* ಜೆಡಿಎಸ್ ಟಿಕೆಟ್ ಕೈತಪ್ಪಲು 'ಮೈಸೂರು ಮಹಾರಾಜ'ರು ಕಾರಣ
* ಗಂಭೀರ ಆರೋಪ ಮಾಡಿದ ಸಂದೇಶ್ ನಾಗರಾಜ್
* ಜೆಡಿಎಸ್ ತೊರೆಯುವುದಾಗಿಯೂ ಅಧಿಕೃತವಾಗಿ ಹೇಳಿಕೆ
ಮೈಸೂರು, (ಡಿ.10): ವಿಧಾನಪರಿಷತ್ ಚುನಾವಣೆಯಲ್ಲಿ (MLC Election) ಜೆಡಿಎಸ್ ನಿಂದ ಟಿಕೆಟ್ ಕೈತಪ್ಪಲು ಮೈಸೂರು ಮಹಾರಾಜರು ಕಾರಣ ಎಂದು ಸಂದೇಶ್ ನಾಗರಾಜ್ (Sandesh Nagaraj) ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ (Mysuru) ಇಂದು(ಡಿ.10) ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್, ಜೆಡಿಎಸ್(JDS) ನಾಯಕರೇ ನನ್ನ ಮನೆಗೆ ಬಂದು ಬಿ ಫಾರ್ಮ್ ಕೊಟ್ಟು ಹೋಗಿದ್ದರು.ಆದರೆ ಅಪ್ಪ-ಮಗ ಕಿತ್ತಾಡಿಕೊಂಡು ನನಗೆ ಅಪಮಾನ ಮಾಡಿದರು. ಬಳಿಕ ಮೈಸೂರು ಮಹಾರಾಜರ ಮಾತು ಕೇಳಿ ನನಗೆ ಟಿಕೆಟ್ ಕೊಡಲಿಲ್ಲ ಎಂದರು.
undefined
MLC Election : ಅವಕಾಶ ತಪ್ಪಿಸಿಕೊಂಡ ಸಂದೇಶ್ : ಎಲ್ಲಾ ಪಕ್ಷ ಸುತ್ತಿ ಬಂದ ಮುಖಂಡಗೆ ಅದೃಷ್ಟ
ಇದೇ ವೇಳೆ ಮೈಸೂರು ಮಹಾರಾಜ ಎಂದರೆ ಚಾಮರಾಜ ಒಡೆಯರ್ ಅಲ್ಲ ಎಂದು ಸ್ಪಷ್ಟಪಡಿಸಿರುವ ಸಂದೇಶ್ ನಾಗರಾಜ್, ನಮ್ಮಂತವರಲ್ಲೇ ಒಬ್ಬರು ಮಹಾರಾಜರಿದ್ದಾರೆ. ಜೆಡಿಎಸ್ ನಲ್ಲಿ ಅವರೇ ಮಂತ್ರಿ, ಸೇನಾಧಿಪತಿ ಎಲ್ಲಾ. ಕೊನೆಗೆ ಅವರೊಬ್ಬರೇ ಪಕ್ಷದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಹೆಸರು ಹೇಳದೆಯೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೆ ಮೈಲ್ಡ್ ರಾಜಕಾರಣ ಮಾಡುತ್ತಿದ್ದೆ , ಇನ್ಮುಂದೆ ರಫ್ ರಾಜಕಾರಣ ಮಾಡ್ತೇನೆ ಅಂತ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ಕೊಟ್ಟರು.
ಅಪ್ಪ ಹಾಗೂ ರೇವಣ್ಣ ಹಿಂದಿನ ದಿನ ಬಂದು ಪಕ್ಷದ ಬಿ ಫಾರ್ಮ್ ಕೊಟ್ಟಿದ್ರು. ಜೆಡಿಎಸ್ ಅವರೇ ನನ್ನ ಮನೆಬಾಗಿಲಿಗೆ ಬಂದಿದ್ರು. ಆದರೆ ಅಪ್ಪ ಮಕ್ಕಳು ಗುದ್ದಾಡಿಕೊಂಡು ನನಗೆ ಅವಮಾನಮಾಡಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರದಲ್ಲೆ ಮತ್ತೊಂದು ಜೆಡಿಎಸ್ ಸೀನಿಯರ್ ವಿಕೆಟ್ ಪತನ : ಬಿಜೆಪಿ ಸೇರ್ಪಡೆ ಬಗ್ಗೆ ಕನ್ಫರ್ಮ್
ಹಿಂದಿನ ಬಿ ಫಾರ್ಮ್ ಯಾರು ಕೊಟ್ಟಿದ್ದು ಎಲ್ಲವನ್ನು ತೋರಿಸುತ್ತೇನೆ. ಯಾರು ಯಾರಿಂದಲೂ ಯಾರನ್ನು ಮುಗಿಸಲು ಸಾಧ್ಯವಿಲ್ಲ. ಜನವರಿ 5ನೇ ತಾರೀಖು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಹೇಳುತ್ತೇನೆ. ನಂತರ ಯಾರನ್ನ ಯಾರು ಮುಗಿಸುತ್ತಾರೆ ಗೊತ್ತಾಗುತ್ತೆ. ಇಷ್ಟು ದಿನ ಮೈಲ್ಡ್ ರಾಜಕಾರಣ ಮಾಡುತ್ತಿದ್ದೆ, 5ನೇ ತಾರೀಕಿನ ನಂತರ ರಫ್ ರಾಜಕಾರಣ ಮಾಡುತ್ತೇನೆ ಎಂದು ಬಾಂಬ್ ಸಿಡಿಸಿದರು.
ಜೆಡಿಎಸ್ ಬಿಡುವುದು ಪಕ್ಕಾ
ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ. ಸ್ನೇಹಪೂರ್ವಕವಾಗಿ ಸಿದ್ದಾರಾಮಯ್ಯ , ಜಮೀರ್ , ಸಚಿವ ಎಸ್ಟಿಸ್ ಎಲ್ಲರೂ ಬಂದು ಭೇಟಿ ಮಾಡಿದ್ದಾರೆ. ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಮಾಡಿಲ್ಲ. ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡೋದು ಪಕ್ಕಾ. ಜನವರಿ 5 ರ ಬಳಿಕ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದು ಸಂದೇಶ್ ನಾಗರಾಜ್ ಸ್ಪಷ್ಟಪಡಿಸಿದರು.
ಈ ಬಾರಿಯ ಎಲೆಕ್ಷನ್ ನಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಬೆಂಬಲ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಏನು ಎಂಬುದನ್ನ ತೋರಿಸುತ್ತೇನೆ ಎಂದು ಗುಡುಗಿದರು.
ಕಾಂಗ್ರೆಸ್ ನಾಯಕರ ಜತೆ ಮಾತುಕತೆ
ಹೌದು..ಈಗಾಗಲೇ ಜೆಡಿಎಸ್‌ನಿಮದ ಒಂದು ಕಾಲು ಆಚೆ ಇಟ್ಟಿರುವ ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆಸಿದ್ದು, ಹಿರಿಯ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ನಾಯಕರ ಜತೆಯೂ ಸಂದೇಶ್ ನಾಗರಾಜ್ ಒಡನಾಟ ಇಟ್ಟುಕೊಂಡಿದ್ದಾರೆ. ಇದರಿಂದ ಸಂದೇಶ್ ನಾಗರಾಜ್ ಮುಂದೆ ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಬಿಜೆಪಿಯಿಂದ ಟಿಕೆಟ್ ಕಟ್
ಜೆಡಿಎಸ್ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ನಾನು ಬಿಜೆಪಿಗೆ ಬರುತ್ತೇವೆ, ಮತ್ತೆ ಮೂರನೇ ಬಾರಿ ಮೈಸೂರು- ಚಾಮರಾಜನಗರ (Mysuru-chamarajanagar) ಸ್ಥಳೀಯ ಸಂಸ್ಥೆಯಿಂದ ಗೆದ್ದು ಬರುತ್ತೇನೆ ಎಂದು ಹೇಳಿದ್ದರು. ಬೆಂಗಳೂರಿನ ಬಿಜೆಪಿ ಕಚೇರಿಯಿಂದಲೇ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಆದ್ರೆ, ಅಂತಿಮವಾಗಿ ಬಿಜೆಪಿ ಟಿಕೆಟ್ ಸಿಗಲಿಲ್ಲ. ಇತ್ತ ಜೆಡಿಎಸ್ ಸಹ ಟಿಕೆಟ್ ಕಟ್ ಮಾಡಿದೆ. ಇದರಿಂದ ಸಂದೇಶ ನಾಗರಾಝ್ ಅತ್ತ ಇಲ್ಲ ಇತ್ತ ಇಲ್ಲ ಎನ್ನುವಂತಾಗಿದ್ದಾರೆ.