ಕೇಂದ್ರ ಸರ್ಕಾರವು ಬಡವರ ಹೊಟ್ಟೆ ನೋಡಲಿಲ್ಲ. ದೆಹಲಿಗೆ ಹೋಗಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಬಡವರಿಗೆ ಅನ್ನ ನೀಡುವ ಮನಸ್ಸು ಮಾಡಲಿಲ್ಲ. ಯಾಕೆ ಇಂತಹ ತೀರ್ಮಾನ ಕೈಗೊಂಡರು ಎಂದು ಗೊತ್ತಾಗಲಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಾಲೂರು (ಜು.16): ಕೇಂದ್ರ ಸರ್ಕಾರವು ಬಡವರ ಹೊಟ್ಟೆ ನೋಡಲಿಲ್ಲ. ದೆಹಲಿಗೆ ಹೋಗಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಬಡವರಿಗೆ ಅನ್ನ ನೀಡುವ ಮನಸ್ಸು ಮಾಡಲಿಲ್ಲ. ಯಾಕೆ ಇಂತಹ ತೀರ್ಮಾನ ಕೈಗೊಂಡರು ಎಂದು ಗೊತ್ತಾಗಲಿಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಮಾಲೂರು ತಾಲೂಕು ಆಡಳಿತ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅನ್ನ ಭಾಗ್ಯ ಯೋಜನೆಯ ನೇರ ನಗದು ಪಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ 10 ಕೆ.ಜಿ.ಅಕ್ಕಿ ಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಜ್ಯ ಸರ್ಕಾರದ ಐದು ಕೆ.ಜಿ.ಅಕ್ಕಿ ಸೇರಿ 10 ಕೆ.ಜಿ.ಅಕ್ಕಿಯನ್ನು ಕೊಡುವುದಕ್ಕೆ ನಾವು ಮುಂದಾಗಿದ್ದೇವು ಎಂದರು.
ಎಚ್‌ಎನ್ ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಕ್ರಮ: ಸಚಿವ ಭೋಸರಾಜು
ಅಕ್ಕಿ ನೀಡಿದ್ದರೆ ಹಣ ಕೊಡುತ್ತಿರಲಿಲ್ಲ: ಕೇಂದ್ರ ಸರ್ಕಾರ ಅಕ್ಕಿ ನೀಡಿದ್ದರೆ ನಾವು ಜನರಿಗೆ ಹಣ ನೀಡುತ್ತಿರಲಿಲ್ಲ ಎಂದ ಸಚಿವರು ಮುಂದಿನ ದಿನದಲ್ಲಿ ಅಕ್ಕಿಯೇ ನೀಡಲು ಬೇಕಾದ ಎಲ್ಲ ರೀತಿಯ ವಿಧಾನವನ್ನು ಬಳಸಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷವು ಕೊಟ್ಟಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತೇವೆ. ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗಳ 15 ಲಕ್ಷ ಕೋಟಿ ರು.ಗಳನ್ನು ಮನ್ನಾ ಮಾಡಿದ್ದಾರೆ. ಆದರೆ ರೈತರ ಬಡವರ ಹೊಟ್ಟೆಯನ್ನು ನೋಡುವುದಕ್ಕೆ ಸಾಧ್ಯವಾಗಿಲ್ಲ ಎಂದರು. ಸಂಸದ ಮುನಿಸ್ವಾಮಿ ಮಾತನಾಡಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ.ಅಕ್ಕಿ ಸೇರಿ ಒಟ್ಟು ಹದಿನೈದು ಕೆ.ಜಿ.ಅಕ್ಕಿ ನೀಡಬೇಕು. ಅಗ ಮಾತ್ರ ನುಡಿದಂತೆ ನಡೆಯುವ ಸರ್ಕಾರ ನಿಮ್ಮದಾಗಲಿದೆ.
ರಾಜ್ಯ ಸರ್ಕಾರವು ಐದು ಕೆ.ಜಿ.ಅಕ್ಕಿ ಬದಲು ಹಣವನ್ನು ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದರು. ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡ, ಕಳೆದ ಮೂರುವರೆ ವರ್ಷಗಳ ಕಾಲ ನನ್ನ ಕೈ ಕಟ್ಟಿಹಾಕಲಾಗಿತ್ತು. ಯಾವುದೇ ಅನುದಾನ ಸರ್ಕಾರದಿಂದ ಬಾರದೆ ಜನತೆಗೆ ಮುಖ ತೋರಿಸಲು ಕಷ್ಟವಾಗುತ್ತಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಮುಂದಿನ ದಿನದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬಡವರಿಗೆ ನಿವೇಶನ ನೀಡುವ ಯೋಜನೆ ಅನುಷ್ಢಾನಗೊಳ್ಳಲಿದ್ದು, ಮುಖ್ಯಮಂತ್ರಿಗಳೇ ಇಲ್ಲಿಗೆ ಬಂದು ಚಾಲನೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಭಾಸ್ಕರ್, ಎಸಿ ವೆಂಕಟಲಕ್ಷ್ಮೇ, ತಹಸೀಲ್ದಾರ್ ರಮೇಶ್, ಆಹಾರ ಇಲಾಖೆ ಉಪ ನಿರ್ದೇಶಕಿ ಶೃತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ್ಯ ಮುನೇಗೌಡ, ಪುರಸಭೆ ಮುಖ್ಯಾಧಿಕಾರಿ ಪ್ರದೀಪ್, ತಾಪಂ ಇಓ ಮುನಿರಾಜು ಇನ್ನಿತರರು ಇದ್ದರು. ಸಂಸದರ ವಿರುದ್ಧ ಘೋಷಣೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಮಾತನಾಡುವಾಗ ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ 15 ಕೋಟಿ ಲಕ್ಷ ಸಾಲವನ್ನು ಮನ್ನಾ ಮಾಡಿದರು. ಆದರೆ 6 ಲಕ್ಷ ಕೋಟಿ ರೈತರ ಸಾಲವನ್ನು ಮನ್ನಾ ಮಾಡಲಿಲ್ಲ ಎಂದು ಹೇಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಸಂಸದ ಮುನಿಸ್ವಾಮಿ ಅವರು ಕೇಂದ್ರದಲ್ಲಿ ನಿಮ್ಮದೆ ಸರ್ಕಾರ ಇತ್ತು. ನೀವು 7 ಬಾರಿ ಸಂಸದರಾಗಿದ್ದೀರಿ. ನಿಮ್ಮ ಕಾಣಿಕೆ ಏನು ಎಂದು ಪ್ರಶ್ನಿಸಿದರು.
ಮನೆಗೆ ಬರಲು ನಿರಾಕರಣೆ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ
ಈ ಸಂದರ್ಭದಲ್ಲಿ ವೇದಿಕೆ ಮುಂಭಾದಲ್ಲಿದ್ದ ಕಾಂಗ್ರೆಸ್ ಮುಖಂಡರುಗಳು ಸಂಸದರ ವಿರುದ್ಧ ಘೋಷಣೆ ಕೊಗಿದರು. ಈ ವೇಳೆಯಲ್ಲಿ ಮುಂದೆ ಬಂದು ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸಂಸದ ಮುನಿಸ್ವಾಮಿ ಅವರಿಗೆ ಮಾತನಾಡುವ ಸ್ವತಂತ್ರ್ಯ ಇದೆ. ಅವರು ಕೇಂದ್ರ ಸರ್ಕಾರದ ಕಾರ‍್ಯಕ್ರಮ ಹೇಳಬೇಕು. ನಾವು ರಾಜ್ಯ ಸರ್ಕಾರದ ಕಾರ‍್ಯಕ್ರಮಗಳು ಹೇಳಬೇಕು. ಅದು ಬಿಟ್ಟು ಸಂಸದ ಮಾತಿಗೆ ಅಡಿಪಡಿಸಿದರೆ ಬೇರೆಯ ಅರ್ಥ ಬರುತ್ತದೆ. ಇದರಲ್ಲಿ ಗೊಂದಲ ಆಗಬಾರದು ಎಂದ ಸಚಿವರು ಕೇಂದ್ರ ಸರ್ಕಾರ ಎನೇ ಕಾರ‍್ಯಕ್ರಮ ನೀಡಿದರೂ ಬಡವರಿಗೆ ಅಕ್ಕಿ ಕೊಡಲು ಮನಸ್ಸು ಮಾಡಲಿಲ್ಲವಲ್ಲ ಎಂಬುದೆ ನನ್ನ ಬೇಸರ ಎಂದರು.