3 ಹಂತದಲ್ಲಿ ಬಿಹಾರ ಚುನಾವಣೆ: ನ.10ಕ್ಕೆ ಮತ ಎಣಿಕೆ

By Suvarna NewsFirst Published Sep 25, 2020, 1:25 PM IST
Highlights

ಬಹು ನಿರೀಕ್ಷಿತ ಬಿಹಾರ ಚುನಾವಣೆ ಘೋಷಣೆಯಾಗಿದ್ದು 3 ಹಂತದಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ಶಿರಾ ವಿಧಾನಸಭಾ ಉಪ ಚುನಾವಣೆಗೆಕ್ಷೇತ್ರಕ್ಕೆ ಇನ್ನೂ ದಿನಾಂಕ ಘೋಷಣೆಯಾಗಬೇಕಿದೆ.

ನವದೆಹಲಿ(ಸೆ.25): ಬಹು ನಿರೀಕ್ಷಿತ ಬಿಹಾರ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, 243 ವಿಧಾನಸಭಾ ಕ್ಷೇತ್ರಗಳಿಗೆ 3 ಹಂತಗಳಳ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ಶಿರಾ ವಿಧಾನಸಭಾ ಉಪ ಚುನಾವಣೆಗೆಕ್ಷೇತ್ರಗಳಿಗೆ ದಿನಾಂಕ ಘೋಷಣೆಯಾಗಬೇಕಿದೆ.

ಮುಖ್ಯ ಚುನಾವಣಾ ಅಧಿಕಾರಿ ಸುನೀಲ್ ಅರೋರ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕವನ್ನು ಪ್ರಕಟಿಸಿದ್ದಾರೆ.

ಮೂರು ಹಂತದಲ್ಲಿ ಚುನಾವಣೆ ನಡೆಯಲಿವೆ. ಅಕ್ಬೋಬರ್ 28ಕ್ಕೆ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ, 6 ಜಿಲ್ಲೆಯಲ್ಲಿ 31 ಸಾವಿರ ಬೂತ್ ಇರಲಿದೆ. 94 ಕ್ಷೇತ್ರಗಳಿಗೆ ನವೆಂಬರ್ 3ರಂದು ಎರಡನೇ ಹಂತದಲ್ಲಿ 94 ಕ್ಷೇತ್ರಗಳನ್ನು ಒಳಗೊಂಡ 17 ಜಿಲ್ಲೆಯಲ್ಲಿ 42 ಸಾವಿರ ಬೂತ್ ಇರಲಿವೆ. ನವೆಂಬರ್ 7ಕ್ಕೆ ಮೂರನೇ ಹಂತದ ಮತದಾನ ನಡೆಯಲಿದ್ದು, 78 ಕ್ಷೇತ್ರಗಳು ಇದರಲ್ಲಿ ಒಳಗೊಂಡಿವೆ. 15 ಜಿಲ್ಲೆಗಳಲ್ಲಿ 33.5 ಸಾವಿರ ಬೂತ್‌ ಸ್ಥಾಪಿಸಲಾಗುವುದು.

ತ.ನಾ. ನಲ್ಲಿ ಕರುಣಾನಿಧಿ, ಜಯಲಲಿತಾ ಇಲ್ಲದ ಮೊದಲ ಚುನಾವಣೆ ; ರಜನಿಗಾಗಿ ಕಾದು ಕಾದು ಬಿಜೆಪಿ ಸುಸ್ತು!

ಕೋವಿಡ್ ಹಿನ್ನಲೆಯಲ್ಲಿ ಸಕಲ ಸುರಕ್ಷತಾ ಕ್ರಮಗಳು ತೆಗೆದುಕೊಳ್ಳಲಾಗಿದೆ.7 ಲಕ್ಷ ಸ್ಯಾನಿಟೈಸರ್, 46 ಲಕ್ಷ ಮಾಸ್ಕ್, 6 ಲಕ್ಷ ಪಿಪಿಇ ಕಿಟ್, 6.7 ಲಕ್ಷ ಫೇಶ್‌ ಶೀಲ್ಡ್, 23 ಲಕ್ಷ ಹ್ಯಾಂಡ್‌ಗ್ಲೌಸ್ ವ್ಯವಸ್ಥೆ ಮಾಡಲಾಗಿದೆ. ಮತದಾರರಿಗಾಗಿ 7.2 ಕೋಟಿ ಹ್ಯಾಂಡ್‌ಗ್ಲೌಸ್ ಸಿದ್ಧಪಡಿಸಲಾಗಿದೆ.

ಮತದಾನದ ಅವಧಿ ಒಂದು ಗಂಟೆ ಹೆಚ್ಚಳ
ಕ್ವಾರೆಂಟೈನ್ ರೋಗಿಗಳಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಕೊನೆ ಸಮಯದಲ್ಲಿ ಇವರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದ್ದು, 80 ವರ್ಷ ಮೇಲ್ಪಟ್ಟ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಮತದಾನದ ಅವಧಿ ಒಂದು ಗಂಟೆ ಹೆಚ್ಚಿಸಲಾಗಿದೆ.

ಬಿಜೆಪಿ ಪೌರೋಹಿತ್ಯದಲ್ಲಿ ಶಶಿಕಲಾ-ಅಣ್ಣಾಡಿಎಂಕೆ ವಿಲೀನ?

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಸ್ಟೇಷನ್‌ನಲ್ಲಿ ಮತ ಚಲಾಯಿಸುವ ಮತದಾರರ ಸಂಖ್ಯೆ 1 ಸಾವಿರಕ್ಕೆ ಕಡಿತಗೊಳಿಸಲಾಗಿದೆ.ಇದರಿಂದ ಮತಗಟ್ಟೆಗಳ ಸಂಖ್ಯೆ ಸುಮಾರು 1 ಲಕ್ಷದಷ್ಟಾಗಿದೆ. 2015ರಲ್ಲಿ 65337 ಮತಗಟ್ಟೆಗಳಷ್ಟೇ ಇದ್ದವು. ಕ್ರಿಮಿನಲ್ ಅಭ್ಯರ್ಥಿ ಗಳು ಮೂರು ಹಂತಗಳಲ್ಲಿ ಜಾಹೀರಾತುಗಳ ಮೂಲಕ ಮತದಾರರಿಗೆ ತಿಳಿಸಬೇಕು. ಪಕ್ಷಗಳು ವೆಬ್ ಸೈಟ್ ಪ್ರಕಟಿಸಬೇಕಾಗಿದೆ.

ನವೆಂಬರ್ 10 ಮತ ಎಣಿಕೆ ಕಾರ್ಯ ನಡೆಯಲಿದೆ. 

 ಬಿಹಾರದಲ್ಲಿ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ದ ಸರಕಾರಿ ವಿರೋಧಿ ಅಲೆ ಈ ಸಾರಿ ವಿಪರೀತವಾಗಿದ್ದು, ಕಾಂಗ್ರೆಸ್ ಹಾಗೂ ಆರ್‌ಜೆಡಿಯ ಮಹಾಘಟನಬಂಧನ್ ವಿರುದ್ಧ ಎನ್‌ಡಿಎ ಮೈತ್ರಿ ಪಕ್ಷಗಳ ಜಿದ್ದಾಜಿದ್ದಿನ ಸೆಣಸಾಟ ನಡೆಯಲಿದೆ.

ಜೆಡಿಎಸ್ ಶಾಸಕ ಬಿ. ಸತ್ಯನಾರಾಣ್ ಅವರ ನಿಧನದಿಂದ ಶಿರಾ ವಿಧನಸಭಾ ಕ್ಷೇತ್ರ ತೆರವಾಗಿದೆ. ಜೆಡಿಎಸ್ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ. ಆದರೆ, ಕಾಂಗ್ರೆಸ್ ಕ್ಷೇತ್ರ ಗೆಲ್ಲಲು ತೀವ್ರ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಶಾಸಕ ನಾರಾಯಣ್ ರಾವ್ ನಿಧನದಿಂದ ಬಸವಕಲ್ಯಾಣ ಕ್ಷೇತ್ರವೂ ತೆರವಾಗಿದ್ದು, ಇದಕ್ಕಿನ್ನೂ ಚುನಾವಣಾ ದಿನಾಂಕ ಘೋಷಣೆಯಾಗಿಲ್ಲ. 

click me!