ಕಲಬುರಗಿ ಲೋಕ ಕದನ: ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸ್ತಾರಾ?, ಅಳಿಯ/ಪುತ್ರಗೆ ಬಿಟ್ಟುಕೊಡ್ತಾರಾ?

By Kannadaprabha News  |  First Published Jan 12, 2024, 8:32 AM IST

ಈ ಬಾರಿ ಹೇಗಾದರೂ ಮಾಡಿ ಮತ್ತೆ ಕಲಬುರಗಿಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದರೆ, ತುಂಬಾ ಪರಿಶ್ರಮದಿಂದ ಅರಳಿದ ಕಮಲವನ್ನು ಯಾವ ಕಾರಣಕ್ಕೂ ಕಾಪಾಡಿಕೊಳ್ಳಲು ತಂತ್ರಗಾರಿಕೆಯಲ್ಲಿ ನಿರತವಾಗಿದೆ. ಬಿಜೆಪಿಗೆ ಈ ಬಾರಿಯೂ ಹಾಲಿ ಸಂಸದ ಡಾ. ಉಮೇಶ ಜಾಧವ್ ಫೇವರಿಟ್, ಅವರಿಗೆ ಟಿಕೆಟ್ ಬಹುತೇಕ ನಿಶ್ಚಯವಾದಂತಾಗಿದೆ. 


ಶೇಷಮೂರ್ತಿ ಅವಧಾನಿ

ಕಲಬುರಗಿ(ಜ.12):  ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ (ಪ.ಜಾ. ಮೀಸಲು) ಕಾಂಗ್ರೆಸ್‌ನ ಮುಂಚೂಣಿ ನಾಯಕ, ಅಜಾತಶತ್ರು ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೋಲಿಸಿ ಬಿಜೆಪಿ ಕಳೆದ ಚುನಾವಣೆಯಲ್ಲಿ ಕಮಲ ಅರಳುವಂತೆ ಮಾಡಿತ್ತು. ಈ ಕ್ಷೇತ್ರದಲ್ಲಿ ಈವರೆಗೆ ನಡೆದ 19 ಚುನಾವಣೆಗಳ ಪೈಕಿ 2 ಬಾರಿ ಬಿಜೆಪಿ, 1 ಬಾರಿ ಜನತಾ ಪಕ್ಷ ಗೆದ್ದಿದ್ದು ಬಿಟ್ಟರೆ ಉಳಿದಂತೆ 16 ಬಾರಿ ಕಾಂಗ್ರೆಸ್‌ಗೆ ವಿಜಯಲಕ್ಷ್ಮೀ ಒಲಿದಿದೆ.

Tap to resize

Latest Videos

2019ರಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಡಿ ಬರುವ 8 ಆಸೆಂಬ್ಲಿ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್ ಶಾಸಕರಿದ್ದರು. ಈಗ ಜಿಲ್ಲೆಯ ರಾಜಕೀಯ ನಕಾಶೆ ಅದಲು-ಬದಲಾಗಿದೆ. ಕಲಬುರಗಿ ಗ್ರಾಮೀಣದಲ್ಲಿ ಬಿಜೆಪಿ, ಗುರುಮಠಕಲ್‌ನಲ್ಲಿ ಜೆಡಿಎಸ್ ಬಿಟ್ಟರೆ, ಉಳಿದಂತೆ ಕಲಬುರಗಿ ಉತ್ತರ, ದಕ್ಷಿಣ, ಆಫಜಲ್ಪುರ, ಚಿತ್ತಾಪುರ, ಸೇಡಂ, ಜೀವರ್ಗಿ ಸೇರಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 

ಮಂಡ್ಯ ಲೋಕಸಭಾ ಕಣದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ! ಜೆಡಿಎಸ್ ಸಜ್ಜು, ಸುಮಲತಾ ನಡೆ ಏನು?

ಬಿಜೆಪಿಗೆ ಜಾಧವ್ ಫೇವರಿಟ್: 

ಈ ಬಾರಿ ಹೇಗಾದರೂ ಮಾಡಿ ಮತ್ತೆ ಕಲಬುರಗಿಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದ್ದರೆ, ತುಂಬಾ ಪರಿಶ್ರಮದಿಂದ ಅರಳಿದ ಕಮಲವನ್ನು ಯಾವ ಕಾರಣಕ್ಕೂ ಕಾಪಾಡಿಕೊಳ್ಳಲು ತಂತ್ರಗಾರಿಕೆಯಲ್ಲಿ ನಿರತವಾಗಿದೆ. ಬಿಜೆಪಿಗೆ ಈ ಬಾರಿಯೂ ಹಾಲಿ ಸಂಸದ ಡಾ. ಉಮೇಶ ಜಾಧವ್ ಫೇವರಿಟ್, ಅವರಿಗೆ ಟಿಕೆಟ್ ಬಹುತೇಕ ನಿಶ್ಚಯವಾದಂತಾಗಿದೆ. ಈ ಮಧ್ಯೆ, ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವಕಾಶ ಕೊಟ್ಟಲ್ಲಿ ತಾವೂ ಸ್ಪರ್ಧೆಗೆ ಸಿದ್ದ ಎಂದಿದ್ದಾರೆ. ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಕೂಡಾ ಟಿಕೆಟ್ ಆಕಾಂಕ್ಷಿ. ಕಾಂಗ್ರೆಸ್ ಅಭ್ಯರ್ಥಿ ಯಾರು?: ಆದರೆ, ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಎನ್ನುವುದೇ ಕುತೂಹಲದ ವಿಷಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಜೊತೆಗೆ, ಕಲಬುರಗಿಯು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ತವರೂರು. ಸಹಜವಾಗಿಯೇ ಕಾಂಗ್ರೆಸ್ ಪಾಲಿನ ಪ್ರತಿಷ್ಠೆಯ ಕಣವಿದು. ಹೀಗಾಗಿ, ಅಳೆದು, ತೂಗಿ ಇಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ.

ಬಾಗಲಕೋಟೆ ಲೋಕಸಭಾ ಟಿಕೆಟ್‌ ಫೈಟ್‌: ಬಿಜೆಪಿಯಿಂದ ಗದ್ದಿಗೌಡರೇ ಈಗಲೂ ಫೇವರಿಟ್..!

1972ರಿಂದ ಸತತ 9 ಬಾರಿ ಅಸೆಂಬ್ಲಿ (ಗುರುಮಠಕಲ್, ಚಿತ್ತಾಪುರ), 2 ಬಾರಿ ಲೋಕಸಭೆ (ಕಲಬುರಗಿ) ಕಣಕ್ಕಿಳಿದು ಗೆದ್ದು, ಸೋಲರಿಯದ ಸರದಾರರೆಂದೇ ಹೆಸರಾಗಿದ್ದ ಡಾ.ಖರ್ಗೆ, 2019ರ ಲೋಕಸಮರದಲ್ಲಿ ಮೊದಲಬಾರಿಗೆ ಸೋಲನ್ನು ಅನುಭವಿಸಿದ್ದರು. ಖರ್ಗೆಯವರು ಮತ್ತೆ ಇಲ್ಲಿಂದಲೇ ಕಣಕ್ಕಿಳಿಯಬೇಕೆಂಬ ಆಗ್ರಹ ಜೋರಾಗಿದೆ. ಆದರೆ, ಎಐಸಿಸಿಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಖರ್ಗೆ ಅವರ ರಾಜ್ಯ ಸಭಾ ಸದಸ್ಯತ್ವದ ಅವಧಿ ಇನ್ನೂ 3 ವರ್ಷವಿದೆ. ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಂತದಲ್ಲಿ ಕಲಬುರಗಿಯಿಂದ ಮತ್ತೆ ಕಣಕ್ಕಿಳತಾರಾ? ಈ ಪ್ರಶ್ನೆಗೆ ಖರ್ಗೆಯವರು ಈವರೆಗೂ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಖರ್ಗೆ ಸ್ಪರ್ಧೆ ರಹಸ್ಯವಾಗಿಯೇ ಉಳಿದಿದೆ.

ಒಂದು ವೇಳೆ ಖರ್ಗೆ ಕಣಕ್ಕಿಳಿಯದಿದ್ದರೆ ಖರ್ಗೆಯವರ ಅಳಿಯ ರಾಧಾಕೃಷ್ಣ (ಆರ್‌ಕೆ) ಕಣಕ್ಕಿಳಿಯುವ ಬಗ್ಗೆ ಮಾತುಗಳು ಕೇಳಿ ಬರು ತ್ತಿವೆ. ಆದರೆ, ತಾವು ಟಿಕೆಟ್ ಆಕಾಂಕ್ಷಿ ಎಂದು ರಾಧಾಕೃಷ್ಣ ಎಲ್ಲಿಯೂ ಹೇಳಿಕೊಂಡಿಲ್ಲ. ಏತ ನ್ಮಧ್ಯೆ, ಹೈಕಮಾಂಡ್ ಸೂಚಿಸಿದರೆ, ಲೋಕ ಸಮರಕ್ಕೆ ತಾವು ಸಿದ್ಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಇನ್ನು, ಕಳೆದ ವಿಧಾ ನಸಭಾ ಚುನಾವಣೆಯಲ್ಲಿ ಚಿಂಚೋಳಿಯಿಂದ ಕಣಕ್ಕಿಳಿದು ಸೋತಿರುವ ಬಂಜಾರಾ ಸಮಾಜದ ಯುವ ಮುಖಂಡ ಸುಭಾಸ ರಾಠೋಡ ಹೆಸರೂ ಕೇಳಿ ಬರುತ್ತಿದೆ.

click me!