ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ನಾನು ವಿನಯದ ಬಗ್ಗೆ ಕೇಳಿಸಿಕೊಳ್ಳುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರಿಂದ ನಾನು ಲೀಡರ್ ಆಗಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಮೈಸೂರು (ಫೆ.03): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ನಾನು ವಿನಯದ ಬಗ್ಗೆ ಕೇಳಿಸಿಕೊಳ್ಳುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರಿಂದ ನಾನು ಲೀಡರ್ ಆಗಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ದೇವೇಗೌಡರ ಮೇಲಿನ ಗೌರವಕ್ಕಾಗಿ ಮಾತ್ರ ಸುಮ್ಮೆ ಇದ್ದಿನಿ. ದೇವೇಗೌಡರ ಹೆಸರು ಅವರ ಜೊತೆ ಇಲ್ಲದೆ ಇದ್ದಿದ್ದರೆ ಅದರ ಅಪ್ಪನಂಗೆ ನಾನು ಕುಮಾರಸ್ವಾಮಿಗೆ ಉತ್ತರ ಕೊಡ್ತಿದ್ದೆ ಎಂದು ಕೆಂಡಮಂಡಲವಾದರು.
ಚಲುವರಾಯಸ್ವಾಮಿ ಏನೂ ಕುಮಾರಸ್ವಾಮಿ ಅವರ ಮನೆ ಋಣದಲ್ಲಿ ಇದ್ದಾನಾ? ನಾನೇನೂ ಅವರ ಆಸ್ತಿ ತಿಂದಿದ್ದಾನಾ? ಗೌರವ ಬೇಡ ಅನ್ನಲಿ. ಅವರು ಮಾತಾಡಿದ್ದಕಿಂತಾ ಬೇರೆ ಥರವೇ ನಾನು ಅವರಿಗೆ ಮಾತಾಡ್ತಿನಿ. ಕುಮಾರಸ್ವಾಮಿ ಕೈಯಲ್ಲಿ ನನ್ನ ಹಣೆ ಬರಹ ಬರೆಯೋಕೆ ಆಗುತ್ತಾ? ಕುಮಾರಸ್ವಾಮಿ ಅವರ ವಿಚಾರವೇ ಪ್ರಸ್ತುತ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಭೈರೇಗೌಡ ಇವರನ್ನು ಜೆಡಿಎಸ್ ನಿಂದ ಹೊರ ಕಳುಹಿಸಿದ್ದು ಯಾರು ಅಂತಾ ಕುಮಾರಸ್ವಾಮಿ ಹೇಳಲಿ. ಮಂಡ್ಯ ಇವರಿಗೆ ಕೊಟ್ಟ ಗೌರವಕ್ಕೆ ಈಗ ಅಶಾಂತಿ, ಗಲಭೆಯ ರಿಟರ್ನಸ್ ಕೊಡ್ತಿದ್ದಾರಾ? ಎಂದು ಅವರು ಪ್ರಶ್ನಿಸಿದರು.
ಮಂಡ್ಯ ಅಭಿವೃದ್ಧಿ ಮಾಡಿದ್ದರೆ 8 ಜನ ಯಾಕೆ ಸೋತರು?: ಮಂಡ್ಯದ ಅಭಿವೃದ್ಧಿ ಬಗ್ಗೆ ದಳಪತಿಗಳಿಂದ ಚರ್ಚೆಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ನಾಚಿಕೆ ಆಗಬೇಕು. ಒಂದು ಅಂಗನವಾಡಿ ಕಟ್ಟಡ ಕಟ್ಟಲು ಆಗಿಲ್ಲ.ಅವರೇನೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ? ಹಿಟ್ ಅಂಡ್ ರನ್ ಕೇಸ್ ಅವರದು ಎಂದು ಆರೋಪಿಸಿದರು.
ಸರ್ವಾಧಿಕಾರಿ ಇಂದಿರಾ ಗಾಂಧಿನಾ, ನರೇಂದ್ರ ಮೋದಿನಾ?: ಕೆ.ಎಸ್.ಈಶ್ವರಪ್ಪ
ಬರೋಕೆ ಹೇಳಿ ಮಂಡ್ಯಕ್ಕೆ ಇಲ್ಲದಿದ್ದರೆ ವಿಧಾನಸಭೆಯಲ್ಲೆ ಒಂದು ದಿನ ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡೋಣಾ. ನಾನು ಸ್ಪೀಕರ್ ಸಮಯ ಕೇಳ್ತಿನಿ. ಅವರು ಕೇಳಲಿ. ಒಂದು ಇಡೀ ದಿನ ಕಲಾಪದಲ್ಲೇ ಚರ್ಚೆ ಮಾಡೋಣಾ. ಅವರ ಅಭಿವೃದ್ಧಿ ಜಿರೋ. ಯಾರನ್ನೋ ಬೈಯ್ದು ಬಿಟ್ಟು ಹೋದರೆ ಇಡೀ ದಿನ ಪ್ರಚಾರದಲ್ಲಿ ಇರ್ತವಿ ಅಂತಾ ಹೀಗೆ ಮಾತಾಡ್ತಾರೆ. ಮಂಡ್ಯ ಅಭಿವೃದ್ಧಿ ಮಾಡಿದ್ದರೆ 8 ಜನ ಯಾಕೆ ಸೋತರು? ಎಂದು ಅವರು ಪ್ರಶ್ನಿಸಿದರು.