ವಿಪಕ್ಷ ನಾಯಕನಾಗಲು ಏನೇನೋ ಮಾತನಾಡುತ್ತಿರುವ ಯತ್ನಾಳ್‌: ಸಚಿವ ತಿಮ್ಮಾಪೂರ

Published : Aug 16, 2023, 10:52 PM IST
ವಿಪಕ್ಷ ನಾಯಕನಾಗಲು ಏನೇನೋ ಮಾತನಾಡುತ್ತಿರುವ ಯತ್ನಾಳ್‌: ಸಚಿವ ತಿಮ್ಮಾಪೂರ

ಸಾರಾಂಶ

ಪಾಪ ಯತ್ನಾಳ ಏನೋ ಆಗಬೇಕು ಎಂದು ಕಷ್ಟಪಟ್ಟು ಏನೇನೋ ಗಿಮಿಕ್‌ ಮಾಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದರಿಂದ ನಮಗೇ ಅನುಕೂಲ ಆಗಲಿದೆ. ಹೀಗಾಗಿ, ಬಿಜೆಪಿ ಯತ್ನಾಳರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದ ಸಚಿವ ಆರ್‌.ಬಿ.ತಿಮ್ಮಾಪೂರ  

ಬಾಗಲಕೋಟೆ(ಆ.16):  ಯತ್ನಾಳ್‌ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಟ್ಟರೆ ಕಾಂಗ್ರೆಸ್‌ಗೆ ಇನ್ನಷ್ಟುಅನುಕೂಲ ಆಗುತ್ತದೆ. ಬಿಜೆಪಿಯವರು ಮೊದಲು ಆ ಕೆಲಸ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಲೇವಡಿ ಮಾಡಿದರು.

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಪಾಪ ಯತ್ನಾಳ ಏನೋ ಆಗಬೇಕು ಎಂದು ಕಷ್ಟಪಟ್ಟು ಏನೇನೋ ಗಿಮಿಕ್‌ ಮಾಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದರಿಂದ ನಮಗೇ ಅನುಕೂಲ ಆಗಲಿದೆ. ಹೀಗಾಗಿ, ಬಿಜೆಪಿ ಯತ್ನಾಳರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದರು.

ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

ಕಾಂಗ್ರೆಸ್‌ನಲ್ಲಿ ಯಾವ ಶಾಸಕರಲ್ಲೂ ಅಸಮಾಧಾನವಿಲ್ಲ. ಅದೆಲ್ಲ ಬಿಜೆಪಿಯ ಕಪೋಲಕಲ್ಪಿತ ವಿಚಾರ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ತಿಮ್ಮಾಪೂರ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು, ಕೇಳಲು, ಅವಕಾಶ ಇದೆ. ಭಿನ್ನಾಭಿಪ್ರಾಯಗಳು ಇವೆ ಎಂದಾದರೆ ಚರ್ಚೆ ಮಾಡಿ ಸರಿ ಮಾಡಿಕೊಳ್ಳುತ್ತೇವೆ. ಇಂಥ ಭಿನ್ನಾಭಿಪ್ರಾಯಗಳನ್ನೇ ದೊಡ್ಡದಾಗಿ ಬಿಂಬಿಸುವುದು ಬಿಜೆಪಿಯ ದಂಧೆ ಆಗಿದೆ. ಇದನ್ನೆಲ್ಲ ಅರಿತೇ ಜನರು ಬಿಜೆಪಿಯವರನ್ನು ಮನೆಗೆ ಕಳುಹಿಸಿದ್ದಾರೆ. ಆದರೆ, ಅ​ಧಿಕಾರದ ಹಪಾಹಪಿ ಹೊಂದಿರುವ ಬಿಜೆಪಿಗರು ಈಗ ಅಡ್ಡದಾರಿ ಹಿಡಿಯೋಣ, ಉದ್ದ ದಾರಿ ಹಿಡಿಯೋಣ, ಅಲ್ಲಿ ದುಡ್ಡು ತರೋಣ, ಇಲ್ಲಿ ದುಡ್ಡು ತರೋಣ ಎಂದು ಹುಚ್ಚು ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಆದರೆ, ಈ ಬಾರಿ ಅವರ ಆಟ ನಡೆಯುವುದಿಲ್ಲ ಎಂದು ತಿಮ್ಮಾಪೂರ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!