* ಬಿಜೆಪಿ ಶಾಸಕ ರೇಣುಕಾಚಾರ್ಯ ಎಸ್‌ಸಿ ರಹಸ್ಯ ಬಯಲು
* ಮಕ್ಕಳ ವಿದ್ಯಾಭ್ಯಾಸಕ್ಕೆ ಎಸ್ಸಿ ಸರ್ಟಿಫಿಕೇಟ್
* ದಾಖಲೆ ಬಿಡುಗಡೆ ಮಾಡ್ತೀವಿ, ರಾಜೀನಾಮೆಗೆ ಸಿದ್ಧರಾಗಲು ಸವಾಲು
ವರದಿ : ಮಧು.ಎಂ.ಚಿನಕುರಳಿ
ಮೈಸೂರು, (ಮಾ.24): ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಬಿಜೆಪಿ ಶಾಸಕ ಎಂಪಿ ರೇಣಾಕಾಚಾರ್ಯ ಅವರ ಎಸ್‌ಸಿ ರಹಸ್ಯ ಬಯಲಾಗಿದೆ. ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ರೇಣುಕಾಚಾರ್ಯ ಅವರ ಎಸ್‌ಸಿ ರಹಸ್ಯವನ್ನು ದಾಖಲೆಗಳ ಸಮೇತ ಬಟಾಬಯಲು ಮಾಡಿದ್ದಾರೆ.
ಹೌದು... ರೇಣುಕಾಚಾರ್ಯ (MP Renukacharya) ಹಾಗೂ ಕುಟುಂಬ ಎಸ್ಸಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಹಿಜಾಬ್, ಮುಸ್ಲಿಂ ವ್ಯಾಪರಿಗಳಿಗೆ ಬಹಿಷ್ಕಾರ, ಈ ಬಗ್ಗೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಚ್‌ಡಿಕೆ
ಈ ಸಂಬಂಧ ಇಂದು(ಗುರುವಾರ) ಮೈಸೂರು ಕಾಂಗ್ರೆಸ್ (Mysuru Congress) ಕಚೇರಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಂಪಿ.ರೇಣುಕಾಚಾರ್ಯ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಬೋಟನ್ನು ಮಣ್ಣಿನ ಮೇಲೆ ಓಡಿಸುತ್ತಾರೆ ಎಂದು ಲೇವಡಿ ಮಾಡಿದ ಅವರು, ಅವರಿಗೆ ಚಂದನ್ ಹಾಗೂ ಚೇತನಾ ಇಬ್ಬರು ಮಕ್ಕಳಿದ್ದಾರೆ. ಮಗ ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಗಳು ಚೇತನಾ ಬೆಂಗಳೂರಿನಲ್ಲಿದ್ದಾರೆ. ಇವರಿಬ್ಬರಿಗೂ ರೇಣುಕಾಚಾರ್ಯ ಎಸ್ಸಿ ಸರ್ಟಿಫಿಕೇಟ್ ಕೊಡಿಸಿದ್ದಾರೆ ಎಂದು ಆರೋಪ ಮಾಡಿದರು.
ಮಗ ಹಾಗೂ ಮಗಳಿಗೆ ಎಸ್ಸಿ ಎಸ್ಟಿ ನಿಗಮದಿಂದ 45 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಜೊತೆಗೆ ಬ್ಯಾಂಕ್‌ನಿಂದ 80 ಲಕ್ಷ ಪಡೆದಿರುವ ಬಗ್ಗೆ ಮಾಹಿತಿ ಇದ್ದು, ಕೆಲವೇ ದಿನಗಳಲ್ಲಿ ನಾವು ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಬಾಂಬ್ ಸಿಡಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಜಗತ್ಪ್ರಸಿದ್ಧ. ಫೇಕ್ ಸರ್ಟಿಫಿಕೇಟ್ ಪಡೆದಿರುವ ದಾಖಲೆಗಳನ್ನು ಮುಖ್ಯಮಂತ್ತಿಗಳಿಗೆ ಕಳುಹಿಸಿದ್ದೇನೆ. ಎಸ್ಸಿ, ಎಸ್ಟಿಯ ಸೌಲಭ್ಯಗಳನ್ನು ಬಿಜೆಪಿ ಮುಖಂಡರು ಕಸಿಯುತ್ತಿದ್ದಾರೆ. ರೇಣುಕಾಚಾರ್ಯ ಮಕ್ಕಳ ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಎಂದು ನಮೂದಾಗಿದೆ. ರೇಣುಕಾಚಾರ್ಯ ಅಣ್ಣ ಎಂ.ಪಿ.ದಾರಕೇಶ್ವರಯ್ಯ ಕೂಡಾ ಎಸ್ಸಿ ಸರ್ಟಿಫಿಕೇಟ್ ಪಡೆದಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದರು.
ಇದೇ ಕೆಲಸ ಕಾಂಗ್ರೆಸ್ ನವರು ಮಾಡಿದ್ರೆ ಸುಮ್ಮನಿರುತಿದ್ರಾ? ಇದೊಂದು ಕ್ರಮಿನಲ್ ಅಫೆನ್ಸ್ ಆಗಿದ್ದು, ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಮೌನವಹಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಹಾಗೂ ಎಸ್ಸಿ, ಎಸ್ಟಿ ಆಯೋಗಕ್ಕೆ ದೂರು ನೀಡುವೆವು. ಬಿಜೆಪಿಯ ದಲಿತ ನಾಯಕರು ತಮ್ಮ ಸಮುದಾಯಕ್ಕೆ ಅನ್ಯಾಯ ಆಗ್ತಿದ್ರೂ ಕಣ್ಮುಚ್ಚಿ ಯಾಕೆ ಕುಳಿತಿದ್ದೀರಿ ಎಂದು ಪ್ರಶ್ನೆ ಮಾಡಿದರು.
ರೇಣುಕಾಚಾರ್ಯ ಕೂಡ ತಮ್ಮ ಮೇಲಿನ ಆರೋಪಗಳಿಗೆ ದಾಖಲೆಗಳಿದ್ದರೆ ರಾಜೀನಾಮೆ ಕೊಡೋದಾಗಿ ತಿಳಿಸಿದ್ದಾರೆ. ನಾವು ಬ್ಯಾಂಕ್ ಸ್ಟೇಟ್ ಮೆಂಟ್ ಕಾಯುತ್ತಿದ್ದು ಅಲ್ಲಿವರೆಗೆ ನೀವು ನಿಮ್ಮ ಮಾತಿಗೆ ಬದ್ಧರಾಗಿರಿ ಎಂದು ರೇಣುಕಾಚಾರ್ಯ ಅವರಿಗೆ ಸವಾಲು ಹಾಕಿದರು.
ಬಿಜೆಪಿ ಮೌನ ವಹಿಸಿರೋದಕ್ಕೆ ಉತ್ತರ ಕೊಡಿ.
ಬಿಜೆಪಿಯವರು ಸತ್ಯ ಹರಿಶ್ಚಂದ್ರರಂತೆ ಆಡುತ್ತಾರೆ. ತಮ್ಮದೇ ಶಾಸಕರು, ಮುಖಂಡರು ಎಸ್ ಸಿ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಮೌನ ವಹಿಸಿರುವುದಕ್ಕೆ ಜನರಿಗೆ ಉತ್ತರ ಕೊಡಿ. ದೆಹಲಿಯ ಎಸ್ಸಿ ಎಸ್ಟಿ ನಿಗಮ ಹಾಗೂ ಸ್ಪೀಕರ್‌ಗೆ ರೇಣುಕಾಚಾರ್ಯರನ್ನು ಅಮಾನತು ಮಾಡುವಂತೆ ದೂರು ನೀಡಲಾಗುವುದು. ಈ ವಿಚಾರದಲ್ಲಿ ಬಿಜೆಪಿ ಮುಖಂಡರಿಗೆ ನಾಚಿಕೆಯಾಗುವುದಿಲ್ಲ. ಕಾಂಗ್ರೆಸ್ ಅಥವಾ ಬೇರೆ ಅವರು ಈ ಕೆಲಸ ಮಾಡಿದ್ದರೆ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದರು. ಇದು ಕ್ರಿಮಿನಲ್ ಅಪರಾಧ. ರೇಣುಕಾಚಾರ್ಯ ಯಡಿಯೂರಪ್ಪ ಅವರ ಕ್ಲೋಸ್ ಫ್ರೆಂಡ್ ಆಗಿದ್ದು, ನಿಮ್ಮ ನೀಲಿಗಣ್ಣಿನ ಹುಡುಗ ರೇಣುಕಾಚಾರ್ಯ, ಸಿಟಿ.ರವಿ ಅಶೋಕ್ ಎಲ್ಲಿದ್ದೀರಾ ? ಈ ಬಗ್ಗೆ ಉತ್ತರ ಕೊಟ್ಟು ಕ್ರಿಮಿನಲ್ ಕೇಸ್ ಹಾಕಿ ಅರೆಸ್ಟ್ ಮಾಡಿ ಎಂದು ಒತ್ತಾಯಪಡಿಸಿದರು.
ಸರ್ಕಾರದ ಕುಮ್ಮಕ್ಕಿನಿಂದ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ
ಇನ್ನು ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ವಿಚಾರ ಮಾತನಾಡಿದ ಲಕ್ಷ್ಮಣ್, ಕೆಲ ಹಿಂದೂ ಸಂಘಟನೆಯವರು ಕಾನೂನಿನ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಕುಮ್ಮಕ್ಕಿನಿಂದಲೇ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಮಾಡಲಾಗಿದೆ ಎಂದರು. ಇದು ರಾಜ್ಯದಿಂದ ಮುಸ್ಲಿಂ ಸಮುದಾಯವನ್ನೇ ಬಹಿಷ್ಕರಿಸುವ ಹುನ್ನಾರವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ, ದೇಶದ ಮರ್ಯಾದೆ ಹೋಗುತ್ತಿದೆ. ದುಬೈ, ಕುವೈತ್, ಅಬುದಾಬಿ ಸೇರಿ ಅನೇಕ ರಾಷ್ಟ್ರಗಳಲ್ಲೂ ಹಿಂದುಗಳು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಅಲ್ಲಿ ಅವರನ್ನು ಬಹಿಷ್ಕಾರ ಮಾಡಿದರೆ ಅವರಿಗೆ ನೀವು ಕೆಲಸ ಕೊಡುತ್ತೀರಾ ? ದೇಶದಲ್ಲೇ ಕಳೆದ 50ವರ್ಷದಲ್ಲೇ ಹೆಚ್ಚಿನ ನಿರುದ್ಯೋಗ ಸಮಸ್ಯೆ ಇದೆ. ಇದನ್ನ ಡೈವರ್ಟ್ ಮಾಡಲು ಬೇರೆ ಬೇರೆ ವಿಷಯಗಳನ್ನು ಮಧ್ಯೆ ತರುತ್ತಿದ್ದಾರೆ ಎಂದು ಕುಟುಕಿದರು.
ನೀವೆನು ಬಿಜೆಪಿ ಏಜೆಂಟಾ.?
ಇನ್ನು ಮುಸ್ಲಿಂ ವ್ಯಾಪರಸ್ಥರಿಗೆ ಬಹಿಷ್ಕಾರ ಸಂಬಂದ ಮಂಗಳೂರು ಕಮಿಷನರ್ ಮೇಲೆ ಹರಿಹಾಯ್ದಿರುವ ಲಕ್ಷ್ಮಣ್ ಮಂಗಳೂರು ಕಮಿಷನರ್ ಏನು ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ನೀವೆನು ಬಿಜೆಪಿ ಏಜೆಂಟಾ.? ಈ ಬಗ್ಗೆ ಯಾಕೆ ಇನ್ನೂ ಕ್ರಮ ಆಗಿಲ್ಲ ? ಹೋಂ ಮಿನಿಸ್ಟರ್ ಅರಗ ಜ್ಞಾನೇಂದ್ರ ಏನ್ಮಾಡ್ತಿದ್ದೀರಾ? ಎಂದು ಕೇಳಿದರು.
ಆರಗ ಜ್ಞಾನೇಂದ್ರ Foolish ಗೃಹ ಮಂತ್ರಿ.
ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪರಕ್ಕೆ ಅವಕಾಶ ನಿರಾಕರಣೆ ವಿಚಾರದಲ್ಲಿ ಗೃಹ ಸಚಿವರ ನಡೆ ಟೀಕಿಸಿರುವ ಅವರು ಆರಗ ಜ್ಞಾನೇಂದ್ರ Foolish ಗೃಹ ಮಂತ್ರಿ ಎಂದಿದ್ದಾರೆ. ಇಂತ ಬೇಜವಾಬ್ದಾರಿ ಮಂತ್ರಿಯನ್ನು ನಾವು ನೋಡಿಲ್ಲವೆಂದರು.
ಮನೆಗೊಂದು ಕಾನೂನು ತನ್ನಿ.
ಕಾಶ್ಮೀರ ಫೈಲ್ಸ್ ಸಿನಿಮಾ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದೆ ಎಂದು ಕಿಡಿಕಾರಿದ ಅವರು ಕಾಶ್ಮಿರ ಫೈಲ್ಸ್ ಸಿನಿಮಾ ಎಲ್ಲರೂ ಕಡ್ಡಾಯವಾಗಿ ನೋಡಬೇಕೆಂದು ಮನೆಗೊಂದು ಕಾನೂನು ತನ್ನಿ ಎಂದು ಟೀಕಿಸಿದರು. ಚಿಪತ್ರದ ನಿರ್ದೇಶಕನಿಗೆ ವೈ ಕ್ಯಾಟಗರಿ ಭದ್ರತೆಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಅನುಪಮ್ ಖೇರ್ ಸೇರಿ ಚಿತ್ರದವರೆಲ್ಲಾ ಬಿಜೆಪಿಯವರೇ ಆಗಿದ್ದು ಕಾಶ್ಮೀರ್ ಫೈಲ್ಸ್ ಗಾಗಿ ಪುನೀತ್ ಸಿನಿಮಾ ತೆಗೆದರೆ ಜನ ಕಲ್ಲು ಹೊಡೆಯುತ್ತಾರೆ ಎಂದು ಎಚ್ಚರಿಸಿದರು.