'ಮಾಜಿ ಸಿಎಂ ಕುಮಾರಸ್ವಾಮಿ ಬಣ್ಣ ಬದಲಿಸುವ ಊಸರವಳ್ಳಿ'

By Kannadaprabha News  |  First Published Sep 9, 2020, 9:12 AM IST

ಸಮ್ಮಿಶ್ರ ಸರ್ಕಾರ ಉರುಳಿ ಒಂದು ವರ್ಷವಾಯಿತು. ಇಲ್ಲಿಯವರೆಗೆ ಕುಮಾರಸ್ವಾಮಿ ಸುಮ್ಮನಿದ್ದಿದ್ದು ಏಕೆ?| ಡ್ರಗ್ಸ್‌ ವಿಚಾರ ಸುದ್ದಿಯಲ್ಲಿರುವ ಈ ಸಮಯದಲ್ಲಿ ಅವರು ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ’ ಎಂದು ಪ್ರಶ್ನಿಸಿದ ಬಿ. ಸಿ. ಪಾಟೀಲ| 


ಮೈಸೂರು(ಸೆ.09): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ. 2 ಬಾರಿ ಮುಖ್ಯಮಂತ್ರಿಯಾಗಿದ್ದರೂ ಜವಾಬ್ದಾರಿಯಿಂದ ಮಾತನಾಡುವುದನ್ನು ಮಾತ್ರ ಕಲಿಯಲಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಟೀಕಿಸಿದ್ದಾರೆ. 

‘ಸಚಿವರು ಡ್ರಗ್‌ ಮಾಫಿಯಾ ಹಣದಿಂದ ಮೈತ್ರಿ ಸರ್ಕಾರ ಪತನವಾಯಿತು’ ಎಂಬ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ‘ಸರ್ಕಾರ ಉರುಳಿ ಒಂದು ವರ್ಷವಾಯಿತು. ಇಲ್ಲಿಯವರೆಗೆ ಕುಮಾರಸ್ವಾಮಿ ಸುಮ್ಮನಿದ್ದಿದ್ದು ಏಕೆ? ಡ್ರಗ್ಸ್‌ ವಿಚಾರ ಸುದ್ದಿಯಲ್ಲಿರುವ ಈ ಸಮಯದಲ್ಲಿ ಅವರು ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

'ನಿಜವಾದ ಊಸರವಳ್ಳಿ ನೀವೇ : ಕೃಷಿ ಸಚಿವ ಬಿ.ಸಿ. ಪಾಟೀಲ್‌ಗೆ ವಾರ್ನಿಂಗ್ '

ಮೈಸೂರಿನಲ್ಲಿ ಮಾತನಾಡಿದ ಸಚಿವರು, ನಾನು ಸುವಾರು 20 ವರ್ಷಗಳ ಕಾಲ ಸಿನಿಮಾ ರಂಗದಲ್ಲಿದ್ದೆ. ಆದರೆ, ಈ ರೀತಿಯ ಮಾಫಿಯಾ ಬಗ್ಗೆ ಕೇಳಿರಲಿಲ್ಲ. ಈಗ ಡ್ರಗ್ಸ್‌ ಎಂಬುದು ಸಿನಿಮಾರಂಗಕ್ಕೆ ಬಂದಿರುವುದು ದುರಾದೃಷ್ಠಕರ. ಸಮಾಜಕ್ಕೆ ರೋಲ್‌ ಮಾಡೆಲ್‌ಗಳಾಗಬೇಕಾದ ನಟ- ನಟಿಯರು ಇಂತಹ ಕೆಲಸದಲ್ಲಿ ಭಾಗಿಯಾಗುವುದರಿಂದ ಅವಮಾನ ಎದುರಿಸಬೇಕಾಗಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಜರುಗಿಸುವುದರಲ್ಲಿ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದರು.
 

click me!