ಕಾಂಗ್ರೆಸ್‌, ಜೆಡಿಎಸ್‌ನ 10-12 ಶಾಸ​ಕರು ಬಿಜೆ​ಪಿಗೆ ಶೀಘ್ರ: ಅಶೋಕ್‌

By Kannadaprabha News  |  First Published Jun 19, 2022, 5:30 AM IST

*  ಹಳೇ ಮೈಸೂರು ಭಾಗದ 10-12 ಶಾಸ​ಕರು ಬಿಜೆ​ಪಿಗೆ ಶೀಘ್ರ
*  ಮೊದಲ ಕಂತಿನಲ್ಲಿ ಕೆಲವಷ್ಟು ಮುಖಂಡರು ಬಂದಿದ್ದಾರೆ
*  ಇನ್ನೊಂದು ಕಂತಿನಲ್ಲಿ ಮತ್ತಷ್ಟು ಶಾಸಕರನ್ನು ಕರೆ ತರಲು ತಯಾರಿ ನಡೆಯುತ್ತಿದೆ


ತುಮ​ಕೂ​ರು(ಜೂ.19): ಹಳೇ ಮೈಸೂರು ಪ್ರಾಂತ್ಯದ ಕಾಂಗ್ರೆಸ್‌, ಜೆಡಿಎಸ್‌ನ 10 ರಿಂದ 12 ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿ​ಸಿ​ದ್ದಾ​ರೆ. 

ತುರು​ವೇ​ಕೆರೆ ತಾಲೂಕು ಮಾಯ​ಸಂದ್ರ​ದಲ್ಲಿ ಶನಿವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಈಗ ಶಕ್ತಿಶಾಲಿ ಆಗುತ್ತಿದ್ದು, ಈ ಭಾಗದ ಬಹಳಷ್ಟು ಜನ ಬಿಜೆಪಿಗೆ ಬರುತ್ತಿದ್ದಾರೆ ಎಂದರು.

Tap to resize

Latest Videos

TUMAKURU: ಆರ್. ಅಶೋಕ್ ಗ್ರಾಮ ವಾಸ್ತವ್ಯ: ಇಂದು - ನಾಳೆ ಸಾರ್ವಜನಿಕರ ಸಮಸ್ಯೆ ಆಲಿಸಲಿರುವ ಸಚಿವರು

ಮೊದಲ ಕಂತಿನಲ್ಲಿ ಕೆಲವಷ್ಟು ಮುಖಂಡರು ಬಂದಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಮಾಡುತ್ತಿದ್ದೇವೆ ಎಂದ ಅವರು, ಇನ್ನೊಂದು ಕಂತಿನಲ್ಲಿ ಮತ್ತಷ್ಟು ಶಾಸಕರನ್ನು ಕರೆ ತರಲು ತಯಾರಿ ನಡೆಯುತ್ತಿದೆ ಎಂದ​ರು. ರಾಜ್ಯಸಭಾ ಚುನಾವಣೆಯಲ್ಲಿ ಯಾರಾರ‍ಯರು ಯಾರಿಗೆ ಮತ ಹಾಕಿದ್ದಾರೆ ಅನ್ನೋದು ಗೊತ್ತು. ಇದು ಕೇವಲ ಟ್ರೈಲರ್‌ ಅಷ್ಟೇ, ಪಿಕ್ಚರ್‌ ಅಭಿ ಬಾಕಿ ಹೈ ಎಂದರು. ರಾಜ್ಯದಲ್ಲಿ ಮೋದಿ, ಬೊಮ್ಮಾಯಿ, ಯಡಿಯೂರಪ್ಪನವರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸುತ್ತದೆ ಎಂದು ಇದೇ ವೇಳೆ ತಿಳಿಸಿದರು.
 

click me!