ಅಧಿಕಾರ ಇದ್ದಾಗ ತಾಜ್‌ ವೆಸ್ಟೆಂಡ್‌, ಇಲ್ಲದಾಗ ಹಳ್ಳಿ ನೆನಪು: 'ಹಳ್ಳಿ ಗುಗ್ಗು' ಪೋಸ್ಟರ್ ಅಭಿಯಾನಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

Kannadaprabha News   | Kannada Prabha
Published : Nov 06, 2026, 06:01 AM IST
HDK vs Priyank kharge Halli guggu

ಸಾರಾಂಶ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಧಿಕಾರದಲ್ಲಿದ್ದಾಗ ತಾಜ್ ವೆಸ್ಟೆಂಡ್‌ನಲ್ಲಿರುವ ಅವರಿಗೆ ಈಗ ಹಳ್ಳಿ ನೆನಪಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಸಾಕ್ಷಿ ನೀಡದೆ ಮೂರ್ಖರಂತೆ ಮಾತನಾಡುವುದು ಸರಿಯಲ್ಲ ಎಂದರು.

 ಬೆಂಗಳೂರು (ನ.6): ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ನೀಡುವ ಸಲಹೆ, ಕೇಳುವ ಪ್ರಶ್ನೆಗಳನ್ನು ಹಳ್ಳಿ ಗುಗ್ಗು ಕೂಡಾ ಕೊಡುವುದಿಲ್ಲ ಎಂದು ಆಡು ಮಾತಿನಲ್ಲಿ ಹೇಳಿದ್ದೇನೆ. ಅಧಿಕಾರದಲ್ಲಿದ್ದಾಗ ತಾಜ್‌ ವೆಸ್ಟೆಂಡ್‌ನಲ್ಲಿ ಇರುತ್ತಾರೆ. ಅಧಿಕಾರದಲ್ಲಿ ಇಲ್ಲದಿರುವಾಗ ಅವರಿಗೆ ಹಳ್ಳಿ ನೆನಪಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕಡಿತೀವಿ, ಬಡಿತೀವಿ ಅನ್ನೋವ್ರಿಗೆ ಕಂಬಿ ಎಣಿಸ್ತೀವಿ: ಛಲವಾದಿ, ವಿಜಯೇಂದ್ರ ಹೇಳಿಕೆಗೆ ಪ್ರಿಯಾಂಕ್ ಎಚ್ಚರಿಕೆ! ಆರ್. ಅಶೋಕ್ ಸವಾಲ್

ನನ್ನ ಹೇಳಿಕೆ(ಹಳ್ಳಿ ಗುಗ್ಗು) ಬಗ್ಗೆ ವಿಷಾದ ಇಲ್ಲ

ಸುದ್ದಿಗಾರರ ಜೊತೆ ಮಾತನಾಡಿ, ಈಗ ಅವರು ನನ್ನ ಹೇಳಿಕೆಯನ್ನು ವಿವಾದ ಮಾಡಲು ಹೊರಟಿದ್ದಾರೆ, ಅದಕ್ಕೇನು ಮಾಡಲೂ ಆಗುವುದಿಲ್ಲ, ಮೂರ್ಖ ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮೂರ್ಖನೇ. ಆಡಿರುವ ಮಾತಿನ ಬಗ್ಗೆ ವಿಷಾದ ಇಲ್ಲ, ಮೊದಲು ಅವರು ಆಡಿರುವ ಮಾತಿಗೆ ವಿಷಾದ ವ್ಯಕ್ತಪಡಿಸಲಿ, ಆಮೇಲೆ ನೋಡೊಣ ಎಂದರು.

ಇದನ್ನೂ ಓದಿ: ಸ್ಟಿಂಗ್‌ ಸಂತ್ರಸ್ತೆಯ ದೂರಿನ ಇ- ಮೇಲ್‌ ನಾಪತ್ತೆ; ಸಿಎಂ, ಗೃಹಸಚಿವನಿಂದ ತನಿಖೆಯ ದಿಕ್ಕು ತಪ್ಪಿದೆ: ಹೆಚ್‌ಡಿಕೆ

ಮೂರ್ಖರ ತರ ಮಾತಾಡಿದ್ರೆ ಹೇಗೆ?

ಹಿಂದೆ ಕುಮಾರಸ್ವಾಮಿ ಅವರು ದಲಿತ-ಬಲಿತ ಎಂದು ಹೇಳಿದಾಗ ಯಾರೂ ಕೇಳಿಲ್ಲ. ಸ್ಟಿಂಗ್‌ ಆಪರೇಷನ್‌ ಪ್ರಕರಣ ಕುರಿತು ಸಾಕ್ಷಿ ಕೊಡಿ ಎಂದು ಹೇಳಿದ್ದೇನೆ. ಅದನ್ನು ಕೊಡದೆ ಮೂರ್ಖರ ತರಹ ಮಾತನಾಡಿದರೆ ಹೇಗೆ? ಯಾವುದೋ ಒಂದಕ್ಕೆ ಹೋಲಿಕೆ ಮಾಡೋದು ಸರಿಯಲ್ಲ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಮಣ್ಣಿನ ಮಗ ಎನ್ನುವ ಇವರು ಬೆಂಗಳೂರು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ರಿಯಲ್‌ ಎಸ್ಟೇಟ್‌ ಮಾಡಿಲ್ಲವೇ ಎಂದು ಪ್ರಿಯಾಂಕ್‌ ಖರ್ಗೆ ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಡಿತೀವಿ, ಬಡಿತೀವಿ ಅನ್ನೋವ್ರಿಗೆ ಕಂಬಿ ಎಣಿಸ್ತೀವಿ: ಛಲವಾದಿ, ವಿಜಯೇಂದ್ರ ಹೇಳಿಕೆಗೆ ಪ್ರಿಯಾಂಕ್ ಎಚ್ಚರಿಕೆ! ಆರ್. ಅಶೋಕ್ ಸವಾಲ್
ಬರ ಪರಿಹಾರ ಕೇಳುವುದು ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು; ಕೇಂದ್ರ ಯಜಮಾನನಲ್ಲ, ರಾಜ್ಯ ಜೀತದಾಳುಗಳಲ್ಲ: ಡಾ.ಜಿ.ಪರಮೇಶ್ವರ