ಸಹ ಕನ್ನಡಿಗರ ಜತೆಗೆ ಮುಖ್ಯವಾಹಿನಿಗೆ ತರಲು ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಶಾಸಕನ ನೇತೃತ್ವದಲ್ಲಿ ಸಂಭ್ರಮಾಚರಣೆ, ಮತ್ತೊಂದು ಬೇಡಿಕೆ ಇಟ್ಟ ಮರಾಠಿಗರು..!

ಗಡಿನಾಡಲ್ಲಿ ವಾಸಿಸುವ ರಾಜ್ಯದ ಮರಾಠಿಗರಿಗಾಗಿ ಸ್ಥಾಪನೆ ಮಾಡಲಾಗಿದೆ. ಮರಾಠಿಗರು ವಾಸಿಸುವ ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಅಭಿವೃದ್ದಿಗೆ 50 ಕೋಟಿ ಮೀಸಲಿಡಲಾಗಿದೆ. ಮರಾಠಿಗರಲ್ಲಿ ಇರುವ ನ್ಯೂನ್ಯತೆ ದೌರ್ಬಲ್ಯಗಳನ್ನ ಸರಿಪಡಿಸಲು‌ ಪ್ರಾಧಿಕಾರ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಮರಾಠಿಗರು ವಾಸಿಸುವ ಗಡಿನಾಡು ಕನ್ನಡ ಶಾಲೆಗಳ ಅಭಿವೃದ್ದಿಗೆ 50  ಕೋಟಿ ಮೀಸಲಿಡಲಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೂ ಸರ್ಕಾರ 50 ಕೋಟಿ ನೀಡಲಿ ಮೇಲಿನ ಮಾತಿಗೆ ಸಿಎಂಗೆ ಆಗ್ರಹಿಸಿದರು.

click me!