
ಬೆಂಗಳೂರು, (ಸೆ.09): ಮುಂದಿನ ವರ್ಷ ಜೂನ್ನಲ್ಲಿ 25 ಸಾವಿರ ಮನೆಗಳ ನಿರ್ಮಾಣ ಆಗಲಿದೆ. ಅರ್ಹ ಫಲಾನುಭವಿಗಳಿಗೆ ಮನೆ ಕೊಡುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಬುಧವಾರ ಹೇಳಿದ್ದಾರೆ.
ವಿಕಾಸಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಈ ಕೆಲಸವನ್ನ ಮಾಡಿಯೇ ತೀರುತ್ತೇನೆ. ಜೂನ್ ಒಳಗೆ ಮನೆ ನೀಡದಿದ್ರೆ, ಮಂತ್ರಿಸ್ಥಾನ ಅಲ್ಲ, ನಾನು ರಾಜಕಾರಣ ಬಿಟ್ಟು ಹೋಗುತ್ತೇನೆ. ಇದು ನನ್ನ ಸವಾಲು ಎಂದು ಖಡಕ್ ಆಗಿ ಹೇಳಿದರು.
ಶೀಘ್ರ 35 ಸಾವಿರ ಮನೆ ಫಲಾನುಭವಿಗಳಿಗೆ ಹಸ್ತಾಂತರ: ಸೋಮಣ್ಣ
2016ರಿಂದ ಇದುವರೆಗೂ ಒಂದೇ ಒಂದು ಮನೆ ಕಟ್ಟಿಲ್ಲ, ಈ ಬಗ್ಗೆ ನನ್ನ ಮನಸ್ಸಿಗೆ ತುಂಬಾ ನೋವಿದೆ. ವಿಚಾರವನ್ನ ನಾನು ಸೀರಿಯಾಸ್ಗೆ ತೆಗದುಕೊಂಡಿದ್ದೇನೆ ಎಂದರು.
ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಮೇಲೆ ಭ್ರಷ್ಟಾಚಾರ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ರಾಜ್ಯಕ್ಕೆ ಯಡಿಯೂರಪ್ಪರ 50 ವರ್ಷದ ಕೊಡುಗೆಯಿದೆ. ಸಿಎಂ ಮಗನಾಗೋಕೆ ವಿಜಯೇಂದ್ರ ಅರ್ಜಿ ಹಾಕಿಕೊಂಡಿರಲಿಲ್ಲ, ಇಲ್ಲ-ಸಲ್ಲದ ಆರೋಪಗಳು ಮಾಡೋದು ಬೇಡ. ಅಧಿಕಾರದಲ್ಲಿ ಇದ್ದಾರೆ ಎಂದು ಕಲ್ಲು ಹೊಡೆಯುವ ಕೆಲಸ ಯಾರು ಮಾಡಬಾರದು. ನಾನು ಈ ಬಗ್ಗೆ ಏನು ಮಾತಾಡಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಕೈ ಮುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.