ಸಿದ್ದುಗೆ ಸುಧಾಕರ್‌ ಕಂಡರೆ ಭಯ, ಕೋಲಾರದಲ್ಲಿ ಸಿದ್ದರಾಮಯ್ಯ ಸೋಲ್ತಾರೆ: ಎಸ್‌ಟಿಎಸ್‌

By Kannadaprabha News  |  First Published Jan 10, 2023, 12:56 PM IST

ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ಪ್ರಸ್ತುತ ಸುಧಾಕರ್‌ ಅವರ ಕೈಯಲ್ಲಿದೆ. ಸಚಿವ ಸುಧಾಕರ್‌ ಅವರು ಮನಸ್ಸು ಮಾಡಿದರೆ, ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಲಿದ್ದಾರೆ. ಸುಧಾಕರ್‌ ಅವರ ನಡೆ ಏನಿರಬಹುದು ಎಂಬ ಕಾರಣದಿಂದಲೇ ಸಿದ್ದರಾಮಯ್ಯನವರು ತಮ್ಮ ಸ್ಪರ್ಧೆಗೆ ಹೈಕಮಾಂಡ್‌ ಅನುಮತಿ ಬೇಕು ಎಂದಿದ್ದಾರೆ: ಎಸ್‌.ಟಿ.ಸೋಮಶೇಖರ್‌ 


ಚಿಕ್ಕಬಳ್ಳಾಪುರ(ಜ.10): ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಿದರೆ ಸೋಲುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಭವಿಷ್ಯ ನುಡಿದರು. 

ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ಪ್ರಸ್ತುತ ಸುಧಾಕರ್‌ ಅವರ ಕೈಯಲ್ಲಿದೆ. ಸಚಿವ ಸುಧಾಕರ್‌ ಅವರು ಮನಸ್ಸು ಮಾಡಿದರೆ, ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಲಿದ್ದಾರೆ. ಸುಧಾಕರ್‌ ಅವರ ನಡೆ ಏನಿರಬಹುದು ಎಂಬ ಕಾರಣದಿಂದಲೇ ಸಿದ್ದರಾಮಯ್ಯನವರು ತಮ್ಮ ಸ್ಪರ್ಧೆಗೆ ಹೈಕಮಾಂಡ್‌ ಅನುಮತಿ ಬೇಕು ಎಂದಿದ್ದಾರೆ. ಅವರಿಗೆ ಸ್ಪಷ್ಟತೆ ಇಲ್ಲ, ಹಾಗಾಗಿಯೇ ಬಾದಾಮಿ, ಚಾಮರಾಜಪೇಟೆ, ಕೊಪ್ಪಳ ಎಂದು ತಿರುಗಾಡಿದರು. ಈಗ ಅಂತಿಮವಾಗಿ ಕೋಲಾರವನ್ನು ಘೋಷಿಸಿ, ಹೈಕಮಾಂಡ್‌ ಮೇಲೆ ಹಾಕಿದ್ದಾರೆ ಎಂದು ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

Tap to resize

Latest Videos

CHIKKABALLAPUR UTSAV: ರಾಜ್ಯದ ಯಾವುದೇ ಶಾಸಕರು ಮಾಡದ ಸಾಹಸ ಸುಧಾಕರ್ ಮಾಡಿದ್ದಾರೆ: ಸಚಿವ ಸೋಮಶೇಖರ್

ಬಾಂಬೆ ಬಾಯ್ಸ್‌ಗಳನ್ನು ಎಚ್‌.ಡಿ. ಕುಮಾರಸ್ವಾಮಿ ಟಾರ್ಗೆಟ್‌ ಮಾಡುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಟಾರ್ಗೆಟ್‌ ಮಾಡಿದರೆ ಮಾಡಲಿ. ನಾವು ರಾಜಕಾರಣಕ್ಕೆ ಬಂದಾಗಲಿಂದ ನಮ್ಮನ್ನು ಟಾರ್ಗೆಟ್‌ ಮಾಡುತ್ತಲೇ ಇದ್ದಾರೆ. ಯಾರು ಸಾರ್ವಜನಿಕರ ಮಧ್ಯೆ ಕೆಲಸ ಮಾಡ್ತಾರೆ, ಯಾರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡ್ತಾರೆ ಅವರ ಮೇಲೆ ಅವರಿಗೆ ಕಣ್ಣಿರುತ್ತೆ ಎಂದರು.

click me!