ಭೂಸನೂರ ಗೆಲ್ಲಿಸಿ, ಸಚಿವರಾಗುವಂತೆ ಹರಸಿ: ಸಚಿವ ಎಂಟಿಬಿ ನಾಗರಾಜ್‌

By Kannadaprabha NewsFirst Published Mar 18, 2023, 8:42 PM IST
Highlights

2023ರ ಚುನಾವಣೆಯಲ್ಲಿ ಮತ್ತೆ ರಮೇಶ ಭೂಸನೂರ ಅವರನ್ನು ಗೆಲ್ಲಿಸಿ, ಸಚಿವರಾಗುವಂತೆ ಹರಸಿ ಎಂದು ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. 

ಸಿಂದಗಿ (ಮಾ.18): 2023ರ ಚುನಾವಣೆಯಲ್ಲಿ ಮತ್ತೆ ರಮೇಶ ಭೂಸನೂರ ಅವರನ್ನು ಗೆಲ್ಲಿಸಿ, ಸಚಿವರಾಗುವಂತೆ ಹರಸಿ ಎಂದು ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಹಮ್ಮಿಕೊಂಡ ಕನಕದಾಸರ ಕಂಚಿನ ಪುತ್ಥಳಿ ಅನಾವರಣ ಅಂಗವಾಗಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ ಕನಕದಾಸರ ಕನಕ ಭವನ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 42 ಕನಕ ಭವನಗಳನ್ನು ಸಿಂದಗಿ ತಾಲೂಕಿಗೆ ಮಂಜೂರಿ ಮಾಡಿದ್ದಾರೆ. ಮುಂದಿನ 2023ರ ಚುನಾವಣೆಯಲ್ಲಿ 130-140 ಮತಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ಶಾಸಕ ರಮೇಶ ಭೂಸನೂರ ಕನಕ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಉಪಚುನಾವಣೆಯಲ್ಲಿ ನನಗೆ ಈ ಅಭೂತ ಪೂರ್ವ ಗೆಲುವು ಆಗಬೇಕಾದರೇ ಅದಕ್ಕೆ ಮುನ್ನುಡಿ ಹಾಕಿದವರೇ ಸಚಿವ ಎಂಟಿಬಿ ನಾಗರಾಜ ಹಾಗೂ ಭೈರತಿ ಬಸವರಾಜ. ಆ ಕಾರಣ ಇಂದು ರಾಂಪೂರ ಪಿಎ ಗ್ರಾಮದಲ್ಲಿ ರಾಯಣ್ಣರ ಪ್ರತಿಮೆ ಹಾಗೂ ಚಾಂದಕವಟೆ ಗ್ರಾಮದಲ್ಲಿ ಕನಕರ ಕಂಚಿನ ಪ್ರತಿಮೆ ಉದ್ಘಾಟನೆ ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರುರಾಜಗೌಡ ಪಾಟೀಲ ಮಾತನಾಡಿದರು. ಈ ವೇಳೆ ಗೊಳಸಾರದ ಸದ್ಗುರು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ತಿಂಥಣಿ ಸಿದ್ದರಾಮಾನಂದಪುರಿ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಮುದ್ದೇಬಿಹಾಳ ಸರೂರ ಮಠದ ಸಿದ್ದಯ್ಯ ಸ್ವಾಮಿಗಳು, ಮುಮ್ಮೇಟಿಗುಡ್ಡ ಅಭಿನವ ಬನಸಿದ್ದೇಶ್ವರ ಮಹಾರಾಜರು, ಯಲಗೋಡ ಗುರುಲಿಂಗ ಮಾಹಾಸ್ವಾಮಿಗಳು, ಸಿದ್ದಪ್ಪ ಪೂಜಾರಿ, ಸಿದ್ದಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಕ್ರೆಡಿಟ್‌ ತೆಗೆದುಕೊಳ್ಳೋದು ಎಚ್ಡಿಕೆಗೆ ಹೊಸತೇನಲ್ಲ: ಸಿ.ಪಿ.ಯೋಗೇಶ್ವರ್‌

ಹುಲಿಜಂತಿ ಮಾಳಿಂಗರಾಯ ಮಹಾರಾಜರು ಆಶೀರ್ವಚನ ನೀಡಿದರು. ರವಿ ನಾಯ್ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಬುಳ್ಳಾ ಸ್ವಾಗತಿಸಿದರು. ಬಿ.ಎಚ್‌.ಜೋಗಿ ನಿರೂಪಿಸಿದರು. ಕುರುಬ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಿದ್ದರಾಮ ಪಾಟೀಲ, ಮಲ್ಲು ಸಾವಳಸಂಗ, ಸಿದ್ದು ಕರಿಗೊಂಡ ಎಂ.ಪಿ.ಬಾದನ, ಸಂಗನಗೌಡ ಪಾಟೀಲ, ಮಹೇಶ ಚಂಚೂರ, ಮಲ್ಲು ಪೂಜಾರಿ, ಪ್ರಕಾಶ ಅಡವಿ, ನಿಂಗಣ್ಣ ಬಿಸನಾಳ, ಬಿರಣ್ಣ ಮಾಸ್ತಾರ್‌ ನಾಗಪ್ಪ ಶಿವೂರ ಸೇರಿದಂತೆ ಗ್ರಾಮಸ್ಥರು ಇದ್ದರು.

ಕ್ಷೇತ್ರದ ಅಭಿವೃದ್ಧಿಯೇ ಜನಪ್ರತಿನಿಧಿಗಳ ಕಾಯಕವಾಗಲಿ: ರಾಜಕೀಯ ಅಂದರೆ ಸುಳ್ಳು ಹೇಳಿ ಜನಗಳನ್ನು ಏಮಾರಿಸುವುದಲ್ಲ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಅವರ ಬೇಡಿಕೆಗಳನ್ನು ಪೂರೈಸುವುದೇ ಜನಪ್ರತಿನಿಧಿಗಳ ಕಾಯಕವಾಗಬೇಕು ಎಂದು ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. ಹೋಬಳಿಯ ದೊಡ್ಡಹರಳಗೆರೆ ಗ್ರಾಪಂ ವ್ಯಾಪ್ತಿಯಲ್ಲಿ 1 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದಿದ್ದರೆ ಈ ಸಮಯಕ್ಕೆಲ್ಲಾ ಹೊಸಕೋಟೆ ನಗರಕ್ಕೆ ಕಾವೇರಿ ನೀರು ಮತ್ತು ಮೆಟ್ರೊ ಯೋಜನೆ ತರಬಹುದಾಗಿತ್ತು. ಆದರೆ ಕೆಲವು ಕಾರಣಗಳಿಂದ ವಿಳಂಬವಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಹಾರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಹೊಸಕೋಟೆವರೆಗೆ ಮೆಟ್ರೋ ರೈಲು ತರವುದು ಶತಾಯಗತಾಯ ಮಾಡಿಯೇ ತೀರುತ್ತೇನೆ. 

ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ಯಾವುದೇ ಊಹಾಪೋಹಾಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಪ್ರಸಕ್ತ ಸಾಲಿನಲ್ಲಿ ಕಾಡುಗೋಡಿ-ಹೊಸಕೋಟೆ ಮೆಟ್ರೋ ಅನುಷ್ಠಾನಕ್ಕೆ 2400 ಕೋಟಿ ಅನುದಾನ ನಿಗದಿಯಾಗಿದ್ದು ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಹೋರಾಟ ಮಾಡುತ್ತೇನೆ. ದಲಿತರ ಕೇರಿಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ 1 ಕೋಟಿ ವಿಶೇಷ ಅನುದಾನ ನೀಡಿದೆ. ಕಾಲೋನಿಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಮುತ್ತಕದಹಳ್ಳಿಗೆ 10 ಲಕ್ಷ, ತಮ್ಮರಸನಹಳ್ಳಿಗೆ 10 ಲಕ್ಷ, ದೊಡ್ಡಹರಳಗೆರೆಗೆ 10ಲಕ್ಷ, ಬಾಲೇನಹಳ್ಳಿಗೆ 15 ಲಕ್ಷ, ದ್ಯಾವಸಂದ್ರಕ್ಕೆ 10 ಲಕ್ಷ, ತಿಮ್ಮಪ್ಪನಹಳ್ಳಿಗೆ 10 ಲಕ್ಷ, ತೆನೆಯೂರುಗೆ 10 ಲಕ್ಷ, ಚಿಕ್ಕಹರಳಗೆರೆಗೆ 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಲಾಗಿದೆ ಎಂದರು.

click me!