ಸಿ.ಟಿ. ರವಿ ನಿಂದನೆ ಮಾಡಿದ ವೀಡಿಯೋವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಿಡುಗಡೆ ಮಾಡಿದರೂ ಅದಕ್ಕೆ ಬೆಲೆಯಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಬೆಂಗಳೂರು (ಡಿ.23): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮಗೆ ಪರಿಷತ್‌ನಲ್ಲಿ ಸಿ.ಟಿ. ರವಿ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವಿಡಿಯೋ ಬಿಡುಗಡೆ ಮಾಡಿದರೂ ಅದಕ್ಕೆ ಯಾವುದೇ ಬೆಲೆ ಇಲ್ಲ. ಏಕೆಂದರೆ ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಡಿಯೋ ದಾಖಲೆ ಬಿಡುಗಡೆ ಮಾಡುವ ವಿಚಾರದ ಕುರಿತು ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವೀಡಿಯೋಗೆ ಬೆಲೆ ಇಲ್ಲ. ಸಿ.ಟಿ. ರವಿ ಅವರು ಅವ್ಯಾಚ್ಯ ಪದಗಳನ್ನು ಬಳಸಿ ಮಾತನಾಡಿರೋ ಆಡಿಯೋ, ವೀಡಿಯೋ ದಾಖಲೆ ಇಲ್ಲವೆಂದು ಸಭಾಪತಿ ಹೊರಟ್ಟಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇವರ ಬಳಿ ಇರೋ ವೀಡಿಯೋ ದಾಖಲೆಗೆ ಯಾವುದೇ ಬೆಲೆ ಇಲ್ಲ. ಹೊರಟ್ಟಿ ಅವರ ಮಾತಿಗೆ ಮಾತ್ರ ಬೆಲೆ. ಹೈಕೋರ್ಟ್ ಈಗಾಗಲೇ ರಿಲ್ಯಾಕ್ಸ್ ನೀಡಿದೆ ಎಂದು ಹೇಳಿದರು.
undefined
ಪೊಲೀಸರು ಬಂಧನ ಮಾಡಿದ ನಂತರ ಸಿ.ಟಿ ರವಿ ಅವರನ್ನ ಇಷ್ಟೆಲ್ಲಾ ಓಡಾಡಿಸಲು ಕಾರಣ ಏನು.? ರಾತ್ರೋ ರಾತ್ರಿ ನಾಲ್ಕೈದು ಜಿಲ್ಲೆಗಳಲ್ಲಿ ಅವರನ್ನು ಜೀಪಿನಲ್ಲಿ ಕೂರಿಸಿ ಸುತ್ತಾಡಿಸಿದ್ದಾರೆ. ಅವರಿಗೆ ಊಟ ಕೊಟ್ಟಿಲ್ಲ, ತಲೆಗೆ ಪೆಟ್ಟಾಗಿದ್ದರೂ ಚಿಕಿತ್ಸೆ ನೀಡಿಲ್ಲ. ನೂರಾರು ಜನ ಸುವರ್ಣ ಸೌಧದಲ್ಲಿ ರವಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಅವರನ್ನ ಯಾರು ಸುವರ್ಣ ಸೌಧದ ಒಳಗೆ ಬಿಟ್ಟುದ್ದಾರೆ. ಅವರೆಲ್ಲರೂ ಯಾರ ಹೆಸರಲ್ಲಿ ಸುರ್ಣ ಸೌಧದ ಒಳಗೆ ಬಂದಿದ್ದಾರೆ. ಸಿ.ಟಿ. ರವಿ ವಿಚಾರವಾಗಿ ನಾವೂ ಕೂಡ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಟಿ ರವಿ 'ಪ್ರಾಸ್ಟಿಟ್ಯೂಟ್' ಅಂದಿದ್ದು ಸತ್ಯ, ಅದಕ್ಕೆ ನಾನೇ ಸಾಕ್ಷಿ: ಡಾ ಯತೀಂದ್ರ ಸಿದ್ದರಾಮಯ್ಯ
ಇನ್ನು ಸಿಟಿ. ರವಿ ಅವರ ಪರವಾಗಿ ಹೋರಾಟ ಮಾಡುವುದಕ್ಕೆ ಕೆಲವೇ ದಿನಗಳಲ್ಲಿ ವಿಪಕ್ಷ ನಾಯಕರು, ರಾಜ್ಯಾಧ್ಯಕ್ಷರು ಸೇರಿ ಹೈಕಮಾಂಡ್‌ಗೆ ಮನವಿ ನೀಡಲಿದ್ದೇವೆ. ಕಾಂಗ್ರೆಸ್ ನಾಯಕರು ದೊಡ್ಡ ಯಡವಟ್ಟಿನಲ್ಲಿ ಸಿಲುಕಿದ್ದಾರೆ. ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಧಾನಿಗೆ ಪತ್ರ ವಿಚಾರದ ಬಗ್ಗೆ ಮಾತನಾಡಿ, ಪ್ರಧಾನಿ ಅವರು ಎಲ್ಲವನ್ನೂ ಪರಿಶೀಲನೆ ಮಾಡಲಿ. ನಿಮ್ಮ ಸರ್ಕಾರ ಸಿ.ಟಿ. ರವಿಗೆ ಕೊಟ್ಟ ಚಿತ್ರ ಹಿಂಸೆ ಬಗ್ಗೆ ನ್ಯಾಯಾಂಗ ತನಿಖೆಗೆ ಕೊಡಿ. ಪೊಲೀಸ್ ಅಧಿಕಾರಿಗಳ ದುಷ್ಟ ಕೃತ್ಯ ಬಗ್ಗೆ ತನಿಖೆಗೆ ಕೊಡಿ. ನಾವು ಇದೆಲ್ಲವನ್ನೂ ಪ್ರಶ್ನೆ ಮಾಡಲು ಬೆಳಗಾವಿ ಚಲೋ ಮಾಡುವುದಕ್ಕೆ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.