ಸರಿಯಾಗಿ ಕೆಲಸ ಮಾಡದಿದ್ದರೆ ಮಂತ್ರಿಗಿರಿ ಹೋಗುತ್ತೆ: ಸಚಿವ ಮಧು ಬಂಗಾರಪ್ಪ

Published : Jan 12, 2024, 10:43 AM IST
ಸರಿಯಾಗಿ ಕೆಲಸ ಮಾಡದಿದ್ದರೆ ಮಂತ್ರಿಗಿರಿ ಹೋಗುತ್ತೆ: ಸಚಿವ ಮಧು ಬಂಗಾರಪ್ಪ

ಸಾರಾಂಶ

ನಾನು ಶಾಲಾ ದಿನಗಳಲ್ಲೇ ಸರಿಯಾಗಿ ಓದಲಿಲ್ಲ. ಮುಖ್ಯಮಂತ್ರಿಗಳು ಸಮಸ್ಯೆಗಳ ಸರಮಾಲೆಯೇ ಇರುವ ಶಿಕ್ಷಣ ಇಲಾಖೆಯನ್ನು ವಹಿಸಿ ಈಗ ಮತ್ತೆ ನನ್ನನ್ನು ಶಾಲೆಗೆ ಸೇರಿಸಿದ್ದಾರೆ. ಈಗ ನಾನು ಪಾಸಾಗದಿದ್ದರೆ ಸಚಿವ ಸ್ಥಾನದಿಂದ ತೆಗೆದುಬಿಡುತ್ತಾರೆ ಎಂದ ಸಚಿವ ಮಧು ಬಂಗಾರಪ್ಪ 

ಬೆಂಗಳೂರು(ಜ.12):  'ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು ನನ್ನನ್ನು ಹುಡುಕಿ-ಹುಡುಕಿ ಶಾಲಾ ಶಿಕ್ಷಣ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಸರಿಯಾಗಿ ನಿಭಾಯಿಸದೆ ಹೋದರೆ ಸಂಪುಟದಿಂದ ತೆಗೆದುಬಿಡುತ್ತಾರೆ.' ಹೀಗೆ ಹೇಳುವ ಮೂಲಕ ಸಚಿವ ಮಧು ಬಂಗಾರಪ್ಪ ಅವರು ಮಂತ್ರಿಗಳ ಕಾರ್ಯವೈಖರಿ ಮೌಲ್ಯಮಾಪನದ ಸುಳಿವನ್ನು ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಾನು ಶಾಲಾ ದಿನಗಳಲ್ಲೇ ಸರಿಯಾಗಿ ಓದಲಿಲ್ಲ. ಮುಖ್ಯಮಂತ್ರಿಗಳು ಸಮಸ್ಯೆಗಳ ಸರಮಾಲೆಯೇ ಇರುವ ಶಿಕ್ಷಣ ಇಲಾಖೆಯನ್ನು ವಹಿಸಿ ಈಗ ಮತ್ತೆ ನನ್ನನ್ನು ಶಾಲೆಗೆ ಸೇರಿಸಿದ್ದಾರೆ. ಈಗ ನಾನು ಪಾಸಾಗದಿದ್ದರೆ ಸಚಿವ ಸ್ಥಾನದಿಂದ ತೆಗೆದುಬಿಡುತ್ತಾರೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮಾಡುವುದಕ್ಕೆ ಹೋಗಬಾರದು: ಸಚಿವ ಮಧು ಬಂಗಾರಪ್ಪ

ಸಂಪುಟ ರಚನೆ ವೇಳೆ ನನಗೆ ಶಿಕ್ಷಣ ಇಲಾಖೆ ಕೊಡುತ್ತಾರೆ ಅಂತ ಗೊತ್ತೇ ಇರಲಿಲ್ಲ. ಈ ಇಲಾಖೆಯಲ್ಲಿ ತುಂಬಾ ಸಮಸ್ಯೆ ಇದೆ ನೀನು, ಇದನ್ನು ಚೆನ್ನಾಗಿ ನಿಭಾಯಿಸುತ್ತೀಯಾ ಎಂದು ಮುಖ್ಯಮಂತ್ರಿಗಳು ಹುಡುಕಿ ನನಗೆ ಈ ಖಾತೆ ಕೊಟ್ಟಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಮಧುಗೆ ಕಷ್ಟದ ಖಾತೆ ಕೊಡಿ ಎಂದು ಹೇಳಿ ಕೊಡಿಸಿದ್ದಾರೆ ಎಂದು ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ