ಅಗ್ನಿಪಥ ಯೋಜನೆ, ಕಾಂಗ್ರೆಸ್ ಗೆ ಯಾಕೆ ಉರಿ..? : ಸಚಿವ ರಾಮುಲು ಪ್ರಶ್ನೆ

By Suvarna NewsFirst Published Jun 19, 2022, 9:17 PM IST
Highlights

* ಅಗ್ನಿಪಥ್ ಯೋಜನೆ ಬಗ್ಗೆ ಪರ-ವಿರೋಧ ಚರ್ಚೆ
* ಅಗ್ನಿಪಥ ಯೋಜನೆ, ಕಾಂಗ್ರೆಸ್ ಗೆ ಯಾಕೆ ಉರಿ..?
* ಕಾಂಗ್ರೆಸ್‌ಗೆ ಪ್ರಶ್ನಿಸಿದ ಸಚಿವ ರಾಮುಲು 

ಗದಗ, (ಜೂನ್.19): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ (ಜೂನ್ 14) ಅಗ್ನಿಪಥ್ ಯೋಜನೆಯನ್ನು ಘೋಷಿಸಿದ್ದಾರೆ. ಅಗ್ನಿಪಥ್ ಯೋಜನೆಯಡಿ ದೇಶದ ಯುವಕರಿಗೆ ಸೇನೆ ಸೇರುವ ಅವಕಾಶ ಸಿಗಲಿದೆ. ಆದ್ರೆ, ಇದಕ್ಕೆ ಪರ-ವಿರೋಧ ಚರ್ಚೆಗಳು ಜೋರಾಗಿವೆ. ಅಲ್ಲದೇ ಇದಕ್ಕೆ ವಿರೋಧಿಸಿ ಹಿಂಸಾಚಾರಗಳು ಸಹ ನಡೆದಿವೆ. 

ಇನ್ನು ಈ ಬಗ್ಗೆ ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಅಗ್ನಿಪಥ ಯೋಜನೆ ಜಾರಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರ ಸರಿಯಾಗಿದೆ. ಆದ್ರೆ ಈ ಯೋಜನೆಯನ್ನ ತಪ್ಪಾಗಿ ಅರ್ಥೈಸುವ ಮೂಲಕ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದರು.

Latest Videos

Left Right & Centre: ಏನಿದು ಅಗ್ನಿಪಥ ಯೋಜನೆ? ಯಾಕಿಷ್ಟು ವಿರೋಧ?

ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ ಇದೆ‌. ಇಸ್ರೇಲ್ ದೇಶದ ಪ್ರತಿಯೊಂದು ‌ಮನೆಯಲ್ಲಿ ಸೇನೆಗೆ ಸೇರಿದ ಯುವಕರಿರುತ್ತಾರೆ‌. 18 ವರ್ಷದ ಯುವಕರಿಗೆ ಆಸಕ್ತಿ ಇದ್ರೆ ನಾಲ್ಕು ವರ್ಷ ಸೇವೆ ಸಲ್ಲಿಸಬಹುದು ಎಂಬ ಯೋಜನೆ ಇದಾಗಿದೆ..  ಯುವಕರು ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಮಾಡಬಹುದು ಎಂದಾದರೇ ಕಾಂಗ್ರೆಸ್ ಗೆ ಯಾಕೆ ಇಷ್ಟೊಂದು ಉರಿ ಎಂದು ಪ್ರಶ್ನಿಸಿದ ರಾಮುಲು, ಪ್ರತಿಯೊಬ್ಬರಿಗೂ ದೇಶದ ಮೇಲೆ ಪ್ರೀತಿ, ಅಭಿಮಾನ, ಗೌರವ ಇರಬೇಕು. ಯುವಕರು ಸೇನೆ ಸೇರುವುದರಿಂದ ಅವರಲ್ಲಿ ದೇಶಪ್ರೇಮ.. ಬದುಕು ನಡೆಸುವ ಧೈರ್ಯ ಬರುತ್ತದೆ.. ಈ ಯೋಜನೆ ಮೂಲಕ ಯುವಕರನ್ನ ಶಕ್ತಗೊಳಿಸುವ ಕೆಲಸವನ್ನ ಸರ್ಕಾರ ಮಾಡುತ್ತಿದೆ ಎಂದು ರಾಮುಲು ಅಭಿಪ್ರಾಯಪಟ್ಟರು.. ಸರ್ಕಾರದ ಕೆಲಸವನ್ನ ಕಾಂಗ್ರೆಸ್ ಗೆ ಸಹಿಸೋಕೆ ಆಗ್ತಾಯಿಲ್ಲ.. ಯುವಕರಿಗೆ ದಿಕ್ಕು ತಪ್ಪಿಸುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ ಅಂತಾ ಹೇಳಿದ್ರು‌. 
 
ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ..
40% ಕಮಿಷನ್ ವಿಚಾರಕ್ಕೆ ಮೋದಿ ಮೌನ ವಹಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಮುಲು, ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿ.. ಬಿಜೆಪಿ ಸರ್ಕಾರ ಸಂಪೂರ್ಣ ಪಾರದರ್ಶಕ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡು ಈ ರೀತಿ ಆರೋಪ‌ಮಾಡುತ್ತಿದೆ ಎಂದು ಕಿಡಿಕಾರಿದ್ರು.. 

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಲಾಭಕ್ಕೆ ಆಗಮಿಸುತ್ತಿದ್ದಾರೆ ಅಂತಾ ಕಾಂಗ್ರೆಸ್ ಆರೋಪಿಸುತ್ತಿದೆ.. ರಾಜ್ಯದಲ್ಲಿ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗುತ್ತಿದ್ದಾರೆ.. ಅದು ರಾಜ್ಯಕ್ಕೆ ಶಕ್ತಿ ತುಂಬುವ ವಿಚಾರ.. ಇಂಥ ವಿಚಾರದಲ್ಲಿ ಕಾಂಗ್ರೆಸ್ ಈ ರೀತಿಯ ಟೀಕೆ ಮಾಡುವ ಕೆಲಸ ನೋಡಿ ನೈತಿಕ ದಿವಾಳಿತನ ತೋರಿಸುತ್ತಿದೆ. ಕಾಂಗ್ರೆಸ್  ಆಡಳಿತವಧಿಯ ಪ್ರಧಾನಿಗಳು ರಾಜ್ಯದ ಬಗ್ಗೆ ಕೇಳಿಲ್ಲ.. ಆದ್ರೆ ನಮ್ಮ ಪ್ರಧಾನಿಗಳು ರಾಜ್ಯದ ಬಗ್ಗೆ ಕಾಳಜಿ ಇದೆ ಅಂತಾ ಹೇಳಿದ್ರು.. 

ಇನ್ನು, ಈಡಿ ವಿಚಾರಕ್ಕೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾನೂನಿಗಿಂತ ರಾಹುಲ್ ಗಾಂಧಿ ದೊಡ್ಡವರಲ್ಲ. ತನಿಖೆ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಕುಟುಕಿದ್ರು..

click me!