ಕರ್ನಾಟಕ ರಾಜ್ಯಸಭೆ ಎಲೆಕ್ಷನ್: ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಘೋಷಣೆ

By Suvarna NewsFirst Published Nov 17, 2020, 3:38 PM IST
Highlights

ಕರ್ನಾಟಕ ರಾಜ್ಯಸಭೆಯ ಒಂದು ಸ್ಥಾನಕ್ಕೆ ಬಿಜೆಪಿ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಯಾರೂ ಊಹಿಸದ ಹೆಸರನ್ನ ಪ್ರಕಟಿಸಿದ್ದು ಅಚ್ಚರಿಗೆ ಕಾರಣವಾಗಿದೆ.

ಬೆಂಗಳೂರು, (ನ.17): ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿದ್ದ ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದು,  ಮತ್ತೆ ಕಾರ್ಯಕರ್ತಗೆ ಮಣೆ ಹಾಕಿದೆ.

ಹೌದು....ಅಚ್ಚರಿ ಎಂಬಂತೆ ರಾಯಚೂರಿನ ಅಶೋಕ್ ಗಸ್ತಿ ಅವರಿಗೆ ರಾಜಸಭಾ ಸ್ಥಾನ ನೀಡಲಾಗಿತ್ತು. ಇದೀಗ ರಾಜ್ಯಸಭಾ ಉಪಚುನಾವಣೆಗೆ ಮಂಗಳೂರಿನ ಡಾ.ಕೆ.ನಾರಾಯಣ್ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ.

ಬೈ ಎಲೆಕ್ಷನ್: ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ 3 ಹೆಸರು ಶಿಫಾರಸು..!

ಆರ್ ಎಸ್ ಎಸ್ ಬ್ಯಾಕ್ ಗ್ರೌಂಡ್ ಇರುವ ಮಂಗಳೂರು ಮೂಲದ ಡಾ. ಕೆ ನಾರಾಯಣ್ ಅವರು ದೇವಾಂಗ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರಿಟಿಂಗ್ ಕಂಪನಿ span print ಓನರ್ ಆಗಿದ್ದಾರೆ. ಅಲ್ಲದೇ ನಾರಾಯಣ್ ಅವರು ಲ್ಯಾಣ ನಿಧಿ, ವಿದ್ಯಾ ನಿಧಿ ಬ್ಯಾನರ್ ಅಡಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಾ ಬಂದಿದ್ದಾರೆ.

ಮಾಜಿ ಎಂಎಲ್‌ಸಿ ಎನ್. ಶಂಕ್ರಪ್ಪ ಅಶೋಕ್ ಗಸ್ತಿ ಪತ್ನಿ ಉಮಾ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸುರಾನ ಅವರ ಹೆಸರು ಕೇಳಿಬಂದಿದ್ದವು. ರಾಜ್ಯ ಬಿಜೆಪಿ ಸಹ ಈ ಮೂವರ ಪಟ್ಟಿಯನ್ನ ಸಹ ಹೈಕಮಾಂಡ್‌ಗೆ ರವಾನಸಿತ್ತು. ಆದ್ರೆ, ಹೈಕಮಾಂಡ್ ರಾಜ್ಯ ಬಿಜೆಪಿ ಪಟ್ಟಿಯನ್ನು ತಿರಸ್ಕರಿಸಿದ್ದು, ತನ್ನ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದೆ. ಇದರಿಂದ ರಾಜ್ಯ ಬಿಜೆಪಿಗೆ ಮೊತ್ತೊಮ್ಮೆ ಹಿನ್ನಡೆಯಾದಂತಾಗಿದೆ.

ಅನಾರೋಗ್ಯದಿಂದ ಅಶೋಕ್ ಗಸ್ತಿ ಸಾವನ್ನಪಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಒಂದು ಸ್ಥಾನ ತೆರವಾಗಿದೆ. ಅದಕ್ಕೆ ಉಪಚುನಾವಣೆ ದಿನಾಂಕ ಸಹ ಪ್ರಕಟವಾಗಿದ್ದು, ಇದೇ ಡಿಸೆಂಬರ್‌ 1 ರಂದು ಮತದಾನ ನಡೆಯಲಿದೆ.

"

click me!