ಸಂಸತ್‍ನಲ್ಲಿ ದಾಳಿ: ರಾಜಕೀಯ ಬಣ್ಣ ಬಳಿಯುತ್ತಿರುವ ಬಿಜೆಪಿ, ಸಚಿವ ಖರ್ಗೆ

By Kannadaprabha News  |  First Published Dec 19, 2023, 11:20 PM IST

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದರು ಎಂದು ಅವರ ಪೋಷಕರು ಹೇಳಿದ್ದಾರೆ. ಸಿಕ್ಕಾಕಿಕೊಂಡ ಸಂದರ್ಭದಲ್ಲಿ ಅವರು ಅದೇ ಘೋಷಣೆ ಕೂಗಿದ್ದಾರೆ. ಈ ಘಟನೆ ಯಾಕೆ ಆಯಿತು? ಹೇಗೆ ಆಯಿತು? ಅಂತ ತಿಳಿಯೋದುಬಿಟ್ಟು ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ 


ಕಲಬುರಗಿ(ಡಿ.19):  ಸಂಸತ್‍ನಲ್ಲಿ ನಡೆದ ದಾಳಿಯ ಕುರಿತು ತನಿಖೆ ನಡೆಸದ ಬಿಜೆಪಿ ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರಿಗೆ ಅರಿವು ಇದೆಯೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರದ ಅಂಕಿಅಂಶಗಳೇ ಇದನ್ನು ಹೇಳುತ್ತಿವೆ ಎಂದು ತಿಳಿಸಿದ್ದಾರೆ. 

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದರು ಎಂದು ಅವರ ಪೋಷಕರು ಹೇಳಿದ್ದಾರೆ. ಸಿಕ್ಕಾಕಿಕೊಂಡ ಸಂದರ್ಭದಲ್ಲಿ ಅವರು ಅದೇ ಘೋಷಣೆ ಕೂಗಿದ್ದಾರೆ. ಈ ಘಟನೆ ಯಾಕೆ ಆಯಿತು? ಹೇಗೆ ಆಯಿತು? ಅಂತ ತಿಳಿಯೋದುಬಿಟ್ಟು ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

ಕಾಂಗ್ರೆಸ್‌ ಗ್ಯಾರಂಟಿ ಕೇವಲ ಘೋಷಣೆ, ಅನುಷ್ಠಾನಕ್ಕೆ ಬಂದಿಲ್ಲ: ಮಲ್ಕಪ್ಪಗೋಳ್‌

ಅಮಿತ್ ಶಾ, ಅಜೀತ್ ದೋಹಲ್ ಎಲ್ಲಿದ್ದಾರೆ? ಪ್ರಧಾನಿ ಮಂತ್ರಿಗಳು ಇದು ಬಹಳ ಗಂಭೀರ ವಿಷಯ ಎಂದು ಒಪ್ಪಿಕೊಂಡಿದ್ದಾರೆ. ಹೋಮ್ ಮಿನಿಸ್ಟರ್ ಇಲ್ಲಿಯವರೆಗೂ ಯಾಕೆ ಸ್ಟೇಟಮೆಂಟ್ ಕೊಟ್ಟಿಲ್ಲ, ಹೋಂ ಮಿನಿಸ್ಟರ್ ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಮೈಸೂರು ಎಂಪಿ ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದಕ್ಕೆ ಇದನ್ನು ಮುಚ್ಚಿ ಹಾಕುತ್ತಿದ್ದಾರೆ. ಮಾತು ಎತ್ತಿದರೆ ನಮ್ಮ ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಬಗ್ಗೆ ಮಾತಾನಾಡಲಿಕ್ಕೆ ಕ್ಯಾಮೆರಾ ಮುಂದೆ ಬರುತ್ತಿದ್ದ ಪ್ರತಾಪ್ ಸಿಂಹ ಈಗ ಎಲ್ಲಿ ಕಾಣೆ ಆಗಿದ್ದಾರೆ. ಇವರು ಪಾಸ್ ಕೊಟ್ಟಿದ್ದರಿಂದ ಇಡೀ ದೇಶ ತಲೆ ತಗ್ಗಿಸುವಂತೆ ಆಗಿದೆ. ಪ್ರತಾಪ್ ಸಿಂಹ ಈ ಬಗ್ಗೆ ಏನಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮೊದಲು ಡೇಟಾ ನೋಡಲು ಹೇಳಿ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆಯಾ ಇಲ್ಲ ಅಂತ. ಯಾರು ಆಡಳಿತದಲ್ಲಿ ಇರುತ್ತಾರೆ ಅವರು ಉತ್ತರ ಕೋಡಬೇಕು. ವಿರೋಧ ಪಕ್ಷದವರು ಅಲ್ಲ ಎಂದು ಪ್ರಲ್ಹಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.

ಆರ್‌ಎಸ್‌ಎಸ್‌ ಜಾತ್ಯತೀತ, ಸರ್ವಹಿತ ಸಂಘಟನೆ: ರಾಜಕುಮಾರ ಪಾಟೀಲ್ ತೆಲ್ಕೂರ

ಸಂಸತ್‍ನಲ್ಲಿ ದಾಳಿ ಯಾಕೆ ಆಗಿದೆ ಅಂತ ಕೇಳೋದು ತಪ್ಪಾ ಎಂದು ಪ್ರಶ್ನಿಸಿದ ಅವರು, ಸ್ವಾತಂತ್ರ್ಯದ ನಂತರ ಬಂದ ಬಲಿಷ್ಠ ಸರ್ಕಾರ ಅಲ್ವಾ, 56 ಇಂಚಿನ ಎದೆ ಇರುವ ಸರ್ಕಾರ ಅಂತ ಹೇಳಿಕೊಂಡು ಓಡಾಡುತ್ತಾರಲ್ಲ ನಾವು ಕೆಳೋದು ತಪ್ಪಾ? ಎಂದು ಪ್ರಶ್ನಿಸಿದರು.

ಯಾಕೆ ಪಾರ್ಲಿಮೆಂಟ್‍ನಲ್ಲಿ ಬಂದು ದಾಳಿ ಮಾಡಿದ್ದಾರೆ ಅಂತ ಕೇಳುತ್ತೆವೆ. ಹಿಂದೆ ದಾಳಿಯ ಬಗ್ಗೆ ಯಾರಾದರೂ ಪಾಸ್ ಕೊಟ್ಟಿದ್ದರಾ? ಕಾಂಗ್ರೆಸ್ ನವರು ಇದರ ಇಂದೆ ಇದ್ದಾರೆ ಅಂತ ಹೋಂ ಮಿನಿಸ್ಟರ್ ಸ್ಟೇಟ್ ಮೆಂಟ್ ಕೋಡಲಿ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಚಿಪ್ಪು ಸುಲ್ತಾನ್ ಹೆಸರು ಇಡುವುದಕ್ಕೆ ಸಿ.ಟಿ.ರವಿ ಅವರು ವಿರೋಧ ವ್ಯಕ್ತಪಡಿಸಿದಕ್ಕೆ ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿ ಪಕ್ಷದಲ್ಲಿ ಏನಿದಾರೆ ಅಂತ ಗೊತ್ತಾಗಲಿ, ಅವರಿಗೆ ಒಂದು ಡಿಸಿಗ್ನೇಷನ್ ಸಿಗಲಿ ಆಮೇಲೆ ಮಾತಾಡೋಣ ಎಂದರು.

click me!