ಸದನದಲ್ಲಿ ಕೆಲಕಾಲ ಗೊಂದಲ ಸೃಷ್ಟಿಸಿದ ಪ್ರಿಯಾಂಕ್ ಖರ್ಗೆ ಕೊರೋನಾ ರಿಪೋರ್ಟ್!

By Suvarna NewsFirst Published Sep 25, 2020, 2:23 PM IST
Highlights

ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ ಅವರ ಕೊರೋನಾ ರಿಪೋರ್ಟ್ ಸದಸದಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಸಿತು. ಬಳಿಕ ಸ್ಪೀಕರ್ ಮಧ್ಯೆ ಪ್ರವೇಶಿಸಿ ಎಲ್ಲದಕ್ಕೂ ತೆರೆ ಎಳೆದರು.

ಬೆಂಗಳೂರು, (ಸೆ.25): ಕೊರೋನಾ ವೈರಸ್ ಪಾಸಿಟಿವ್ ಇದ್ದರೂ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆ ಕಲಾಪಕ್ಕೆ ಹಾಜರಾದರಾ? ಇಂಥದ್ದೊಂದು ಚರ್ಚೆ ಇಂದು (ಶುಕ್ರವಾರ) ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಆರಂಭವಾಗಿತು.

"

ಹೌದು...ಪ್ರಿಯಾಂಕ್ ಖರ್ಗೆ ಅವರನ್ನು ಸದನದಲ್ಲಿ ನೋಡುತ್ತಿದ್ದಂತೆಯೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ ಪ್ರಿಯಾಂಕ್ ಖರ್ಗೆ ಅವರು ಕೋವಿಡ್ ಪಾಸಿಟೀವ್ ಬಂದು ಎರಡೇ ದಿನಕ್ಕೆ ಸದನಕ್ಕೆ ಬಂದಿದ್ದಾರೆ ಎಂದು ಸದನದಲ್ಲಿ ಪ್ರಸ್ತಾಪಿಸಿದರು. 

ರಾಜ್ಯ ವಿಧಾನಮಂಡಲ ಸದನದಲ್ಲಿ ಎಲ್ಲರ ಗಮನಸೆಳೆದ ಕಾಂಗ್ರೆಸ್ ಶಾಸಕನ ಮಾಸ್ಕ್..!

ಇದಕ್ಕೆ ಸ್ಪಷ್ಟನೆ ಕೊಟ್ಟ ಪ್ರಿಯಾಂಕ್ ಖರ್ಗೆ ಅವರು, ಮೊದಲು ನನಗೆ ಕೊರೋನಾ ಪಾಸಿಟಿವ್ ಎಂದು ವೈದ್ಯರು ವರದಿ ಕೊಟ್ಟಿದ್ದರು. ನಂತರ 48 ಗಂಟೆಗಳ ಬಳಿಕ ನೆಗೆಟಿವ್ ಎಂದು ವರದಿ ಬಂತು. ಅನುಮಾನ ಬಂದು ವೈದ್ಯರನ್ನು ಸಂಪರ್ಕಿಸಿ ಮತ್ತೆ ಪರೀಕ್ಷೆಗೆ ಒಳಗಾದಾಗ ನೆಗೆಟಿವ್ ಎಂದು ವರದಿ ಬಂತು. ನಂತರ ವೈರಲಾಜಿಸ್ಟ್ ಅವರನ್ನು ಭೇಟಿ ಮಾಡಿ, ಕೊನೆಗೆ RTPCR ಪರೀಕ್ಷೆಗೂ ಒಳಗಾಗಿದ್ದೆ. ಅದರಲ್ಲಿಯೂ ನೆಗಟಿವ್ ಎಂದಿದೆ ಎಂದು ಸ್ಪಷ್ಟಪಡಿಸಿದರು. 

ಯಾರಿಗೂ ತೊಂದರೆಯಾಗಬಾರದೆಂದು ಎರಡು ದಿನ ಮನೆಯಲ್ಲಿಯೇ ಇದ್ದೆ. ನಿಮಗೆ ಕೊರೋನಾ ಬಂದೇ ಇಲ್ಲ ಅಂತ ವೈರಲಾಜಿಸ್ಟ್ ಹೇಳಿದ ಬಳಿಕ ನಾನು ಸದನಕ್ಕೆ ಹಾಜರಾಗಿದ್ದೇನೆ ಎಂದು ತಮ್ಮ ಕೊರೋನಾ ಬಗ್ಗೆ ಪ್ರಿಯಾಂಕ್ ಖರ್ಗೆ ವಿವರಿಸಿದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕಾಗೇರಿ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಅವರ ಕೊರೋನಾ ಪರೀಕ್ಷಾ ವರದಿಯ ನೆಗೆಟಿವ್ ರಿಪೋರ್ಟ್ ನನ್ನ ಬಳಿ ಇದೆ. ಆತಂಕಬೇಡ ಎಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

click me!