ಕಾಂಗ್ರೆಸ್ಸಿಂದ ದೇಶದ ಆರ್ಥಿಕತೆ ಸದೃಢ: ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ

By Kannadaprabha News  |  First Published Aug 7, 2023, 10:23 PM IST

ಚುನಾವಣೆ ಪೂರ್ವದಲ್ಲಿ ನಾವು ಘೋಷಿಸಿದ್ದ ಐದೂ ಭರವಸೆ ಜಾರಿಗೊಳಿಸುತ್ತಿದ್ದು, ಅಧಿಕಾರಕ್ಕೆ ಬಂದು 9 ವರ್ಷವೇ ಕಳೆದರೂ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುತ್ತೇವೆಂದಿದ್ದ ಪ್ರಧಾನಿ ನರೇಂದ್ರ ಮೋದಿ ಹಣ ಹಾಕಿದ್ದಾರಾ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಬಿಜೆಪಿಗೆ ಪ್ರಶ್ನಿಸಿದ್ದಾರೆ. 
 


ದಾವಣಗೆರೆ (ಆ.07): ಚುನಾವಣೆ ಪೂರ್ವದಲ್ಲಿ ನಾವು ಘೋಷಿಸಿದ್ದ ಐದೂ ಭರವಸೆ ಜಾರಿಗೊಳಿಸುತ್ತಿದ್ದು, ಅಧಿಕಾರಕ್ಕೆ ಬಂದು 9 ವರ್ಷವೇ ಕಳೆದರೂ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುತ್ತೇವೆಂದಿದ್ದ ಪ್ರಧಾನಿ ನರೇಂದ್ರ ಮೋದಿ ಹಣ ಹಾಕಿದ್ದಾರಾ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಬಿಜೆಪಿಗೆ ಪ್ರಶ್ನಿಸಿದ್ದಾರೆ. 

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ ರಾಜ್ಯ ಸರ್ಕಾರ ಐದೂ ಗ್ಯಾರಂಟಿ ಯೋಜನೆ ಕಾರ್ಯ ರೂಪಕ್ಕೆ ತರುವ ಕೆಲಸ ನಾವು ಮಾಡಿಯೇ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಾನು ಭರವಸೆ ನೀಡುತ್ತಿದ್ದೇನೆ. ಶೂನ್ಯ ವಿದ್ಯುತ್‌ ಬಿಲ್‌ನ್ನು ನಾಲ್ವರಿಗೆ ಈಗ ಸಾಂಕೇತಿಕವಾಗಿ ನೀಡಿದ್ದೇವೆ. ಕಾಂಗ್ರೆಸ್‌ ದೇಶದಲ್ಲಿ ಅದು ಮಾಡಿಲ್ಲ, ಇದು ಮಾಡಿಲ್ಲವೆಂದು ಟೀಕಿಸುವವರು ಇಂದು ಬಡವರಿಗೆ ಸೂರು ಇದ್ದರೆ, ದೇಶದ ಆರ್ಥಿಕತೆ ಸದೃಢವಾಗಿದ್ದರೆ ಕಾಂಗ್ರೆಸ್‌ನಿಂದ ಎಂಬುದು ಮರೆಯದಿರಿ ಎಂದು ತಿಳಿಸಿದರು.

Tap to resize

Latest Videos

ಮಾನಸಿಕ ಅಸ್ವಸ್ಥ ಮುಸ್ಲಿಂ ಯುವತಿಯನ್ನು ಸ್ವೀಕರಿಸಲು ಒಪ್ಪದ ಕುಟುಂಬ: ಸೂಕ್ತ ಕ್ರಮಕ್ಕೆ ವಿಶು ಶೆಟ್ಟಿ ಆಗ್ರಹ

ಶಾಸಕರಾದ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹರಿಹರ ಬಿ.ಪಿ.ಹರೀಶ್‌, ಎಂ.ಪಿ.ಲತಾ ಮಲ್ಲಿಕಾರ್ಜುನ, ಮೇಯರ್‌ ವಿನಾಯಕ ಪೈಲ್ವಾನ್‌, ಬೆಸ್ಕಾಂ ಎಂಡಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಪಂ ಸಿಇಒ ಸುರೇಶ್‌ ಇಟ್ನಾಳ್‌, ಎಎಸ್ಪಿ ಆರ್‌.ಬಿ.ಬಸರಗಿ, ಮಾಜಿ ಶಾಸಕ ಎಸ್‌.ರಾಮಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಮಾಜಿ ಮೇಯರ್‌ ಅನಿತಾ ಬಾಯಿ ಮಾಲತೇಶ ಇತರರಿದ್ದರು.

ಅಚ್ಚುಕಟ್ಟು ರೈತರಿಗೆ ನೀರು ಕೊಟ್ಟೇ ಕೊಡುವೆವು: ಭದ್ರಾ ಡ್ಯಾಂನಿಂದ ನಾಲೆಗೆ ನೀರು ಬಿಡುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ ಜೊತೆಗೆ ಸಭೆ ನಡೆಸಿ, ನೀರು ಬಿಡಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ ಹೇಳಿದ್ದಾರೆ. ಅಚ್ಚುಕಟ್ಟು ರೈತರಿಗೆ ನಾವು ನೀರು ಕೊಟ್ಟೇ ಕೊಡುತ್ತೇವೆ. ರೈತರ ಬಗ್ಗೆ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಎಸ್ಸೆಸ್‌ ಮಲ್ಲಿಕಾರ್ಜುನ್‌ರಿಗೆ ಬದ್ಧತೆ ಇದೆ. ಸಿದ್ದರಾಮಯ್ಯನವರ ಯೋಜನೆ ಯಾವುದೂ ಹುಸಿಯಾಗಿಲ್ಲ. ಹಳೆ ಸಾಲಕ್ಕೆ ಸರ್ಕಾರದ ಅಕ್ಕಿ, ಗೃಹಲಕ್ಷ್ಮಿ ಹಣ ಕಡಿತ ಮಾಡದಂತೆ ಸಾಲದ ಲೆಕ್ಕಕ್ಕೆ ಜಮಾ ಮಾಡದಂತೆ ಜಿಲ್ಲಾಧಿಕಾರಿಯವರು ನೋಡಿಕೊಳ್ಳಬೇಕು ಎಂದು ಶಾಸಕ ಕೆ.ಎಸ್‌.ಬಸವಂತಪ್ಪ ಮನವಿ ಮಾಡಿದರು.

ಆಲಮಟ್ಟಿ ಡ್ಯಾಂ ಭರ್ತಿಗೆ ಒಂದೇ ದಿನ ಬಾಕಿ: ಸಿಎಂ ಬಾಗಿನ ಅರ್ಪಿಸುವ ಸಾಧ್ಯತೆ!

ಅನ್ನಭಾಗ್ಯದಡಿ ಅಕ್ಕಿ ಕಡಿತ ಮಾಡಿದ್ದು ಬಿಜೆಪಿ ಸರ್ಕಾರ. ಈಗ ನಮ್ಮ ಯೋಜನೆಗೆ ಅಕ್ಕಿ ಕೊಡದೇ ಇದ್ದುದೂ ಬಿಜೆಪಿ ಸರ್ಕಾರ. ಬಡವರಿಗೆ ಅಕ್ಕಿ ಕೊಡುವಂತೆ ಕೇಳಿದರೆ, ಕೇಂದ್ರ ನೀಡುವ ಅಕ್ಕಿ ಕಳಪೆಯಾಗಿರುತ್ತದೆ, ಮಧ್ಯವರ್ತಿಗಳು ತಿನ್ನುತ್ತಾರೆಂಬ ಕಾರಣಕ್ಕೆ ನೇರವಾಗಿ ಫಲಾನುಭವಿಗಳ ಖಾತೆಗೆ ಅಕ್ಕಿ ಹಣ ಜಮಾ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ 3 ತಿಂಗಳು ಅಕ್ಕಿ ಕೊಡಲಿಲ್ಲ. ಆದರೆ, ಅದೇ 3 ತಿಂಗಳ ಹಣವನ್ನು ನಾವು ಫಲಾನುಭವಿಗಳ ಖಾತೆಗೆ ಹಾಕುವ ಕೆಲಸ ಮಾಡುತ್ತಿದ್ದೇವೆ.
-ಎಸ್‌.ಎಸ್‌.ಮಲ್ಲಿಕಾರ್ಜುನ, ಗಣಿ, ಭೂವಿಜ್ಞಾನ, ತೋಟಗಾರಿಕೆ ಸಚಿವ

click me!