ದೇವೇಂದ್ರ ಫಡ್ನ​ವೀಸ್‌ ಜತೆ ಜಾರ​ಕಿ​ಹೊಳಿ: ಕುತೂ​ಹಲ ಕೆರ​ಳಿ​ಸಿದ ಉಭಯ ನಾಯಕರ ಭೇಟಿ

Kannadaprabha News   | Asianet News
Published : Oct 09, 2020, 11:31 AM IST
ದೇವೇಂದ್ರ ಫಡ್ನ​ವೀಸ್‌ ಜತೆ ಜಾರ​ಕಿ​ಹೊಳಿ: ಕುತೂ​ಹಲ ಕೆರ​ಳಿ​ಸಿದ ಉಭಯ ನಾಯಕರ ಭೇಟಿ

ಸಾರಾಂಶ

ಮಹಾರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಾತು​ಕ​ತೆ| ಶಿವ​ಸೇನೆ ಸರ್ಕಾರ ಕೆಳ​ಗಿ​ಳಿ​ಸುವ ಚರ್ಚೆ?| ರಮೇಶ್‌ ಜಾರಕಿಹೊಳಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಉತ್ತಮ ಸಂಪರ್ಕ| ಬಹಿರಂಗಗೊಳ್ಳದ ಮಾತುಕತೆಯ ವಿವರಗಳು| 

ಬೆಂಗಳೂರು(ಅ.09):  ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌ ಕರೆ ಮೇರೆಗೆ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಮುಂಬೈಗೆ ತೆರಳಿ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

ಗುರುವಾರ ದಿಢೀರನೆ ಮುಂಬೈಗೆ ತೆರಳಿದ ಜಾರಕಿಹೊಳಿ ಅವರು ಫಡ್ನವಿಸ್‌ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಇತ್ತೀಚೆಗಷ್ಟೇ ಜಾರಕಿಹೊಳಿ ಮತ್ತು ಫಡ್ನವಿಸ್‌ ಅವರ ಭೇಟಿ ನಡೆದಿತ್ತು. ಇದೀಗ ಎರಡನೆಯ ಬಾರಿ ಭೇಟಿ ಮಾಡಿದರು. ಮಾತುಕತೆ ವಿವರಗಳು ಬಹಿರಂಗಗೊಳ್ಳದಿದ್ದರೂ ಮಹಾರಾಷ್ಟ್ರದ ರಾಜಕಾರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ ಎನ್ನಲಾಗಿದೆ.

ದೇವೇಂದ್ರ ಫಡ್ನವಿಸ್ -ಜಾರಕಿಹೊಳಿ‌ ಭೇಟಿ: ಶಿವಸೇನಾ,ಕಾಂಗ್ರೆಸ್ ವಲಯದಲ್ಲಿ ನಡುಕ ಶುರು

ಬೆಳಗಾವಿ ಜಿಲ್ಲೆಯವರಾದ ರಮೇಶ್‌ ಜಾರಕಿಹೊಳಿ ಅವರಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಉತ್ತಮ ಸಂಪರ್ಕವಿದೆ. ಹೀಗಾಗಿ, ಅಲ್ಲಿ ಮುಂದಿನ ದಿನಗಳಲ್ಲಿ ಈಗಿರುವ ಶಿವಸೇನೆ-ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಪರ್ಯಾಯವಾಗಿ ಬಿಜೆಪಿ ಸರ್ಕಾರ ರಚಿಸುವ ಸಂಬಂಧ ಸಮಾಲೋಚನೆ ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ಪ್ರೆಗ್ನಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ - ಯುವತಿ ಆತ್ಮ*ಹತ್ಯೆ