ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆ ನಡೆಸಲು ಆಯೋಗ ಹಸಿರು ನಿಶಾನೆ ತೋರಿದ್ದು, ಎಲೆಕ್ಷನ್‌ಗೆ ದಿನಾಂಕದ ಸುತ್ತೋಲೆಯನ್ನು ಹೊರಡಿಸಿದೆ.
ಬೆಂಗಳೂರು, (ಸೆ.08) ಕೊರೋನಾ ಭೀತಿ ಮಧ್ಯೆ ರಾಜ್ಯದ ಪ್ರಾಥಮಿಕ, ಮಾಧ್ಯಮಿಕ, ಫೆಡರಲ್ ಸಹಕಾರ ಸಂಘಗಳ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ದಿನಾಂಕ 15-11-2020ರೊಳಗಾಗಿ ಚುನಾವಣೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ರಾಜ್ಯದ ಎಲ್ಲಾ ಪ್ರಾಥಮಿಕ, ಮಾಧ್ಯಮಕಿ ಹಾಗೂ ಫೆಡರಲ್ ಸಹಕಾರ ಸಂಘಗಳ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಮತ್ತೊಂದು ಚುನಾವಣೆ: ಮೀಸಲಾತಿ ಪ್ರಕಟ
ಈಗಾಗಲೇ ಸಹಕಾರ ಸಂಘಗಳ ಪದಾವಧಿ ಮುಗಿದಿದ್ದಲ್ಲಿ ಮತ್ತು ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿರುವಂತಹ ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆಗಳನ್ನು ದಿನಾಂಕ 13-07-2020ರಂದು ಯಾವ ಹಂತದಲ್ಲಿದ್ದವೋ ಆ ಹಂತದಿಂದ ಚುನಾವಣಾ ಪ್ರಕ್ರಿಯೆಗಳ್ನು ಮುಂದುವರೆಸಿ, ದಿನಾಂಕ 15-11-2020ರೊಳಗಾಗಿ ಚುನಾವಣೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ಇದರೊಂದಿಗೆ ರಾಜ್ಯದ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಹಾಗೂ ಫೆಡರಲ್ ಸಹಕಾರ ಸಂಘಗಳ ಆಡಳಿತ ಮಂಡಳಿ ಪದಾವದಿ ಮುಕ್ತಾಯಗೊಳ್ಳುವ ಸಂದರ್ಭಕ್ಕನುಗುಣವಾಗಿ ಪದಾವಧಿ ಮುಗಿಯುವ 15 ದಿನಕ್ಕೆ ಮುಂಚಿತವಾಗಿ ಚುನಾವಣೆಗಳನ್ನು ಪೂರ್ಣಗೊಳ್ಳಲಿದೆ.