ಬಿಜೆಪಿ ಸಂಸದರನ್ನು 'ನಪುಂಸಕರು' ಎಂದ ಸಚಿವ ಕೆಎನ್ ರಾಜಣ್ಣ!

By Ravi Janekal  |  First Published Mar 22, 2024, 10:51 PM IST

ಕರ್ನಾಟಕದಿಂದ ಆಯ್ಕೆಯಾಗಿ ಸಂಸತ್ತಿಗೆ ಹೋಗಿರುವ ಒಬ್ಬ ಸಂಸದನಾದರೂ ಪಾರ್ಲಿಮೆಂಟ್‌ ಒಳಗೆ ಆಗಲಿ, ಹೊರಗಡೆ ಆಗಲಿ ನಮ್ಮ ರಾಜ್ಯಕ್ಕೆ ನಿಯಮಾನುಸಾರ ಏನೆಲ್ಲ ಅನುಕೂಲ ನೀಡಬೇಕೋ ಅದನ್ನು ಕೊಡಿ ಎಂದು ಕೇಳಿಲ್ಲ ಇಂತಹ ನಪುಂಸಕರನ್ನು ಆರಿಸಿ ಕಳಿಸಿದ್ದಕ್ಕೆ ಅವಮಾನವಾಗುತ್ತಿದೆ ಎಂದ ಕೆಎನ್ ರಾಜಣ್ಣ


ಹಾಸನ (ಮಾ.22): ಕರ್ನಾಟಕದಿಂದ ಆಯ್ಕೆಯಾಗಿ ಸಂಸತ್ತಿಗೆ ಹೋಗಿರುವ ಒಬ್ಬ ಸಂಸದನಾದರೂ ಪಾರ್ಲಿಮೆಂಟ್‌ ಒಳಗೆ ಆಗಲಿ, ಹೊರಗಡೆ ಆಗಲಿ ನಮ್ಮ ರಾಜ್ಯಕ್ಕೆ ನಿಯಮಾನುಸಾರ ಏನೆಲ್ಲ ಅನುಕೂಲ ನೀಡಬೇಕೋ ಅದನ್ನು ಕೊಡಿ ಎಂದು ಕೇಳಿಲ್ಲ. ಇಂತಹ ನಪುಂಸಕರನ್ನ ರಾಜ್ಯದಿಂದ ಲೋಕಸಭೆಗೆ ಆರಿಸಿ ಕಳಿಸಿದ್ದೇವೆ ಇದು ನಮಗೆಲ್ಲ ಅವಮಾನ ಆಗುತ್ತಿದೆ ಎಂದು ಬಿಜೆಪಿ ಸಂಸದ ವಿರುದ್ಧ ಸಚಿವ ಕೆಎನ್ ರಾಜಣ್ಣ ತೀವ್ರ ವಾಗ್ದಾಳಿ ನಡೆಸಿದರು.

ಇಂದು ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುವ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ, ಹತ್ತು ವರ್ಷಗಳು ನರೇಂದ್ರ ಮೋದಿಯವರು ಬರೀ ಸುಳ್ಳು ಹೇಳಿದರೆ ಹೊರತು ಬೇರೆ ಏನೂ ಮಾಡಲಿಲ್ಲ. ಎರಡು ಕೋಟಿ ಉದ್ಯೋಗ ನೀಡಲಿಲ್ಲ. ಹದಿನೈದು ಲಕ್ಷ ಹಣ ಕೊಡಲಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

Tap to resize

Latest Videos

ಈ ಸಲ ಟಿಕೆಟ್ ಬೇಡ ಎಂದಿದ್ದೆ, ಹೈಕಮಾಂಡ್ ಕೊಟ್ಟಿದೆ: ಸಂಸದ ರಮೇಶ್ ಜಿಗಜಿಣಗಿ

ನಾವೆಲ್ಲ ಸಚಿವರು ಹೋಗಿ ಪ್ರತಿಭಟನೆ ಮಾಡಿದೆವು. ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನವನ್ನು ದೆಹಲಿಯಲ್ಲಿ ಮಾಡಿದೆವು. ಬರಗಾಲವಿದೆ, ಕುಡಿಯುವ ನೀರಿಗೆ ಹಾಹಾಕಾರವಿದೆ, ಜಾನುವಾರುಗಳಿಗೆ ಮೇವು ಇಲ್ಲ ಆದರೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ನಮ್ಮ ರಾಜ್ಯದಿಂದ ನೂರು ರೂಪಾಯಿ ಹೋದರೆ ನಮಗೆ ಬರುವುದು ಹದಿಮೂರು ಪೈಸೆ ಮಾತ್ರ. ನಾವು ಪ್ರತಿವರ್ಷ ನಾಲ್ಕು ಲಕ್ಷ ಕೋಟಿಗೂ ಹೆಚ್ಚು ಹಣ ಕೇಂದ್ರಕ್ಕೆ ತೆರಿಗೆ ನೀಡುತ್ತೇವೆ.

ಲೋಕಸಭೆಯಲ್ಲಿ 20 ಕ್ಷೇತ್ರ ಗೆಲ್ಲದಿದ್ದರೆ ಸರ್ಕಾರ ನಡೆಸಲು ನೈತಿಕತೆ ಇರಲ್ಲ: ಸಚಿವ ರಾಜಣ್ಣ

ಆದರೆ ನಮ್ಮಿಂದ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ ನಮ್ಮ ಪಾಲು ನಮಗೆ ನೀಡಲು ಮಲತಾಯಿ ಧೋರಣೆ ಮಾಡುತ್ತಿದೆ. ನಮ್ಮ ರಾಜ್ಯದ ಯಾವುದೇ ಸಮಸ್ಯೆ ಲೋಕಸಭೆಯಲ್ಲಿ ಚರ್ಚೆಯಾಗಿಲ್ಲ. ಇಲ್ಲಿಂದ ಆಯ್ಕೆಯಾಗಿ ಹೋದ ಯಾವ ಸಂಸದನೂ ಕೇಂದ್ರದ ಬಳಿ ಬರಿಪರಿಹಾರ ಕೇಳುವ ಧೈರ್ಯ ಮಾಡುತ್ತಿಲ್ಲ. ಇಂಥ ನಪುಂಸಕರನ್ನ ಆರಿಸಿ ಕಳಿಸಿದ್ದಕ್ಕೆ ನಮಗೆ ಅವಮಾನ ಆಗುತ್ತಿದೆ ಕಿಡಿಕಾರಿದರು.

click me!