Hijab Row: ಕಾಂಗ್ರೆಸ್‌ನಲ್ಲಿ ಸಿದ್ದು-ಡಿಕೆಶಿ ಮಧ್ಯೆ ಫೈಟ್: 'ಕೈ' ನಾಯಕರ ವಿರುದ್ಧ ಅಶೋಕ್‌ ವಾಗ್ದಾಳಿ

Suvarna News   | Asianet News
Published : Feb 19, 2022, 12:48 PM ISTUpdated : Feb 19, 2022, 12:56 PM IST
Hijab Row: ಕಾಂಗ್ರೆಸ್‌ನಲ್ಲಿ ಸಿದ್ದು-ಡಿಕೆಶಿ ಮಧ್ಯೆ ಫೈಟ್: 'ಕೈ' ನಾಯಕರ ವಿರುದ್ಧ ಅಶೋಕ್‌ ವಾಗ್ದಾಳಿ

ಸಾರಾಂಶ

*  ವಿದ್ಯಾರ್ಥಿಗಳ ಬಗ್ಗೆ ಕಾಂಗ್ರೆಸ್ಸಿಗರಿಗೆ ಕಾಳಜಿಯಿಲ್ಲ *  ಓಟ್ ಬ್ಯಾಂಕ್ ಎಲ್ಲಿ ಕೈ ತಪ್ಪುತ್ತೋ ಅನ್ನುವ ಭಯದಿಂದ ಕಾಂಗ್ರೆಸ್ ಮಾತನಾಡ್ತಿಲ್ಲ *  ಕಾಂಗ್ರೆಸ್ ನಾಯಕರು ಕೇಸರಿ ಶಾಲಿನ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಬೇಕು  

ಮಂಗಳೂರು(ಫೆ.19):  ಹಿಜಾಬ್(Hijab) ವಿಚಾರದಲ್ಲಿ ಕಾಂಗ್ರೆಸ್‌ನವರ ಸ್ಥಿತಿ ಹೇಗಾಗಿದೆ ಅಂದ್ರೆ ಊರಿಗೆ ಮನುಷ್ಯ ಅಲ್ಲ, ಸ್ಮಶಾನಕ್ಕೆ ಹೆಣಾನೂ ಅಲ್ಲ ಅಂತ ಆಗಿದೆ. ಹಿಜಾಬ್ ಪರ ಮಾತನಾಡಲು ಡಿ.ಕೆ.ಶಿವಕುಮಾರ್(DK Shivakumar) ಬಿಡುತ್ತಿಲ್ಲ. ಹಿಂದೂಗಳ ಪರ ಮಾತನಾಡಲು ಸಿದ್ದರಾಮಯ್ಯ(Siddaramaiah) ಬಿಡುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ v/s ಡಿ.ಕೆ.ಶಿವಕುಮಾರ್ ಮಧ್ಯೆ ಫೈಟ್ ನಡೀತಿದೆ ಅಂತ ಕಾಂಗ್ರೆಸ್‌ ನಾಯಕರ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್‌ ಹರಿಹಾಯ್ದಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಅಧಿವೇಶನ(Assembly Session) ನಡೆಯುತ್ತಿದೆ. ಆದ್ರೆ ಹಿಜಾಬ್ ಅಥವಾ ಕೇಸರಿ ಶಾಲಿನ ಬಗ್ಗೆ ಅವರು ಪ್ರಸ್ತಾಪಿಸಬೇಕಿತ್ತು. ಕಾಂಗ್ರೆಸ್(Congress) ನಾಯಕರು ಈವರೆಗೆ ಆ ವಿಚಾರವನ್ನ ಪ್ರಸ್ತಾಪಿಸಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ(Students) ಬಗ್ಗೆ ಕಾಂಗ್ರೆಸ್‌ನವರಿಗೆ ಕಾಳಜಿಯಿಲ್ಲ. ಓಟ್ ಬ್ಯಾಂಕ್(Vote Bank) ಎಲ್ಲಿ ಕೈ ತಪ್ಪುತ್ತೋ ಅನ್ನುವ ಭಯದಿಂದ ಕಾಂಗ್ರೆಸ್ ಮಾತನಾಡುತ್ತಿಲ್ಲ. ಅದಕ್ಕೆ ಸಚಿವ ಈಶ್ವರಪ್ಪ(KS Eshwarappa) ಅವರ ವಿಷಯವನ್ನ ಹಿಡಿದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಅಂತ ಕೈ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. 

Hijab Row: ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು: ಯದುವೀರ್‌

ಸದನಕ್ಕೆ ಹಾಜರಾಗಿ ಜನರ ದುಡ್ಡಿನಲ್ಲಿ ಟಿಎ, ಡಿಎ ಪಡೆದು ಜನರ ಸಮಸ್ಯೆಯನ್ನೇ ಚರ್ಚಿಸುತ್ತಿಲ್ಲ. ಕಾಂಗ್ರೆಸ್ ನಾಯಕರು ತಮ್ಮ ನಿಲುವನ್ನು ಹೇಳಬೇಕು. ಕಾಂಗ್ರೆಸ್ ನಾಯಕರು ಕೇಸರಿ ಶಾಲಿನ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಬೇಕು ಅಂತ ಸಚಿವ ಅಶೋಕ್‌ ಒತ್ತಾಯಿಸಿದ್ದಾರೆ. 

ಕಾಂಗ್ರೆಸ್‌ನಿಂದ ಅಧಿವೇಶನಕ್ಕೆ ಅಡ್ಡಿ 

ಶಿವಮೊಗ್ಗ(Shivamogga): ಅನಾವಶ್ಯಕವಾಗಿ ಕಾಂಗ್ರೆಸ್‌ನವರು ಅಧಿವೇಶನದಲ್ಲಿ ಅಡ್ಡಿ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ(National Flag) ಇಳಿಸಿ ಕೇಸರಿ ಧ್ವಜ(Saffron Flag) ಹಾರಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಹಿಜಾಬ್ ವಿಷಯದಲ್ಲೂ ಅಪಪ್ರಚಾರ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡಿ ಪ್ರಚೋದನೆ ಮಾಡಿದ್ದಾರೆ. ಕೋರ್ಟ್ ಮಧ್ಯಂತರ ಆದೇಶ ಇದ್ದರೂ ಹಿಜಾಬ್ ವಿಷಯ ದೊಡ್ಡದಾಗುತ್ತಿದೆ ಅಂತ ಸಂಸದ ಬಿ.ವೈ. ರಾಘವೇಂದ್ರ(BY Raghavendra) ಹೇಳಿದ್ದಾರೆ.  

Siddaramaiah vs Hindutva ಮೋದಿ ಸರ್ಕಾರದಿಂದ ಕೋಮುವಾದ ಸೃಷ್ಟಿ, ಗುಡುಗಿದ ಸಿದ್ದರಾಮಯ್ಯ!

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ತಪ್ಪು ಮಾಡಿಲ್ಲ ರಾಜೀನಾಮೆ ಕೊಡಬೇಕಾಗಿಲ್ಲ. ಯಾವುದೇ ಧರ್ಮ ಮತ್ತು ಕೋಮಿನ ಪ್ರಶ್ನೆ ಇಲ್ಲ. ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಒಂದಾಗಿ ಹೋಗಬೇಕಾಗಿದೆ. ಅನಾವಶ್ಯಕವಾಗಿ ಕಾಂಗ್ರೆಸ್‌ನವರು ಅಧಿವೇಶನದಲ್ಲಿ ಅಡ್ಡಿ ಮಾಡುತ್ತಿದ್ದಾರೆ ಅಂತ ತಿಳಿಸಿದ್ದಾರೆ. 

ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತ ತೋರಿಸಬೇಕು: ಸಚಿವ ಜ್ಞಾನೇಂದ್ರ

ಕಲಬುರಗಿ: ಶಾಲೆಯಲ್ಲಿ ಸಮವಸ್ತ್ರ(Uniform) ಕಡ್ಡಾಯವಾಗಿ ಪಾಲನೆ ಸಂಬಂಧ ಕೆಲ ಶಾಸಕರು ಭೇಟಿಯಾಗಿ ಮನವಿ ಪತ್ರವನ್ನ ಕೊಟ್ಟಿದ್ದಾರೆ. ಸಮವಸ್ತ್ರ ಅಂದರೆ ಅದು ಸಮಾನತೆ, ಸಂಸ್ಕಾರ ತುಂಬುವ ಕೆಲಸ ಆಗಬೇಕಿದೆ. ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತ ತೋರಿಸಬೇಕು. ಕೋರ್ಟ್ ಆದೇಶದ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ತಿಳಿಸಿದ್ದಾರೆ. 

ಇಂದು(ಶನಿವಾರ) ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಕಾಲೇಜುಗಳಲ್ಲಿ ಇನ್ನೂ ಹಿಜಾಬ್(Hijab) ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ.  ಗೊಂದಲ ಸೃಷ್ಟಿಸುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೆಲವನ್ನ ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಕಣ್ಣಿನಿಂದ ನೋಡಿಕೊಂಡು ಸುಮ್ಮನಿರಲು ಸಾಧ್ಯವೇ ಇಲ್ಲ. ಅತಿರೇಕಕ್ಕೆ ಹೋದರೇ ಕೈಕಟ್ಟಿ ಕೂಡಲು ಆಗಲ್ಲ. ಇದರ ಹಿಂದೆ ಮತಾಂಧ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಮತಾಂಧ ಶಕ್ತಿಗಳು ಮಕ್ಕಳಲ್ಲಿ ವಿಷಬೀಜ ಬಿತ್ತುತ್ತಿವೆ. ವಿವಾದ(Controversy) ಸೃಷ್ಟಿಸುವ ಸಂಘಟನೆಗಳನ್ನ ನಿರ್ಜೀವ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೋರ್ಟಿನ ಮದ್ಯಂತರ ಆದೇಶವನ್ನ ಸರ್ಕಾರ ಪಾಲನೆ ಮಾಡುತ್ತಿದೆ ಅಂತ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ