ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡ್ತಿದೆ ಕಾಂಗ್ರೆಸ್‌: ಕುಮಾರಸ್ವಾಮಿ

By Kannadaprabha News  |  First Published Jan 12, 2024, 9:02 AM IST

ಈಗ ಗ್ಯಾರಂಟಿ ನೋಡಿಕೊಳ್ಳೋದಕ್ಕೆ ಓರ್ವ ಅಧ್ಯಕ್ಷ, ಅದಕ್ಕೆ ವಾರ್ಷಿಕ 16 ಕೋಟಿ ಖರ್ಚಂತೆ, ಐವರು ಉಪಾಧ್ಯಕ್ಷರಂತೆ ಏನಕ್ಕೆ, ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಭವಿಷ್ಯ ನುಡಿದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ 
 


ಚಿಕ್ಕಮಗಳೂರು(ಜ.12):  ಕಾಂಗ್ರೆಸ್ ಪಕ್ಷ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಜಾತಿಗೊಂದು ಡಿಸಿಎಂ ಸ್ಥಾನ ನೀಡುತ್ತಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಗ್ಯಾರಂಟಿ ನೋಡಿಕೊಳ್ಳೋದಕ್ಕೆ ಓರ್ವ ಅಧ್ಯಕ್ಷ, ಅದಕ್ಕೆ ವಾರ್ಷಿಕ 16 ಕೋಟಿ ಖರ್ಚಂತೆ, ಐವರು ಉಪಾಧ್ಯಕ್ಷರಂತೆ ಏನಕ್ಕೆ, ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಭವಿಷ್ಯ ನುಡಿದರು.

Latest Videos

undefined

ಮರ ಕಡಿತ ಕೇಸಲ್ಲಿ ಕ್ರಮ ಆಗಿದೆ: ಎಚ್‌ಡಿಕೆಗೆ ಸಚಿವ ಈಶ್ವರ ಖಂಡ್ರೆ ತಿರುಗೇಟು!

ಪಕ್ಷದ ನಾಯಕರ ಸಭೆಯಲ್ಲಿ ಮಂಡ್ಯ ಅಷ್ಟೇ ಅಲ್ಲ. ರಾಜ್ಯ ಹಾಗೂ ಎಲ್ಲಾ ಜಿಲ್ಲೆಗಳ ಬಗ್ಗೆಯೂ ಚರ್ಚೆ ಆಗಿದೆ. 2 ರಾಜಕೀಯ ಪಕ್ಷಗಳ ಬಿರುಸಿನ ರಾಜಕೀಯ ಬೆಂಗಳೂರಿನಿಂದ ದೆಹಲಿ ತಲುಪಿದೆ. ನಮ್ಮ ಪಕ್ಷದ ಚಟುವಟಿಕೆ 2 ಪಕ್ಷಕ್ಕೂ ಹೋಲಿಸಿದರೆ ನಾವುಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.

ಮೈತ್ರಿಯಲ್ಲಿ ನಮ್ಮದು ಎಷ್ಟು ಸ್ಥಾನ, ನಮ್ಮ ಅಭ್ಯರ್ಥಿಗಳ ವಿಶ್ವಾಸ ಅವರು ಹೇಗೆ ಪಡೆಯಬೇಕು, ನಾವು ಅವರ ವಿಶ್ವಾಸ ಹೇಗೆ ಪಡೆಯಬೇಕು ಎಂಬ ಎಲ್ಲಾ ಚರ್ಚೆ ಆಗಿದೆ. ಮಂಡ್ಯ, ಮೈಸೂರು ಹಾಗೂ ಹಾಸನದ ಬಗ್ಗೆಯೂ ಚರ್ಚೆ ಆಗಿದೆ. ಮೈತ್ರಿಗೆ ಇಮೇಜ್ ಇದೆ, ಮೋದಿ ಇಮೇಜ್ ಇದೆ, ರಾಮ ಮಂದಿರ ಉದ್ಘಾಟನೆ ಮುಂಚೂಣಿಯಲ್ಲಿದೆ. ದೇಶದ ಜನರಿಗೆ ಸ್ಥಿರ ಸರ್ಕಾರ ಬರಬೇಕೆಂಬ ಆಶಯವಿದೆ. ಎರಡೂ ಪಕ್ಷಕ್ಕೂ ನಮ್ಮ ಶಕ್ತಿ ಏನೆಂದು ಗೊತ್ತಿದೆ ಎಂದು ಹೇಳಿದರು.

click me!