ಕೆಜಿಎಫ್‌ನ ಬೆಮೆಲ್‌ ಕಾರ್ಖಾನೆ ಮಾರಾಟ ಇಲ್ಲ: ಸಚಿವ ಮುರುಗೇಶ್‌ ನಿರಾಣಿ

Kannadaprabha News   | Asianet News
Published : Mar 25, 2022, 02:35 AM IST
ಕೆಜಿಎಫ್‌ನ ಬೆಮೆಲ್‌ ಕಾರ್ಖಾನೆ ಮಾರಾಟ ಇಲ್ಲ: ಸಚಿವ ಮುರುಗೇಶ್‌ ನಿರಾಣಿ

ಸಾರಾಂಶ

ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿರುವ ಬೆಮೆಲ್‌ ಕಾರ್ಖಾನೆ ಎಲ್ಲಿಯವರೆಗೆ ಲಾಭದಲ್ಲಿರುತ್ತದೆಯೋ ಅಲ್ಲಿಯವರೆಗೂ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಅಥವಾ ಮಾರಾಟ ಮಾಡುವ ಚಿಂತನೆಯೇ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ (ಮಾ.25): ಕೋಲಾರ (Kolar) ಜಿಲ್ಲೆಯ ಕೆಜಿಎಫ್‌ನಲ್ಲಿರುವ (KGF) ಬೆಮೆಲ್‌ ಕಾರ್ಖಾನೆ (BEML Factory) ಎಲ್ಲಿಯವರೆಗೆ ಲಾಭದಲ್ಲಿರುತ್ತದೆಯೋ ಅಲ್ಲಿಯವರೆಗೂ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಅಥವಾ ಮಾರಾಟ ಮಾಡುವ ಚಿಂತನೆಯೇ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ (Murugesh Nirani) ಸ್ಪಷ್ಟಪಡಿಸಿದರು. ಜೆಡಿಎಸ್‌ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವುದೇ ಕಾರಣಕ್ಕೂ ಬೆಮೆಲ್‌ ಕಾರ್ಖಾನೆಯನ್ನು ಮಾರುವುದಿಲ್ಲ. ಆ ಕಾರ್ಖಾನೆಯು ಲಾಭದಲ್ಲಿ ನಡೆಯುವವರೆಗೂ ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ. ಅಲ್ಲಿನ ನೌಕರರು ಸಹ ಭಯಪಡಬೇಕಾಗಿಲ್ಲ ಎಂದು ಹೇಳಿದರು.

ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳ ಹೆಚ್ಚುವರಿ ಭೂಮಿಯನ್ನು ಆಯಾ ರಾಜ್ಯಕ್ಕೆ ಕೊಡಬೇಕು ಎಂದು ನೀತಿ ಆಯೋಗದ ತೀರ್ಮಾನವಾಗಿದೆ. ಅದರಂತೆ ಇಡೀ ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಅನ್ವಯ ಆಗುವಂತೆ ನೀತಿ ಆಯೋಗದ ಶಿಫಾರಸಿನಂತೆ ಕಾರ್ಖಾನೆ ಪ್ರದೇಶ ಹೊರತುಪಡಿಸಿ ಖಾಲಿ ಉಳಿದಿರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳುವ ಕುರಿತು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅಂತೆಯೇ ಬೆಮೆಲ್‌ನ 1975 ಎಕರೆ ಹೆಚ್ಚುವರಿ ಭೂಮಿ ಕೆಐಎಡಿಬಿಗೆ ಕೊಡಲು ಶಿಫಾರಸು ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ನಮಗೆ ಬಂದ ನಂತರ ಕೋಲಾರದಲ್ಲಿ ಹೊಸ ಕೈಗಾರಿಕೆಗಳು ಬರುವ ಸಲುವಾಗಿ ಬಳಕೆ ಮಾಡುತ್ತಿದೆ ಎಂದರು.

BEML Factory ಕೋಲಾರದ ಬೆಮೆಲ್ ಕಾರ್ಖಾನೆ ಖಾಸಗಿಯವರಿಗೆ ಹಸ್ತಾಂತರ ಇಲ್ಲ, ನಿರಾಣಿ ಸ್ಪಷ್ಟನೆ

ಕೋಲಾರ ಚಿನ್ನದ ಗಣಿಯಲ್ಲಿ 16 ಸಾವಿರ ಎಕರೆ ಭೂಮಿ ಕೇಂದ್ರ ಸರ್ಕಾರದ ವಶದಲ್ಲಿದೆ. ಅದರಲ್ಲಿ 2 ಸಾವಿರ ಎಕರೆ ಒತ್ತುವರಿಯಾಗಿದೆ. ಈಗ ಗಣಿಗಾರಿಕೆ ಸ್ಥಗಿತಗೊಂಡಿದ್ದು ಅಲ್ಲಿ ನಾವು ಕೇಂದ್ರಕ್ಕೆ ಕೊಟ್ಟಿದ್ದ 3500 ಎಕರೆಯಲ್ಲಿ ಚಿನ್ನ ಇದೆಯಾ ಎಂದು ಪರಿಶೀಲನೆ ನಡೆಸಿ ವಾಪಸ್‌ ನಮಗೆ ಹಸ್ತಾಂತರಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಈಗ ಆ ಜಾಗದಲ್ಲಿ ಚಿನ್ನ ಇಲ್ಲ ಎಂದು ವರದಿಯಾಗಿದ್ದು ನಾವು ಕೊಟ್ಟಿದ್ದ ಜಾಗವನ್ನು ಕೇಂದ್ರ ನಮಗೆ ವಾಪಸ್‌ ಕೊಡಲು ನಿರ್ಧರಿಸಿದೆ. ಸರ್ವೆ ಸಂಖ್ಯೆ ಇತ್ಯಾದಿಗಳನ್ನು ಪರಿಶೀಲಿಸಿ ಕಳಹಿಸಿದ ನಂತರ ಕೆಜಿಎಫ್‌ನ ಇಡೀ ವಲಯದೊಂದಿಗೆ ಇತರೆ ಹೊಣೆಯನ್ನು ಸಹ ನೀಡುವುದಾಗಿ ತಿಳಿಸಿದೆ. ಮೊದಲು 3500 ಎಕರೆ ಜಾಗವನ್ನು ಕೊಡುವಂತೆ ಹೇಳಿದ್ದು, ಉಳಿದ ಹೊಣೆಗಾರಿಕೆಯನ್ನು ಪಡಯಲು ಸಭೆ ನಡೆಸಿ ಹಂತ ಹಂತವಾಗಿ ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮೈಸೂರು ಲ್ಯಾಂಪ್ಸ್‌ ಜಾಗ ಮಾರೋದಿಲ್ಲ: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯ 21 ಎಕರೆ ಜಾಗವನ್ನು ಪರಭಾರೆ ಮಾಡುವ ಯಾವುದೇ ಉದ್ದೇಶವಿಲ್ಲ, ಬದಲಾಗಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ‘ಎಕ್ಸಪೀರಿಯನ್ಸ್‌ ಬೆಂಗಳೂರುಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದರು. ಫೆ.15 ರಂದು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಯೋಜನೆ ಅನುಷ್ಠಾನ ಸಂಬಂಧ ಹಿರಿಯ ಐಎಎಸ್‌ ಅಧಿಕಾರಿಗಳು, ಸಾರ್ವಜನಿಕ ಗಣ್ಯರನ್ನು ಒಳಗೊಂಡ ಟ್ರಸ್ಟ್‌ ರಚಿಸಲಾಗಿದೆ. 

48 ಯೋಜನೆಗಳಿಗೆ ಅನುಮೋದನೆ, 6,393 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿ

ಅಲ್ಲದೇ ಕಾರ್ಖಾನೆಯ ಜಾಗದಲ್ಲಿ ಇರುವ ಕಟ್ಟಡಗಳಲ್ಲಿ ಬೆಂಗಳೂರಿನ ಬೆಳವಣಿಗೆ ಬಗ್ಗೆ ವಿನೂತನ ಅನುಭವಗಳನ್ನು ಸಾರ್ವಜನಿಕರಿಗೆ ನೀಡಲು ವಿವಿಧ ಗ್ಯಾಲರಿಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ ಕೆ.ಟಿ. ಶ್ರೀಕಂಠೇಗೌಡ, ಸಾವಿರಾರು ಕೋಟಿ ರು. ಬೆಲೆ ಬಾಳುವ ಈ ಜಾಗವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ಟ್ರಸ್ಟ್‌ ಮಾಡಲಾಗಿದೆ. ಮ್ಯೂಸಿಯಂ ಮಾಡುವ ಬದಲು ಉದ್ಯಾನವನ ಮಾಡಿ ಎಂದು ಸಲಹೆ ನೀಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌