Karnataka Politics: ನಾನು ಸಿಎಂ ಆಗುತ್ತೆನೆಂದು ಎಲ್ಲಿಯೂ ಹೇಳಿಲ್ಲ, ವದಂತಿಗಳಿಗೆ ತೆರೆಎಳೆದ ಸಚಿವ

By Suvarna NewsFirst Published Dec 10, 2021, 6:36 PM IST
Highlights

* ನಾನು ಮುಖ್ಯ ಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ
* ಸ್ಪಷ್ಟನೆ ಕೊಟ್ಟ ಸಚಿವ ಮುರುಗೇಶ್ ನಿರಾಣಿ
* ಬಾಗಲಕೋಟೆ ಜಿಲ್ಲೆಯ ‌ಬೀಳಗಿಯಲ್ಲಿ ಹೇಳಿಕೆ

ಬಾಗಲಕೋಟೆ, (ಡಿ.10): ನಾನೂ  ಮುಖ್ಯಮಂತ್ರಿ (Chief Minister) ಯಾಗುತ್ತೇನೆ ಅಂತ ಎಲ್ಲಿಯೂ ‌ಹೇಳಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾ ರಿಕಾ ಸಚಿವ ಮುರಗೇಶ ನಿರಾಣಿ (Murugesh Nirani) ಸ್ಪಷ್ಟಪಡಿಸಿದರು.

 ಇಂದು (ಶುಕ್ರವಾರ) ಬಾಗಲಕೋಟೆ (Bagalakot) ಜಿಲ್ಲೆಯ ‌ಬೀಳಗಿ ಪಟ್ಟಣ ಪಂಚಾಯತಿಯಲ್ಲಿ ವಿಧಾನಪರಿಷತ್‌ಗೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥವಾಗಿದ್ದಾರೆ.‌ ಅವರ ನೇತೃತ್ವದಲ್ಲಿ ಉತ್ತಮ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿವೆ. ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ  ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಮೂಲಕ ವದಂತಿಗಳಿಗೆ ತೆರೆ ಎಳೆದರು.

Murugesh Nirani: ನಿರಾಣಿ ಆದಷ್ಟು ಬೇಗ ಸಿಎಂ ಆಗ್ತಾರೆ, ಸ್ಫೋಟಕ ಭವಿಷ್ಯ ನುಡಿದ ಬಿಜೆಪಿ ನಾಯಕ

ಒಂದೂವರೆ ವರ್ಷಗಳ ಕಾಲ ನಾನು ಮಂತ್ರಿಯಾಗಿದ್ದಿಲ್ಲ, ಈಗ ನಮ್ಮ ಪಕ್ಷದ ನಾಯಕರು ಮಂತ್ರಿ ಜವಾಬ್ದಾರಿ ನೀಡಿದ್ದಾರೆ ಅದನ್ನು ನಿಭಾಯಿಸಲು ಕೆಲಸ ಮಾಡುತ್ತಿದ್ದೇನೆ ಎಂದರು.

ನನ್ನ ಬಗ್ಗೆ ಕೆಲವರು ಮಾತನಾಡುತ್ತಾರೆ ಅದಕ್ಕೆಲ್ಲ ಉತ್ತರ ಕೊಡುವ ಅಗತ್ಯ ವಿಲ್ಲ ಎಂದು ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ತಿರುಗೇಟು ಕೊಟ್ಡರು.

ಸಮಸ್ತ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜನರಿಗೆ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Karnataka BJP Politics: ಸಿಎಂ ಆಗುವ ಬಗ್ಗೆ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಿಷ್ಟು

ಮಠಾಧೀಶರ ಒಕ್ಕೂಟದ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಇದರ ಬಗ್ಗೆ ‌ನನಗೆ‌ ಏನೂ ಗೊತ್ತಿಲ್ಲ. ನನ್ನನ್ನೂ ಯಾರೊಬ್ಬರೂ ಸಭೆಗೆ ಬರುವಂತೆ ಕರೆದಿಲ್ಲ. ಒಕ್ಕೂಟದ ಸಭೆಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ವಿಧಾನ ಪರಿಷತ್ ನಲ್ಲಿ ನಮ್ನ ಪಕ್ಷ ಸ್ಪಷ್ಟ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೀಳಗಿ ಮತಕ್ಷೇತ್ರ ಬಿಟ್ಟು ಎಲ್ಲಿಯೂ ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ‌ ಸ್ಪರ್ಧೆ ಮಾಡಲ್ಲ.‌ಬೀಳಗಿಯಲ್ಲೇ ನನ್ನ ರಾಜಕೀಯ ಶುರು ಮಾಡಿದ್ದೇನೆ.ಇಲ್ಲಿಯ ಮತದಾರರಿಂದಲೇ ಶಾಸಕನಾಗಿ, ಮಂತ್ರಿಯಾಗಿದ್ದೇನೆ ಎಂದರು.

 ಯತ್ನಾಳ್‌ ಪ್ರತಿಕ್ರಿಯೆ
ಕೈಗಾರಿಕಾ ಸಚಿವ ಮುರುಗೇಶ ನಿರಾಣಿ(Murugesh Nirani) ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿರುವ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa)ನವರ ಭವಿಷ್ಯ ಸುಳ್ಳಾಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌(Basanagouda Patil Yatnal) ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಯತ್ನಾಳ್, 'ಕರ್ನಾಟಕ ರಾಜ್ಯವನ್ನು ಉಳಿಸುವವರು, ಯೋಗ್ಯರು, ಸಮರ್ಥರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಹಿರಿಯರಾದ ಕೆ.ಎಸ್.ಈಶ್ವರಪ್ಪ(KS Eshwarappa)ನವರ ಬಗ್ಗೆ ನನಗೆ ಗೌರವವಿದೆ. ಯಾಕೋ ಏನೋ ಅವರಿಗೆ ಬೀಳಗಿಗೆ ಹೊದಾಗ ಏನಾಗಿದೆಯೋ ಗೊತ್ತಿಲ್ಲ. ಅವರ ಮಾತಿಗೆ ನನ್ನದು ಮಾತ್ರವಲ್ಲ ವಿಜಯಪುರ ಹಾಗೂ ಬಾಗಲಕೋಟೆಯ ಯಾವುದೇ ಶಾಸಕರ ಸಹಮತವಿಲ್ಲವೆಂದು ಎಂದರು.

ನಿರಾಣಿ ಸಿಎಂ ಆಗ್ತಾರೆ ಎಂದಿದ್ದ ಈಶ್ವರಪ್ಪ
ಮುರುಗೇಶ್ ನಿರಾಣಿ (Murugesh Nirani) ಆದಷ್ಟು ಬೇಗ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಸ್ಫೋಟಕ ಭವಿಷ್ಯ ನುಡಿದಿದ್ದರು.

ಬಾಗಲಕೋಟೆ (Bagalkot) ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನ.28ನಡೆದ ಬಿಜೆಪಿ (BJP) ಹಿಂದುಳಿದ ವರ್ಗದ ಘಟಕದ ಕಾರ್ಯಕಾರಿ ಸಭೆಯಲ್ಲಿ ಈ ಮಾತನ್ನು ಹೇಳಿದ್ದರು. 

ಗೊತ್ತಿಲ್ಲ ಮುಂದೆ ಯಾವತ್ತೋ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗ್ತಾರೆ. ಅವರಿಗೆ ಸಿಎಂ ಆಗೋ ಶಕ್ತಿ ಇದೆ. ಯಾವತೋ ಸಿಎಂ ಅಗೋ ಶಕ್ತಿ ಇದೆ. ಕರ್ತೃ ಶಕ್ತಿ ಇದೆ. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗ್ತಾರೆ.. ಹಾಗಂತ ನಾಳೆನೇ ಬಸವರಾಜ ಬೊಮ್ಮಾಯಿನಾ ತೆಗಿತಾರಾ ಅಂತ ಬರೀಬೇಡಿ ಎಂದು ಈಶ್ವರಪ್ಪ ಎಂದಿದ್ದರು.

ಇನ್ನು ಇದೇ ವೇಳೆ ಮಾತನಾಡುತ್ತ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ನಿರಾಣಿಗೆ ಈಶ್ವರಪ್ಪ ಕೇಳಿದ್ದರು. ಇದಕ್ಕೆ
ನಿರಾಣಿ ಫುಲ್ ಖುಷಿಯಾಗಿ ಓಕೆ  ಗುರುತು ತೋರಿ ನಕ್ಕಿದ್ದರು.
 

click me!