ಬಿಜೆಪಿಯವರು ಬೊಕ್ಕಸ ಖಾಲಿ ಮಾಡಿಟ್ಟು ಹೋಗಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

By Kannadaprabha News  |  First Published Aug 15, 2023, 3:20 AM IST

ರಾಜ್ಯದಲ್ಲಿ 3 ತಿಂಗಳಿಂದ ಹಿಂದಿನ ಯೋಜನೆಗಳನ್ನು ಬಿಟ್ಟು ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ, ಹಾಗಿರುವಾಗ ಗುತ್ತಿಗೆದಾರರಿಂದ ಕಮಿಷನ್‌ ಪಡೆಯುವುದು ವಿಷಯ ಎಲ್ಲಿ ಬಂತು ಎಂದು ಉಡುಪಿ ಜಿಲ್ಲಾ ಉಸ್ತುವಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನಿಸಿದ್ದಾರೆ.
 


ಉಡುಪಿ (ಆ.15): ರಾಜ್ಯದಲ್ಲಿ 3 ತಿಂಗಳಿಂದ ಹಿಂದಿನ ಯೋಜನೆಗಳನ್ನು ಬಿಟ್ಟು ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ, ಹಾಗಿರುವಾಗ ಗುತ್ತಿಗೆದಾರರಿಂದ ಕಮಿಷನ್‌ ಪಡೆಯುವುದು ವಿಷಯ ಎಲ್ಲಿ ಬಂತು ಎಂದು ಉಡುಪಿ ಜಿಲ್ಲಾ ಉಸ್ತುವಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಗುದ್ದಲಿ ಪೂಜೆ, ಹೊಸ ಟೆಂಡರ್‌ ಮಾಡಿದ್ರೆ ಆಗ ಕಮಿಷನ್‌ ದಂಧೆಯ ವಿಷಯ ಬರುತ್ತದೆ. ಆದರೆ ನಮ್ಮ ಸರ್ಕಾರ ಹಿಂದಿನ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಿದೆ. 

ಆದ್ದರಿಂದ ಕಮಿಷನ್‌ ವ್ಯವಹಾರದ ಪ್ರಶ್ನೆಯೇ ಬರುವುದಿಲ್ಲ ಎಂದರು. ಬಿಬಿಎಂಪಿಯಲ್ಲಿ ಬಿಲ್‌ ಪಾಸ್‌ ಮಾಡುವುದಕ್ಕೆ ಕಮಿಷನ್‌ ದಂಧೆ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಅದರ ತನಿಖೆಗೆ ಸಿಎಂ ತಂಡವನ್ನು ರಚಿಸಿದ್ದಾರೆ. ಕೆಲಸ ಆಗಿದೆಯೋ ಇಲ್ಲವೋ ಭೋಗಸ್‌ ಬಿಲ್‌ ಬರೆದಿದ್ದಾರೋ ಎಂದು ತನಿಖೆಯಾಗುತ್ತಿದೆ. 1 ಕಿ.ಮೀ. ಕಾಮಗಾರಿಗೆ 10 ಕಿ.ಮೀ. ಎಂದು ಬಿಲ್‌ ಮಾಡಿದ್ದಾರೆ. ಕಾಮಗಾರಿ ಮಂಜೂರಾಗಿ 24 ಗಂಟೆಗಳಲ್ಲಿ ಬಿಲ್‌ ಮಾಡಿದ್ದಾರೆ. ಇದೆಲ್ಲ ತನಿಖೆ ಆಗುತ್ತದೆ. ಕೆಲಸ ಆಗಿದ್ರೆ ಬಿಲ್‌ ಸಿಗುತ್ತದೆ. 

Tap to resize

Latest Videos

undefined

ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್‌

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರೇ ಈಗ ಎಲ್ಲೂ ಕಮಿಷನ್‌ ದಂಧೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ ಎಂದವರು ಹೇಳಿದರು. ಬಿಜೆಪಿಯವರು ಬೊಕ್ಕಸ ಖಾಲಿ ಮಾಡಿ ಸಾಲ ಮಾಡಿಟ್ಟು ಹೋಗಿದ್ದಾರೆ, ಅವರು ಕಳೆದ 4 ವರ್ಷಗಳಿಂದ ಬಾಕಿ ಇಟ್ಟಿರುವ ಬಿಲ್ಲನ್ನು ಈಗಲೇ ಕೊಡಿ ಎಂದರೆ ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಅವರು ಫೈನಾನ್ಸ್‌ ಎಕ್ಸ್‌ಪರ್ಟ್‌, ಸರ್ಕಾರದ 5 ಗ್ಯಾರಂಟಿಗಳನ್ನು ಯಾವುದಕ್ಕೂ ಕತ್ತರಿ ಹಾಕದೇ ಯಾರಿಗೂ ಹೊರೆಯಾಗದಂತೆ ಜಾರಿಗೆ ತರುತಿದ್ದಾರೆ ಎಂದರು.

ಹಳ್ಳಿ ಸುಧಾ​ರಿ​ಸಿ​ದರೆ ದೇಶ ಅಭಿ​ವೃ​ದ್ಧಿ: ಹಳ್ಳಿಗಳು ಸುಧಾರಿಸಿದರೆ ದೇಶ ಅಭಿವೃದ್ಧಿ ಆಗುತ್ತವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾ​ಳ್ಕರ್‌ ಹೇಳಿದ್ದಾರೆ. ಅವರು ಕಾರ್ಕಳ ತಾಲೂಕಿನ ಮುಡಾರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸೋಮ​ವಾರ ನಡೆದ 80 ಲಕ್ಷ ರು. ಮೊತ್ತದ ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳನ್ನು ಉದ್ಘಾ​ಟಿಸಿ ಅವರು ಮಾತ​ನಾ​ಡಿ​ದ​ರು. ಕೇಂದ್ರ ಸರ್ಕಾರ ನರೇಕಾ ಯೋಜನೆ ಮೂಲಕ ಗ್ರಾಮ ಪಂಚಾಯಿತಿ​ಗ​ಳಿಗೆ ಶಕ್ತಿ ತುಂಬಿಸುವ ಕೆಲಸ ಮಾಡಿದೆ ಎಂದ ಸಚಿ​ವೆ, ಕಸವಿಲೇವಾರಿ ಘಟಕ ಸೇರಿದಂತೆ ಕಾರ್ಕಳ ಅಭಿ​ವೃದ್ಧಿ ಪಡಿ​ಸಿದ ಮಾಜಿ ಸಚಿವ ಸುನಿಲ್‌ ಕುಮಾರ್‌ ಅವರನ್ನು ಅಭಿನಂದಿಸಿದರು. 

ಮಂಗಳೂರು: ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಡಕ್ಕೆ ವೈದ್ಯಾಧಿಕಾರಿಗೆ ಗರ್ಭಪಾತ: ಪೊಲೀಸ್‌ಗೆ ದೂರು

ಉಡುಪಿ ಬುದ್ಧಿವಂತರ ಜಿಲ್ಲೆ​ಯಾ​ದ್ದ​ರಿಂದ 25 ವರ್ಷಗಳಲ್ಲಿ ಅಭಿ​ವೃದ್ಧಿ ಹೊಂದಿದ ಜಿಲ್ಲೆಯಾಗಿ ಹೊರ ಹೊಮ್ಮಿದೆ. ಸರ್ಕಾರ ಘೋಷಿ​ಸಿದ ಗ್ಯಾರಂಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಚಿವ ಹೇಳಿ​ದ​ರು. ಶಾಸಕ ವಿ.ಸು​ನಿಲ್‌ ಕುಮಾರ್‌ ಮಾತ​ನಾಡಿ, ಕಾರ್ಕಳ ತಾಲೂಕಿನಲ್ಲಿ ಬಜಗೋಳಿ ಕೇಂದ್ರ ಸ್ಥಾನವಾಗಿದೆ. ಬೆಳ್ಮಣ್‌, ಮುಂಡ್ಕೂರು, ಬಜಗೋಳಿಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಮೂಲಕ ಗ್ರಾ.ಪಂ.​ಗ​ಳಿಗೆ ಆದಾಯದ ಮೂಲವಾಗಿವೆ. ಹೆಬ್ರಿ , ಬಜಗೋಳಿ ಗ್ರಾಮ ಪಂಚಾ​ಯಿತಿ ವ್ಯಾಪ್ತಿ​ಯಲ್ಲಿ ಯು.ಜಿ.ಡಿ. ಸಮಸ್ಯೆಯಿದ್ದು, ಇಡಿ ದೇಶದಲ್ಲಿ ಎಫ್‌ಎಸ್‌​ಎ​ಲ್‌ಎಂ ಘಟಕ, ಎಂಆ​ರ್‌​ಎಫ್‌ ಘಟಕಗಳನ್ನು ನಿರ್ಮಾಣ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದ​ರು​.

click me!