ಬಿಜೆಪಿಗರಿಗೆ ಕೆಲಸ ಇಲ್ಲ. ಈಗ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಕೇಂದ್ರದವರು ಅಕ್ಕಿ ಕೊಡಲಿಲ್ಲ. ಎಫ್‌ಎಸ್‌ಸಿ ಅವರು ಮೊದಲು ಅಕ್ಕಿ ಕೊಡ್ತೇನೆ ಅಂದ್ರು. ಆಮೇಲೆ ಇಲ್ಲ ಅಂದ್ರು. ಅದಕ್ಕೆ ನಾವು ಅಕ್ಕಿ ಬದಲಾಗಿ ದುಡ್ಡು ಕೊಡುತ್ತಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ: ಸಚಿವ ಎಸ್.ಸ್.ಮಲ್ಲಿಕಾರ್ಜುನ
ಬಾಗಲಕೋಟೆ(ಜು.02): ಕೆಲ ಬಿಜೆಪಿಗರು ಕಾಂಗ್ರೆಸ್‌ನ ಕದ ತಟ್ಟುತ್ತಿರಬಹುದು. ಆದರೆ, ನಮ್ಮಲ್ಲಿ ಜಾಗವಿಲ್ಲ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಕೆಲವು ಬಿಜೆಪಿಗರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾಜಿ ಸಚಿವ ರೇಣುಕಾಚಾರ್ಯ ಅಂಥವರಿಗೆ ನಮ್ಮಲ್ಲಿ ಜಾಗ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರ ಆಂತರಿಕ ಕಚ್ಚಾಟದ ಹಿನ್ನೆಲೆ ವ್ಯಂಗ್ಯವಾಡಿದ ಸಚಿವ ಎಸ್ಸೆಸ್ಸೆಂ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಧಿಕಾರದಲ್ಲಿ ಇದ್ದಾಗ ಒಂದು, ಇಲ್ಲದಿದ್ದಾಗ ಇನ್ನೊಂದು ರೀತಿ ಮಾತನಾಡುತ್ತಾರೆ, ವರ್ತಿಸುತ್ತಾರೆ. ಇಂಥವರಿಗೆ ನಮ್ಮ ಜಿಲ್ಲೆಯಲ್ಲಿಯೂ ಜಾಗವಿಲ್ಲ ಎಂದು ಹೇಳಿದರು.
undefined
ಮತ್ತೆ ರೆಬೆಲ್ ಆದ ರೇಣುಕಾಚಾರ್ಯ: ರಾಜ್ಯದ ಸ್ಥಿತಿಗತಿ ಬಗ್ಗೆ ವರಿಷ್ಠರಿಗೆ ಪತ್ರ ಬರೆಯುತ್ತೆನೆಂದ ಬಿಜೆಪಿಯ ಮಾಜಿ ಸಚಿವ
ಅಕ್ಕಿ ಬದಲು ದುಡ್ಡು ಕೊಡುವ ವಿಷಯ ಪ್ರಸ್ತಾಪಿಸಿದ ಸಚಿವರು, ಬಿಜೆಪಿಗರಿಗೆ ಕೆಲಸ ಇಲ್ಲ. ಈಗ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಕೇಂದ್ರದವರು ಅಕ್ಕಿ ಕೊಡಲಿಲ್ಲ. ಎಫ್‌ಎಸ್‌ಸಿ ಅವರು ಮೊದಲು ಅಕ್ಕಿ ಕೊಡ್ತೇನೆ ಅಂದ್ರು. ಆಮೇಲೆ ಇಲ್ಲ ಅಂದ್ರು. ಅದಕ್ಕೆ ನಾವು ಅಕ್ಕಿ ಬದಲಾಗಿ ದುಡ್ಡು ಕೊಡುತ್ತಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಕೊಟ್ಟಭರವಸೆಗಳನ್ನು ಈಡೇರಿಸುತ್ತೇವೆ. ಹಾಗಾಗಿ ನಾವು ಅಕ್ಕಿ ಬದಲಾಗಿ ದುಡ್ಡು ಕೊಡುತ್ತಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ತೋಟಗಾರಿಕೆ ವಿವಿ ಅವ್ಯವಹಾರ ತನಿಖಾ ವರದಿ ಬಂದ ಮೇಲೆ ಕ್ರಮ
ಬಾಗಲಕೋಟೆ ತೋಟಗಾರಿಕಾ ವಿವಿ ಹುದ್ದೆಗಳ ನೇಮಕಾತಿಯಲ್ಲಿ ಕೇಳಿಬಂದ ಅವ್ಯವಹಾರದ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತದೆ. ತನಿಖೆ ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸುತ್ತೇವೆ. ತೋಟಗಾರಿಕಾ ವಿವಿ ಕುಲಪತಿ ಕೆ.ಎಂ.ಇಂದಿರೇಶ ಅವರ ಮೇಲೆ ಅವ್ಯವಹಾರದ ಆರೋಪವಿರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಸಚಿವ ಎಸ್.ಸ್.ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದರು.