ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದಾಕ್ಷಣ ಅಂತ ವ್ಯತ್ಯಾಸವೇನಾಗದು: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha News  |  First Published Nov 16, 2023, 7:43 AM IST

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ. ಮೊದಲಿನಿಂದಲೂ ಅವರ ಜತೆ ಹೆಚ್ಚಿನ ಲಿಂಗಾಯತರಿದ್ದಾರೆ. ಆದರೆ, ಮುಂದೆ ಲೋಕಸಭೆ ಚುನಾವಣೆಯಿದೆ. 


ಚಾಮರಾಜನಗರ (ನ.16): ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ. ಮೊದಲಿನಿಂದಲೂ ಅವರ ಜತೆ ಹೆಚ್ಚಿನ ಲಿಂಗಾಯತರಿದ್ದಾರೆ. ಆದರೆ, ಮುಂದೆ ಲೋಕಸಭೆ ಚುನಾವಣೆಯಿದೆ. ಅದಾದ ಬಳಿಕ ಹಲವಾರು ಸವಾಲುಗಳು ವಿಜಯೇಂದ್ರ ಮುಂದಿವೆ. ಅವರ ಪಕ್ಷ ಅವರಿಗೆ ಯಾವ ರೀತಿ ಸಹಕಾರ ನೀಡುತ್ತದೆ ಎಂಬುದನ್ನು ಕಾದು ನೋಡ ಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರ ಲಿಂಗಾಯತ ಮತಗಳನ್ನು ಸೆಳೆಯುತ್ತಾರೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

ಸಿಎಂ ಬದಲಾವಣೆಯಿಲ್ಲ: ಇನ್ನು,ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ‘ಅದೆಲ್ಲ ಮುಗಿದು ಹೋದ ಕಥೆ. ಪದೇ ಪದೇ ಹೇಳೋದೇನೂ ಇಲ್ಲ. ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎಂದು ಪರೋಕ್ಷವಾಗಿ ಹೇಳಿದರು.

Tap to resize

Latest Videos

undefined

3ನೇ ಬಾರಿ ಮೋದಿ ಪ್ರಧಾನಿಯಾಗಲು ಕುರುಡುಮಲೆ ಗಣಪತಿಗೆ ವಿಜಯೇಂದ್ರ ವಿಶೇಷ ಪೂಜೆ

ಚಾಮರಾಜನಗರ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದು ಎಚ್‌ಎಸ್‌ಎಂ: ಗುಂಡ್ಲುಪೇಟೆ ಕ್ಷೇತ್ರದ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದ ದಿವಂಗತ ಎಚ್.ಎಸ್.ಮಹದೇವಪ್ರಸಾದ್‌, ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸಚಿವ ಸತೀಶ್‌ ಜಾರಕಿಹೊಳಿ ಮೆಲಕು ಹಾಕಿದರು. ಪಟ್ಟಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಮಹದೇವಪ್ರಸಾದ್‌ ನನಗೂ ಆತ್ಮೀಯರಾಗಿದ್ದರು.ಅವರಲ್ಲಿ ಚಾಣಾಕ್ಷತೆ ಇತ್ತು. ಅಲ್ಲದೆ ಗುಂಡ್ಲುಪೇಟೆ ಕ್ಷೇತ್ರದ ಜೊತೆಗೆ ಜಿಲ್ಲೆಗೂ ಸಾಕಷ್ಟು ಸರ್ಕಾರದ ಯೋಜನೆ ತಂದಿದ್ದರು ಎಂದರು. 

ಚಾಮರಾಜನಗರ ಜಿಲ್ಲೆಯಲ್ಲಿ ಮಹದೇವಪ್ರಸಾದ್‌ ಕೆರೆಗೆ ಮೊದಲ ಬಾರಿಗೆ ನೀರು ಹರಿಸಿದ್ದರು. ಇದೊಂದು ಮೈಲಿಗಲ್ಲಾಗಿದೆ. ಹಾಗಾಗಿ ಮಹದೇವಪ್ರಸಾದ್‌ ಸದಾ ಜಿಲ್ಲೆಯ ಜನರ ನನಪಿನಲ್ಲಿರುತ್ತಾರೆ ಎಂದರು. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೂಡ ಮಹದೇವಪ್ರಸಾದ್‌ ದಾರಿಯಲ್ಲಿಯೇ ಕೆಲಸ ಮಾಡುತ್ತಿದ್ದು, ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಮಹದೇವಪ್ರಸಾದ್‌ ಹಾದಿಯಲ್ಲಿಯೇ ಗಣೇಶ್‌ ಪ್ರಸಾದ್‌ ಮುಂದುವರಿಯಬೇಕು ಎಂದರು.

ವಾಲ್ಮೀಕಿ ಭವನಕ್ಕೆ ಕಳೆದ ಅವಧಿಯಲ್ಲಿ ಅನುದಾನ ತಂದಿಲ್ಲ: ಪಟ್ಟಣದಲ್ಲಿನ ವಾಲ್ಮೀಕಿ ಭವನಕ್ಕೆ ಕಳೆದ ಅವಧಿಯ ಸರ್ಕಾರದಲ್ಲಿ ಅಂದಿನ ಶಾಸಕರು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಅತೀ ಶೀಘ್ರದಲ್ಲೇ ವಾಲ್ಮೀಕಿ ಭವನ ಉದ್ಘಾಟನೆಯಾಗಲಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಸಚಿವ ನಾಗೇಂದ್ರ ವಾಲ್ಮೀಕಿ ಭವನಕ್ಕೆ ಅನುದಾನ ನೀಡುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ವಾಲ್ಮೀಕಿ ಭವನ ಉದ್ಘಾಟನೆಯಾಗಲಿದೆ ಎಂದರು. 

ವಿಜಯೇಂದ್ರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭ: ಜೆ.ಪಿ.ನಡ್ಡಾ

ನಾಯಕ ಸಮಾಜದ ಜೊತೆ ನಾನಿರುತ್ತೇನೆ.ನೀವು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಸರ್ಕಾರ ಬಂದು ಐದು ತಿಂಗಳಾಗಿದೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಾನೂ ಕೂಡ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತರುತ್ತೇನೆ. ನಾನು ಬಸವತತ್ವದಡಿ ಕ್ಷೇತ್ರದ ಎಲ್ಲಾ ಸಮಾಜದೊಂದಿಗೆ ಇದ್ದು ಕೆಲಸ ಮಾಡುತ್ತೇನೆ. ನನ್ನ ತಂದೆ ಮಹದೇವಪ್ರಸಾದ್‌ ಹಾದಿಯಲ್ಲಿಯೇ ನಡೆದು ಕ್ಷೇತ್ರದ ಅಭಿವೃದ್ಧಿ ಪರ ನಿಲ್ಲುತ್ತೇನೆ ಎಂದರು.

click me!