ರಾಘವೇಂದ್ರಂದು ಶಿವಮೊಗ್ಗದಲ್ಲಿ ಬಸ್‌ಸ್ಟ್ಯಾಂಡ್ ಮಾತ್ರ ಸಾಧನೆ; ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

By Ravi Janekal  |  First Published Mar 22, 2024, 8:55 PM IST

ಬಿಜೆಪಿಯದ್ದು ಹಡಬಿ ದುಡ್ಡು ಪಾಲಿಟಿಕ್ಸ್ ರಾಘವೇಂದ್ರ ದುಡ್ಡು, ರೆಸಾರ್ಟ್, ಜಮೀನು ಮಾಡ್ತಾರೆ. ಈಗ ಹಡಬಿ ದುಡ್ಡು ಹಿಡ್ಕೊಂಡು ಚುನಾವಣೆಗೆ ಬರ್ತಾರೆ ಎಂದು ಬೈಂದೂರಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಸಂಸದ ಬಿವೈ ರಾಘವೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ಉಡುಪಿ (ಮಾ.22): ಬಿಜೆಪಿಯದ್ದು ಹಡಬಿ ದುಡ್ಡು ಪಾಲಿಟಿಕ್ಸ್ ರಾಘವೇಂದ್ರ ದುಡ್ಡು, ರೆಸಾರ್ಟ್, ಜಮೀನು ಮಾಡ್ತಾರೆ. ಈಗ ಹಡಬಿ ದುಡ್ಡು ಹಿಡ್ಕೊಂಡು ಚುನಾವಣೆಗೆ ಬರ್ತಾರೆ ಎಂದು ಬೈಂದೂರಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಸಂಸದ ಬಿವೈ ರಾಘವೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬೇಳೂರು, ರಾಘವೇಂದ್ರಂದು ಶಿವಮೊಗ್ಗದಲ್ಲಿ ಬಸ್ ಸ್ಟ್ಯಾಂಡ್ ಮಾತ್ರ ಸಾಧನೆ. ಎಲ್ಲೆಲ್ಲೂ ಆಸ್ತಿ ಖರೀದಿ ಮಾಡಿದ್ದಾರೆ, ಹಣದ ರಾಶಿ ಹಾಕಿದ್ದಾರೆ ಈಗ ಚುನಾವಣೆಯಲ್ಲಿ ಅದನ್ನ ಚೆಲ್ಲಲು ಬರ್ತಾರೆ. ಮೂರು ಸಲವೂ ರಾಘವೇಂದ್ರ ಹಡಬಿ ದುಡ್ಡಿನ ರಾಜಕೀಯ ಮಾಡಿ ಗೆದ್ದಿದ್ದಾರೆ. ನಾವು ಹಿಂದುತ್ವವೇ, ಈಶ್ವರಪ್ಪನ ಹಿಂದುತ್ವವನ್ನು ಒದ್ದು ಹೊರಗೆ ಹಾಕಿದ್ದಾರೆ. ಈಗ ಈಶ್ವರಪ್ಪನ ಎದೆ ಬಗೆದರೆ ಯಡಿಯೂರಪ್ಪ ಕಾಣ್ತಾರಂತೆ ಎಂದು ಕಿಡಿಕಾರಿದರು.

Tap to resize

Latest Videos

undefined

ನಿಮ್ಮಪ್ಪ 2009ರಲ್ಲಿ ಸಿಎಂ ಆದ್ರೆ, ನಮ್ಮಪ್ಪ 1990ರಲ್ಲೇ ಸಿಎಂ ಆಗಿದ್ರು; ಸಚಿವ ಮಧು ಬಂಗಾರಪ್ಪ

ಹಡಬಿ ದುಡ್ಡಿನ ಅರ್ಥ ಏನೆಂದು ನನಗೆ ಗೊತ್ತಿಲ್ಲ. ಆದರೆ ಹಡಬಿ ದುಡ್ಡು ಮಾಡಿದವರಿಗೆ ಅಂತ ಪದ ಬರುತ್ತೆ. ಕಾಂಗ್ರೆಸ್ನವರು ಅಡಿಕೆ ಮಾರಿದ ದುಡ್ಡಿನಲ್ಲಿ ಚುನಾವಣೆ ಮಾಡುತ್ತಾರೆ. ನೀವು ಯಾವ ದುಡ್ಡಿನಲ್ಲಿ ಚುನಾವಣೆ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದರು.

click me!