ಚುನಾವಣೆ ಸಮೀಪಿಸುತ್ತಿದ್ದಂತೆ ಕುಮಾರಸ್ವಾಮಿ ಮನ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ. ಮಾಜಿ ಪ್ರಧಾನಿ ಮಂತ್ರಿಯೊಬ್ಬರ ಪುತ್ರನಾಗಿರುವ ಕುಮಾರಸ್ವಾಮಿ ಅವರು ಈ ರೀತಿಯ ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ: ಎಂಟಿಬಿ
ಸೂಲಿಬೆಲೆ(ಫೆ.08): ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿನಕ್ಕೊಂದು ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಸೂಲಿಬೆಲೆ ಹೋಬಳಿ ಬಾಗಲೂರು ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಕುಮಾರಸ್ವಾಮಿ ಮನ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ. ಮಾಜಿ ಪ್ರಧಾನಿ ಮಂತ್ರಿಯೊಬ್ಬರ ಪುತ್ರನಾಗಿರುವ ಕುಮಾರಸ್ವಾಮಿ ಅವರು ಈ ರೀತಿಯ ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದರು. ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದು, ಇಲ್ಲಿ ಮುಖ್ಯಮಂತ್ರಿ ಗದ್ದುಗೆ ಯಾವುದೇ ಜಾತಿಗೆ ಸೀಮಿತವಲ್ಲ ಎಂದು ನುಡಿದರು.
undefined
ಎಲ್ಲರನ್ನು ಓಲೈಸಿದ್ರೆನೇ ರಾಜಕಾರಣ ಮಾಡೋಕೆ ಆಗೋದು..! ಎಂಟಿಬಿ ಸಮರ್ಥನೆ
ರಾಜಕೀಯಕ್ಕೆ ಬಂದಿರುವುದು ಜನ ಸೇವೆ ಮಾಡಲಿಕ್ಕೆ: ಎಂ.ಟಿ.ಬಿ. ನಾಗರಾಜ್
ಹೊಸಕೋಟೆ: ಕ್ಷೇತ್ರದ ಅಭಿದ್ಧಿ ವಿಚಾರದಲ್ಲಿ ನಾನು ನನ್ನ ಕುಟುಂಬ ಹಗಲಿರುಳು ಶ್ರಮಿಸುವ ಮೂಲಕ ಜನ ಸೇವೆ ಮಾಡುವುದು ನಮ್ಮ ಉದ್ದೇಶವಾಗಿದೆ. ದೇವರು ನನಗೆ ಹಣ-ಅಂತಸ್ತು ಕೊಟ್ಟಿದ್ದಾನೆ. ನಾನು ರಾಜಕೀಯಕ್ಕೆ ಬಂದಿರುವುದು ಜನರ ಸೇವೆ ಮಾಡುವ ಸಲುವಾಗಿ. ಸಮ್ಮಿಶ್ರ ಸರಕಾರದಲ್ಲೂ ಸಹ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲವೆಂದು ರಾಜೀನಾಮೆ ನೀಡಿ ಬಂದೆ. ಕ್ಷೇತ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಹರಳೂರು ಗ್ರಾಮದಲ್ಲಿ ಸಿಸಿ ರಸ್ತೆ, ಹೈಮಾಸ್‌್ಕ ಲೈಟ್ ಹಾಗೂ ಗ್ರಾವೆಲ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನ ಅಂತಿಮ: ಸಚಿವ ಎಂಟಿಬಿ ನಾಗರಾಜ್
ಕ್ಷೇತ್ರದ ಮತದಾರರ ಋುಣ ನನ್ನ ಮೇಲಿದೆ. ಮತದಾರರ ಋುಣ ತೀರಿಸಲು ಆಗುವುದಿಲ್ಲ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶೇಷ ಅನುದಾನಗಳನ್ನು ತರುವ ಮೂಲಕ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ನಾನು ರಾಜಕೀಯಕ್ಕೆ ಬಂದಿರುವುದು ಸಹ ಜನ ಸೇವೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು. ಗ್ರಾಮಗಳಲ್ಲಿ ಶಾಂತಿ-ಸುವ್ಯವಸ್ಥೆ ನೆಲಸುವಂತೆ ಮಾಡಲು. ಆದರೆ ರಾಜಕೀಯವನ್ನು ಗ್ರಾಮಗಳಲ್ಲಿ ದ್ವೇಷ ಬೆಳೆಸಿ ಸಾಮರಸ್ಯ ಒಡೆಯಲು ಬಳಸಬಾರದು. ಜನ ಯಾರಿಗೇ ಅಧಿಕಾರ ನಡೆಸಲು ಅವಕಾಶ ನೀಡಿದರು ಅವರು ಜನರ ಸೇವೆ ಮಾಡಬೇಕು. ಬಡವರಿಗೆ ಅನ್ಯಾಯವಾಗುವ ರೀತಿಯಲ್ಲಿ ನಡೆಯಬಾರದು ಎಂದರು.
ಕಾರ‍್ಯಕ್ರಮದಲ್ಲಿ ಬಿ.ಎಂ.ಆರ್.ಡಿ.ಎ. ಅಧ್ಯಕ್ಷ ಶಂಕರೇಗೌಡ, ಮುಖಂಡರಾದ ಕೋಡಿಹಳ್ಳಿ ಜಾನಿ, ಬೇಗೂರು ನಾರಾಯಣಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್. ರಾಮು, ಜೆ.ಆರ್.ಡಿ. ಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.