ಕೊಪ್ಪಳ ಲೋಕಸಭೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಅಥವಾ ಇನ್ನೊಂದು ಪಕ್ಷಕ್ಕೆ ಬೆಂಬಲಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಜಿಲಾದ್ಯಂತ ಆದ್ಯತೆ ನೀಡಲಾಗುವುದು ಎಂದು ಕೆಆರ್‌ಪಿಪಿ ಸಂಸ್ಥಾಪಕ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಕುಷ್ಟಗಿ (ಆ.15): ಕೊಪ್ಪಳ ಲೋಕಸಭೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಅಥವಾ ಇನ್ನೊಂದು ಪಕ್ಷಕ್ಕೆ ಬೆಂಬಲಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಜಿಲಾದ್ಯಂತ ಆದ್ಯತೆ ನೀಡಲಾಗುವುದು ಎಂದು ಕೆಆರ್‌ಪಿಪಿ ಸಂಸ್ಥಾಪಕ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಪಕ್ಷದಿಂದ ನಾನೊಬ್ಬನೇ ಶಾಸಕನಿದ್ದೇನೆ. ಪಕ್ಷ ಬಲಪಡಿಸುವುದೇ ನನ್ನ ಆದ್ಯತೆ. ನಾನು ಪಕ್ಷ ಕಟ್ಟಿದಾಗ ಪ್ರಮುಖವಾಗಿ 29 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಹೋರಾಡಿದೆ. ಆದರೆ ನಮಗೆ ಎಲ್ಲ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು. ಸ್ಥಳೀಯ, ಜಿಪಂ, ತಾಪಂ ಚುನಾವಣಾ ಸಿದ್ಧತೆಗೆ ಕಾರ್ಯಕರ್ತರನ್ನು ಹುರಿದುಂಬಿಸಿ ಬೂತ್ ಮಟ್ಟದಿಂದ ಸಂಘಟನೆಗೆ ಒತ್ತು ನೀಡಿ ತಯಾರಿ ಮಾಡುತ್ತೇನೆ ಎಂದರು.
undefined
ಮಳೆಗಾಗಿ ಪ್ರಾರ್ಥಿಸಿ ಬಾಲಕರಿಗೆ ಮದುವೆ: ಹಾಡು-ಕುಣಿತದ ಮೂಲಕ ಪ್ರಾರ್ಥನೆ
ಅಂಜನಾದ್ರಿ ಅಭಿವೃದ್ಧಿಗೆ ಆದ್ಯತೆ: ಜಿಲ್ಲೆಯ ಅಂಜನಾದ್ರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರವೂ ಹಣ ಮೀಸಲಿಟ್ಟಿತ್ತು. ಅದೇ ರೀತಿ ಸಿದ್ದರಾಮಯ್ಯ ಸರ್ಕಾರವು ಸಹ ಅನುದಾನ ನೀಡುವ ಭರವಸೆ ಇದೆ. ಕೇಂದ್ರ ಸರ್ಕಾರಕ್ಕೂ ಈಗಾಗಲೇ ಮನವಿ ಮಾಡಿ ಹೈಟೆಕ್ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳಿಗೆ ಅನುದಾನ ಬಿಡುಗಡೆ ಮಾಡಲು ಪತ್ರ ಬರೆದಿದ್ದೇನೆ. ಅಂಜನಾದ್ರಿಯನ್ನು ಮಾದರಿ ಪುಣ್ಯಕ್ಷೇತ್ರ ಮಾಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ಸಿ.ಎಂ. ಹೀರೆಮಠ, ಮನೋಹರಗೌಡ ಹೇರೂರು, ಕರಿಯಣ್ಣ ಸಂಗಟಿ, ವೀರೇಶ ಹೀರೆನಂದಿಹಾಳ, ಶಶಿಧರ ಕುಂಬಾರ, ಪುಟ್ಟರಾಜ ದಾಸರ, ಸಂತೋಷ ಹಾಗಲದಾಳ, ಶಿವಶಂಕರಪ್ಪ ಕುರಿ, ಶಂಕ್ರಣ್ಣ ಕಲಬಾವಿ, ರಾಜೇಸಾಬ ಕಲಾಲಬಂಡಿ, ರಮೇಶ ಇಂಗಳಗಿ, ಬಸವರಾಜ ಇದ್ದರು.
ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್
ಗಂಗಾವತಿ ಕಸಾಪ ಭವನ ಅವೈಜ್ಞಾನಿಕ: ನಗರದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಸಾಹಿತ್ಯ ಭವನ ಅವೈಜ್ಞಾನಿಕವಾಗಿದೆ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು. ಕಸಾಪ ಭವನದ ಕಟ್ಟಡ ಪರಿಶೀಲಿಸಿದ ನಂತರ ಸುದ್ದಿಗೊರರೊಂದಿಗೆ ಅವರು ಮಾತನಾಡಿದರು. ಕಟ್ಟಡ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಗಮನಕ್ಕೆ ಬಂತು. ಕಟ್ಟಡದ ಬಾಲ್ಕನಿ ಭಾಗದಲ್ಲಿ ಗೋಡೆ ನಿರ್ಮಾಣ ಮಾಡಿ ಮುಚ್ಚಲಾಗಿದೆ. ಅದೇ ರೀತಿ ಧ್ವನಿ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲದಿರುವುದು ಕಂಡು ಬಂತು. ಕೂಡಲೇ ಅಧಿಕಾರಿಗಳು ಗಮನಹರಿಸಿ ಸರಿಪಡಿಸುವಂತೆ ಸೂಚನೆ ನೀಡಿದರು.