ಕಾ​ವೇರಿ ನೀ​ರಿನ ವಿ​ಚಾ​ರ​ದಲ್ಲಿ ರಾ​ಜ​ಕೀಯ ತೀಟೆ ಮಾ​ಡ​ಬೇ​ಡಿ: ಸ​ಚಿವ ಚ​ಲು​ವ​ರಾ​ಯ​ಸ್ವಾಮಿ

By Kannadaprabha News  |  First Published Aug 20, 2023, 8:48 PM IST

ಕಾ​ವೇರಿ ನೀ​ರಿನ ವಿ​ಚಾ​ರ​ದಲ್ಲಿ ಬಿ​ಜೆ​ಪಿ​ಯ​ವರು ರಾ​ಜ​ಕೀಯ ತೀಟೆ ಮಾ​ಡು​ವುದು ಬೇಡ. ಹೆ​ದ್ದಾರಿ ಬಂದ್‌ ಮಾ​ಡು​ವು​ದರ ಹಿಂದೆ ರಾ​ಜ​ಕೀಯವಿದೆ ಎಂದು ಕೃಷಿ ಮ​ತ್ತು ಜಿಲ್ಲಾ ಉ​ಸ್ತು​ವಾರಿ ಸ​ಚಿವ ಎ​ನ್‌.​ಚ​ಲು​ವ​ರಾ​ಯ​ಸ್ವಾಮಿ ದೂ​ರಿ​ದ​ರು.


ಮಂಡ್ಯ (ಆ.20): ಕಾ​ವೇರಿ ನೀ​ರಿನ ವಿ​ಚಾ​ರ​ದಲ್ಲಿ ಬಿ​ಜೆ​ಪಿ​ಯ​ವರು ರಾ​ಜ​ಕೀಯ ತೀಟೆ ಮಾ​ಡು​ವುದು ಬೇಡ. ಹೆ​ದ್ದಾರಿ ಬಂದ್‌ ಮಾ​ಡು​ವು​ದರ ಹಿಂದೆ ರಾ​ಜ​ಕೀಯವಿದೆ ಎಂದು ಕೃಷಿ ಮ​ತ್ತು ಜಿಲ್ಲಾ ಉ​ಸ್ತು​ವಾರಿ ಸ​ಚಿವ ಎ​ನ್‌.​ಚ​ಲು​ವ​ರಾ​ಯ​ಸ್ವಾಮಿ ದೂ​ರಿ​ದ​ರು. ಮಳೆ ವೈ​ಫ​ಲ್ಯ​ದಿಂದ ನ​ಮ್ಮಲ್ಲಿ ನೀ​ರಿಗೆ ಸಂಕಷ್ಟ ಪ​ರಿ​ಸ್ಥಿತಿ ಇದೆ. ನೀರು ಬಿ​ಟ್ಟರೆ ರೈ​ತ​ರಿಗೆ ಸ​ಮ​ಸ್ಯೆ​ಯಾ​ಗು​ತ್ತದೆ ಎಂದು ಕೇಂದ್ರ​ಸ​ರ್ಕಾರ, ನೀರು ನಿ​ರ್ವ​ಹಣಾ ಪ್ರಾ​ಧಿ​ಕಾ​ರದ ಎ​ದುರು ಸ​ಮ​ರ್ಥ​ವಾಗಿ ವಾದ ಮಂಡಿ​ಸಿ​ದ್ದೇವೆ. ಇ​ಲ್ಲಿ​ನ ಪ​ರಿ​ಸ್ಥಿ​ತಿ​ಯನ್ನು ಅ​ರಿತು ಕಾ​ವೇರಿ ನೀರು ನಿ​ರ್ವ​ಹಣಾ ಪ್ರಾ​ಧಿ​ಕಾರ 10 ಸಾ​ವಿರ ಕ್ಯು​ಸೆಕ್‌ ನೀರು ಬಿ​ಡು​ವಂತೆ ಆ​ದೇ​ಶಿ​ಸಿತ್ತು. 

ಇ​ದನ್ನು ಒ​ಪ್ಪದ ತ​ಮಿ​ಳು​ನಾಡು ಸ​ರ್ಕಾರ ಸು​ಪ್ರೀಂಕೋ​ರ್ಚ್‌ಗೆ ಹೋ​ಗಿ​ದೆ. ಆ​ನಂತರ ಪ್ರಾ​ಧಿ​ಕಾರ 15 ಸಾ​ವಿರ ಕ್ಯು​ಸೆಕ್‌ ನೀರು ಬಿ​ಡು​ವಂತೆ ಸೂ​ಚಿ​ಸಿದೆ ಎಂದು ಶ​ನಿ​ವಾರ ಸು​ದ್ದಿ​ಗಾ​ರ​ರಿಗೆ ತಿ​ಳಿ​ಸಿ​ದ​ರು. ಈಗ ರಾ​ಜ್ಯ​ದಲ್ಲಿ ಸಂಸದೆ ಸು​ಮ​ಲತಾ ಅ​ವರೂ ಸೇ​ರಿ​ದಂತೆ ಬಿ​ಜೆ​ಪಿ​ಯ​ 26 ಮಂದಿ ಸಂಸ​ದ​ರಿ​ದ್ದಾರೆ. ಅ​ವರೇ ನೀ​ರಿನ ಪ​ರಿ​ಸ್ಥಿ​ತಿಯ ಬಗ್ಗೆ ಕೇಂದ್ರಕ್ಕೆ ಮ​ನ​ವ​ರಿಕೆ ಮಾ​ಡಿ​ಕೊಡಲಿ. ಅ​ಣೆ​ಕ​ಟ್ಟೆ​ಯ​ಲ್ಲಿ​ರುವ ನೀ​ರೆ​ಲ್ಲ​ವನ್ನೂ ನಮ್ಮ ರೈ​ತರೇ ಬ​ಳ​ಸಿ​ಕೊ​ಳ್ಳು​ವಂತೆ ಮಾ​ಡಲಿ. ಹೆ​ದ್ದಾರಿ ಬಂದ್‌ ಹೆ​ಸ​ರಿ​ನಲ್ಲಿ ರಾ​ಜ​ಕೀಯ ತೀಟೆ ಮಾ​ಡು​ವುದು ಏ​ತಕ್ಕೆ ಎಂದು ಪ್ರ​ಶ್ನಿ​ಸಿ​ದ​ರು.  

Latest Videos

undefined

ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ: ವ್ಯವಸ್ಥಾಪನ ಸಮಿತಿ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಎ​ಚ್‌.​ಡಿ.​ಕು​ಮಾ​ರ​ಸ್ವಾಮಿ ಅ​ವ​ರು ಮು​ಖ್ಯ​ಮಂತ್ರಿ​ಯಾ​ಗಿದ್ದ ಸ​ಮ​ಯ​ದಲ್ಲಿ ನೀ​ರಿ​ಗೆ ಸಂಕಷ್ಟಎ​ದು​ರಾ​ಗಿ​ದ್ದಾಗ ಅ​ಣೆ​ಕ​ಟ್ಟೆಯ ಕೀಲಿ ಕೇಂದ್ರದ ಬಳಿ ಇದೆ, ನನ್ನ ಬಳಿ ಇಲ್ಲ ಎಂದಿ​ದ್ದರು. ಆ​ದರೆ, ನಾವು ಹಾಗೆ ಮಾ​ತ​ನಾ​ಡದೆ ರೈ​ತರ ಪ​ರ​ವಾದ ನಿ​ರ್ಧಾ​ರ​ಗ​ಳನ್ನು ಕೈ​ಗೊಂಡು ಮುಂದು​ವ​ರೆ​ದಿ​ದ್ದೇವೆ. ಬಿ​ಜೆ​ಪಿ​ಯ​ವರು ರಾ​ಜ​ಕಾ​ರ​ಣ ಮಾ​ಡದೆ ರೈ​ತರ ಸ​ಮ​ಸ್ಯೆಗೆ ಸಂಕಷ್ಟಸೂ​ತ್ರ​ವನ್ನು ರೂ​ಪಿ​ಸು​ವಂತೆ ಕೇಂದ್ರದ ಮೇಲೆ ಒ​ತ್ತಡ ಹೇ​ರಲಿ ಎಂದು ಬಿ​ಜೆ​ಪಿ​ಯ​ವ​ರಿಗೆ ಸ​ಲಹೆ ನೀ​ಡಿ​ದರು.

ನ​ಮ್ಮೊಂದಿಗೆ 138 ಶಾ​ಸ​ಕ​ರು: ಕಾಂಗ್ರೆಸ್‌ ಆ​ಡ​ಳಿತ ನ​ಡೆ​ಸು​ವು​ದಕ್ಕೆ ಶಾ​ಸ​ಕರ ಅ​ವ​ಶ್ಯ​ಕತೆ ಇಲ್ಲ. ಬಿ​ಜೆಪಿ ಮತ್ತು ಜೆ​ಡಿ​ಎ​ಸ್‌ನಿಂದ ಹ​ಲವು ಶಾ​ಸ​ಕರು ಸ್ವ​ಯಂಪ್ರೇ​ರಿ​ತ​ವಾಗಿ ಕಾಂಗ್ರೆಸ್‌ ಸೇ​ರಲು ಬ​ರು​ತ್ತಿ​ದ್ದಾ​ರೆ. ಈಗ ನ​ಮ್ಮೊಂದಿಗೆ ಗೌ​ರಿ​ಬಿ​ದ​ನೂರು, ಹ​ರ​ಪ​ನ​ಹಳ್ಳಿ ಶಾ​ಸ​ಕರೂ ಸೇ​ರಿ​ದಂತೆ 138 ಜನ ಶಾ​ಸ​ಕ​ರಿ​ದ್ದಾರೆ ಎಂದು ಹೇ​ಳಿ​ದರು. ಮೇ​ಲು​ಕೋಟೆ ಕ್ಷೇ​ತ್ರದ ಶಾ​ಸಕ ಸಿ.​ಎ​ಸ್‌.​ಪು​ಟ್ಟ​ರಾಜು ಕಾಂಗ್ರೆಸ್‌ ಸೇ​ರುವ ವ​ದಂತಿ ಬಗ್ಗೆ ಕೇ​ಳಿ​ದಾಗ, ನಾನು ಯಾರ ಹೆ​ಸ​ರನ್ನೂ ಹೇ​ಳು​ವು​ದಿಲ್ಲ. ಯಾ​ರಾರ‍ಯರು ಬಂದು ಸೇ​ರು​ವರೆಂಬುದು ಮುಂದಿ​ನ ದಿ​ನ​ಗ​ಳಲ್ಲಿ ನಿ​ಮಗೇ ತಿ​ಳಿ​ಯ​ಲಿದೆ. ಯಾ​ರನ್ನೂ ರ​ಹ​ಸ್ಯ​ವಾಗಿ ಸೇ​ರಿ​ಸಿ​ಕೊ​ಳ್ಳು​ವು​ದಿಲ್ಲ. ಎ​ಲ್ಲ​ರಿಗೂ ತಿ​ಳಿ​ಯು​ವಂತೆ ಸೇ​ರಿ​ಸಿ​ಕೊ​ಳ್ಳು​ವು​ದಾಗಿ ತಿ​ಳಿ​ಸಿ​ದರು.

ಕಾಂಗ್ರೆಸ್‌ ಬಗ್ಗೆ ಸಂಸದೆ ಸು​ಮ​ಲತಾ ಮೃ​ದು​ಧೋ​ರಣೆ ತ​ಳೆ​ದಿ​ರುವ ಬಗ್ಗೆ ಕೇ​ಳಿ​ದಾಗ, ಅ​ವರು ಜಿ​ಲ್ಲೆಯ ಸಂಸ​ದರು. ಅ​ವರ ಬಗ್ಗೆ ವೈ​ಯ​ಕ್ತಿ​ಕ​ವಾಗಿ ಗೌ​ರ​ವ​ವಿದೆ. ರಾ​ಜ​ಕೀ​ಯ​ವಾಗಿ ಏ​ನೇನೋ ಅ​ವರ ಬಗ್ಗೆ ಮಾ​ತ​ನಾ​ಡ​ಲಾ​ಗದು. ನಾವು ಮತ್ತು ಅ​ವರು ರಾ​ಜ​ಕೀಯ ವಿ​ಚಾ​ರ​ವಾಗಿ ಏ​ನನ್ನೂ ಚ​ರ್ಚಿ​ಸಿಲ್ಲ. ಅ​ವರು ನೀ​ರಿನ ವಿ​ಚಾ​ರ​ವಾಗಿ ಧ್ವನಿ ಎ​ತ್ತಿ​ದ್ದಾರೆ. ಸಂಸ​ದ​ರಾಗಿ ನಮ್ಮ ಪ​ರಿ​ಸ್ಥಿ​ತಿ​ಯನ್ನು ಅ​ರ್ಥೈ​ಸಿ​ಕೊಂಡು ಕೇಂದ್ರಕ್ಕೆ ಮ​ನ​ವ​ರಿಕೆ ಮಾ​ಡಿ​ಕೊ​ಡಲಿ. ಮುಂದಿನ ವಿ​ಚಾ​ರ​ಗ​ಳನ್ನು ಆ​ನಂತರ ಮಾ​ತ​ನಾ​ಡೋಣ ಎಂದಷ್ಟೇ ಹೇ​ಳಿ​ದ​ರು. ಶಾ​ಸಕ ಪಿ.​ರ​ವಿಕುಮಾರ್‌, ತಾಪಂ ಮಾಜಿ ಅ​ಧ್ಯಕ್ಷ ಸಿ.​ತ್ಯಾ​ಗ​ರಾಜು ಇ​ತ​ರ​ರಿ​ದ್ದ​ರು.

ಎ​ಚ್‌​ಡಿಕೆ ಸ​ತ್ಯ​ಹ​ರಿ​ಶ್ಚಂದ್ರ​ರ​ಲ್ಲ​ವೇ?: ಕಾಂಗ್ರೆ​ಸ್‌​ನ​ವ​ರನ್ನು ನೋಡಿ ಮಳೆ ಬ​ರು​ತ್ತಿಲ್ಲ ಎಂಬ ಮಾಜಿ ಸಿಎಂ ಕು​ಮಾ​ರ​ಸ್ವಾಮಿ ಹೇ​ಳಿಕೆ ಕು​ರಿತು ಪ್ರ​ತಿ​ಕ್ರಿ​ಯಿ​ಸಿದ ಚ​ಲು​ವ​ರಾ​ಯ​ಸ್ವಾಮಿ, ಅ​ವರು ಮ​ಹಾ ಸ​ತ್ಯ​ಹ​ರಿ​ಶ್ಚಂದ್ರ​ರ​ರು. ನ​ಮ್ಮನ್ನು ನೋಡಿ ಮಳೆ ಬ​ರು​ವುದು ಬೇಡ. ಅ​ವರೂ ಕ​ರ್ನಾ​ಟ​ಕ​ದ​ಲ್ಲಿ​ದ್ದಾ​ರ​ಲ್ಲವೇ. ಅ​ವ​ರನ್ನೇ ನೋಡಿ ಮಳೆ ಬ​ರಲಿ. ರೈ​ತರ ಹಿತ ಕಾ​ಪಾ​ಡಲು ಮ​ಳೆ​ಗಾಗಿ ಅ​ವರೇ ಪೂಜೆ ಮಾ​ಡಿ​ಸಲಿ. ನಾ​ವೆ​ಲ್ಲರೂ ಸೇರಿ ಅ​ವ​ರಿಗೇ ಥ್ಯಾಂಕ್ಸ್‌ ಹೇ​ಳೋಣ. ಪ್ರ​ಕೃ​ತಿಯ ನಿ​ಯ​ಮ​ವನ್ನು ಇ​ನ್ನೊ​ಬ್ಬ​ರಿಗೆ ಹೋ​ಲಿ​ಸು​ವುದು ಅ​ವಿ​ವೇ​ಕ​ತನ. ಅ​ಧಿ​ಕಾ​ರ​ದ​ಲ್ಲಿ​ರು​ವ​ವ​ರನ್ನು ನೋಡಿ ಎ​ಲ್ಲಾ​ದರೂ ಮಳೆ ಬ​ರು​ತ್ತ​ದೆಯೇ. ಎ​ಸ್‌.​ಎಂ.​ಕೃಷ್ಣ, ದೇ​ವೇ​ಗೌ​ಡರು, ಕು​ಮಾ​ರ​ಸ್ವಾಮಿ, ಯ​ಡಿ​ಯೂ​ರ​ಪ್ಪ ಇ​ದ್ದಾ​ಗಲೂ ಬರ ಬಂದಿ​ರ​ಲಿ​ಲ್ಲವೇ. ಹಾ​ಗಂತ ಎ​ಲ್ಲ​ರನ್ನೂ ದೂ​ಷಿ​ಸ​ಲಾ​ಗು​ವುದೇ ಎಂದು ಪ್ರ​ಶ್ನಿ​ಸಿ​ದರು.

ಸಚಿವ ಎಂ.ಸಿ.ಸುಧಾಕರ್‌ ಅಭಿವೃದ್ದಿಯ ಹರಿಕಾರ: ಸಂಸದ ಮುನಿಸ್ವಾಮಿ

ಸು​ಮ​ಲತಾ ಮಾ​ತು​ಗ​ಳ​ಲ್ಲ: ಕಾ​ವೇರಿ ನೀ​ರಿನ ವಿ​ಚಾ​ರ​ದಲ್ಲಿ ತಾವು ಹೇ​ಳ​ಬೇ​ಕಾದ ಮಾ​ತು​ಗ​ಳೆ​ಲ್ಲ​ವನ್ನೂ ಸು​ಮ​ಲತಾ ಮೂ​ಲಕ ಹೇ​ಳಿ​ಸು​ತ್ತಿ​ದ್ದಾರೆ. ನೀ​ರಿನ ವಿ​ಚಾ​ರ​ದಲ್ಲಿ ರಾ​ಜ​ಕೀ​ಯ​ವಾಗಿ ತೀಟೆ ಮಾ​ಡು​ತ್ತಿ​ದ್ದಾರೆ. ನೀರು ಬಿ​ಡು​ಗ​ಡೆಗೆ ಆ​ದೇಶ ಮಾ​ಡಿಯೇ ಇ​ಲ್ಲ​ವೆಂದು ಸುಳ್ಳು ಹೇ​ಳುವ ಮೂ​ಲಕ ಜ​ನ​ರನ್ನು ದಿ​ಕ್ಕು​ತ​ಪ್ಪಿ​ಸು​ತ್ತಿ​ದ್ದಾರೆ. ಆ​ದೇಶ ಕಾ​ಪಿ​ಯನ್ನು ನಾನು ಕೊ​ಡು​ತ್ತೇನೆ ಎಂದು ಸ​ವಾಲು ಹಾ​ಕಿ​ದರು.

click me!