ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಪಾದ ಮುಟ್ಟಿನಮಸ್ಕರಿಸಿದ್ದ ಬಿಜೆಪಿ ಶಾಸಕ ಶರಣು ಸಲಗರ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳಿಗೆ ಖುದ್ದು ಶರಣು ಸಲಗರ ಸ್ಪಷ್ಟನೆ ನೀಡುವ ಮೂಲಕ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಬೀದರ್ (ಆ.20): ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಪಾದ ಮುಟ್ಟಿನಮಸ್ಕರಿಸಿದ್ದ ಬಿಜೆಪಿ ಶಾಸಕ ಶರಣು ಸಲಗರ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳಿಗೆ ಖುದ್ದು ಶರಣು ಸಲಗರ ಸ್ಪಷ್ಟನೆ ನೀಡುವ ಮೂಲಕ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಈಶ್ವರ ಖಂಡ್ರೆ ಅವರಿಗೆ ಪಾದ ಮುಟ್ಟಿ ನಮಸ್ಕರಿಸಿದ್ದು ಅವರೊಬ್ಬ ವೀರಶೈವ ಸಮಾಜದ ಮುಖಂಡರು ಎಂಬ ಗೌರವ ಭಾವದಿಂದ ಹೊರತು ನಾನವರಿಗೆ ಶರಣಾಗಿದ್ದೇನೆ ಅಥವಾ ಕಾಂಗ್ರೆಸ್ ಸೇರ್ತೆನೆ ಎಂದಲ್ಲ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಕನ್ನಡಪ್ರಭಕ್ಕೆ ಮಾತನಾಡಿ, ಈಶ್ವರ ಖಂಡ್ರೆ ಒಬ್ಬ ಕಾಂಗ್ರೆಸ್ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರು ಎನ್ನುವದಕ್ಕಿಂತ ಮಿಗಿಲಾಗಿ ಅವರು ನಮ್ಮ ಸಮಾಜದ ಮುಖಂಡರು, ವಯಸ್ಸಿನಲ್ಲಿ ಹಿರಿಯರು ಎಂದು ನಮಸ್ಕರಿಸಿದ್ದೇನೆ ಎಂದರು.
ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ನಾಯಕರಾಗುವ ಯೋಗ್ಯತೆ ಇಲ್ಲವಾ?: ಭಗವಂತ ಖೂಬಾ
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಕಿರಿಯರಿಲ್ಲ ಎಂದು ನುಡಿದ ನೆಲದ ಶಾಸಕ ನಾನು: ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಕಿರಿಯರಿಲ್ಲ ಎಂದು ನುಡಿದ ನೆಲದ ಶಾಸಕ ನಾನು. ಖಂಡ್ರೆ ಅನುಭವ ಮಂಟಪ ವೀಕ್ಷಣೆಗಾಗಿ ಬಂದಿದ್ದರು. ಬರುವ ಒಂದು ಮೊದಲೇ ಪ್ರಗತಿ ಪರಿಶೀಲನಾ ಸಭೆ ಹಾಗೂ ಅನುಭವ ಮಂಟಪ ವೀಕ್ಷಣೆಗೆ ಕರೆ ನೀಡಿದ್ದರು. ಅದಕ್ಕಾಗಿ ನಾನು ಅಲ್ಲಿಗೆ ಹೋಗಿದ್ದೆ ಎಂದಿದ್ದಾರೆ.
ಖಂಡ್ರೆ ಅವರು ನಮ್ಮ ಸಮಾಜದ ಹಿರಿಯರು ಎಂಬ ಗೌರವ ಭಾವ ನನಗಿದೆ. ಅದಕ್ಕಿಂತ ಸಾವಿರ ಪಟ್ಟು ಬಿಜೆಪಿ, ಹಿಂದುತ್ವ ಮತ್ತು ಗೋಮಾತೆಯನ್ನು ಪ್ರೀತಿಸುತ್ತೇನೆ. ನಾನೆಂದೂ ಬಿಜೆಪಿ ಬಿಡುವದಿಲ್ಲ ನಮ್ಮ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಗೆ ಸ್ಪಷ್ಟಪಡಿಸುತ್ತೇನೆ ಹೊಟ್ಟೆಕಿಚ್ಚಿನಿಂದ ನನ್ನ ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದರತ್ತ ಗಮನಹರಿಸದಿರಿ ಎಂದರು. ಖಂಡ್ರೆ ಅವರಿಗೆ ಪಾದಮುಟ್ಟಿ ನಮಸ್ಕರಿಸುತ್ತಿದ್ದಂತೆ ನನ್ನ ವಿರುದ್ಧ ಕಾಂಗ್ರೆಸ್ ಸೇರುವ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ.
ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಮುಂದಾಗಿ: ಸಚಿವ ಪ್ರಿಯಾಂಕ್ ಖರ್ಗೆ
ಒಬ್ಬ ಬಡ ರೈತನ ಮಗನಿಗೆ 23 ತಿಂಗಳ ಒಳಗಾಗಿ ಎರಡು ಬಾರಿ ಬಿಜೆಪಿ ಶಾಸಕನನ್ನಾಗಿ ಮಾಡಿ ವಿಧಾಸಭೆಗೆ ಕಳಿಸಿದ್ದು ಬಿಜೆಪಿ ಹೀಗಾಗಿ ನನ್ನ ಉಸಿರು ಇರುವವರೆಗೆ, ನಾನು ಬದುಕಿರುವವರೆಗೆ ಬಿಜೆಪಿಯಲ್ಲಿರುತ್ತೇನೆ ಎಂದು ತಿಳಿಸಿದರು. ಈಗ ತೆಲಂಗಾಣಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನನಗೆ ಜವಾಬ್ದಾರಿಯನ್ನು ಪಕ್ಷದ ಹಿರಿಯರು ನೀಡಿದ್ದಾರೆ ಅದಕ್ಕಾಗಿ ಹೈದ್ರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದೇನೆ ಎಂದು ಶರಣು ಸಲಗರ ತಿಳಿಸಿದರು.