ಗೋಣಿಚೀಲದಲ್ಲಿ ಹಣ ಹಂಚಿದವರು ಯಾರು?: ಡಿಕೆಶಿಗೆ ಸುಧಾಕರ್‌ ಪ್ರಶ್ನೆ

By Suvarna News  |  First Published Oct 22, 2021, 1:19 PM IST

*  ಹಾನಗಲ್ಲ ಉಪಚುನಾವಣೆ ಪ್ರಚಾರದಲ್ಲಿ ಡಾ. ಕೆ. ಸುಧಾಕರ ಪ್ರಶ್ನೆ
*  ಪ್ರಧಾನಿ ವಿರುದ್ಧ ಏಕವಚನದ ಮಾತಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ
*  ಕಾಂಗ್ರೆಸ್‌ ನಾಯಕರಿಂದ ನಮ್ಮ ಪಕ್ಷದಲ್ಲಿ ಭಿನ್ನತೆ ಉಂಟುಮಾಡಲು ಯತ್ನ 
 


ಹಾನಗಲ್ಲ(ಅ.22):  ಹಾನಗಲ್ಲ(Hanagal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗರು ಕೊರೋನಾದಲ್ಲಿ ಹೊಡೆದ ಹಣವನ್ನು ಗೋಣಿ ಚೀಲದಲ್ಲಿ ತಂದು ಹಂಚುತ್ತಿದ್ದಾರೆ ಎನ್ನುವ ಡಿ.ಕೆ. ಶಿವಕುಮಾರ(DK Shivakumar) ತಮ್ಮ ಅನುಭವದ ಮಾತನ್ನು ಹೇಳುತ್ತಿದ್ದಾರೆ. ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯಲ್ಲಿ ಯಾರು ಗೋಣಿ ಚೀಲದಲ್ಲಿ ತಂದು ಹಣ ಹಂಚಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ(K Sudhakar) ಪ್ರಶ್ನಿಸಿದ್ದಾರೆ.

ಹಾನಗಲ್ಲ ವಿಧಾನಸಭಾ ಉಪ ಚುನಾವಣೆ(Byelection) ಹಿನ್ನಲೆಯಲ್ಲಿ ಗುರುವಾರ ಬಿಜೆಪಿ(BJP) ಅಭ್ಯರ್ಥಿ ಶಿವರಾಜ ಸಜ್ಜನರ(Shivaraj Sanjjanar) ಪರ ಹಾನಗಲ್‌ ಪಟ್ಟಣದ ಜವಾಬ್ದಾರಿ ವಹಿಸಿಕೊಂಡಿರುವ ಅವರು ಸ್ಥಳೀಯ ಮುಖಂಡರ ಜತೆಗೆ ಸಭೆ ನಡೆಸಿ ಬಳಿಕ ಮತಯಾಚನೆ ಮಾಡಿದರು. ಸ್ಥಳೀಯ ವಂಶಿಫಾರ್ಮ್‌ ಹೌಸ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ನಡೆಸಿದ ಸ್ಥಳೀಯರ ಸಭೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌(Congress) ವಿರುದ್ಧ ಹರಿಹಾಯ್ದರು. 

Latest Videos

undefined

ರಾಜಕೀಯ(Politics) ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ ಹತಾಶ ಮನೋಭಾವನೆಯಿಂದ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ(Siddaramaiah) ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾವು ಕೊರೋನಾ(Coronavirus) ಸಂದರ್ಭದ ಎಲ್ಲ ಲೆಕ್ಕವನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ.

ಹಾನಗಲ್‌ ಉಪಚುನಾವಣೆ: ಕಾಂಗ್ರೆಸ್‌ಗೆ ಮುಳುವಾಗಲಿದ್ಯಾ ಬೊಮ್ಮಾಯಿ ಸ್ಟ್ರಾಟರ್ಜಿ..?

ರಾಜ್ಯದಲ್ಲಿ 2 ಕೋಟಿ ಜನ ಕೋವಿಡ್‌ ಲಸಿಕೆ(Vaccine) ತಗೆದುಕೊಂಡಿದ್ದಾರೆ. ಮೂರನೆ ಅಲೆ ಆತಂಕ ಬೇಡ. ಕಾಂಗ್ರೆಸ್‌ನ ಎಲ್ಲ ಆರೋಪಕ್ಕೆ ಉತ್ತರ ನೀಡುವ ಕೆಲಸ ಮಾಡಲ್ಲ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಗೆಲ್ಲಲು ಏನು ಬೇಕೋ ಅದನ್ನು ಮಾಡ್ತಾ ಇದ್ದೇವೆ. ನೂರರಷ್ಟು ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನರ ಗೆಲುವು ನಿಶ್ಚಿತ ಎಂದರು.

ಸುದ್ದಿಗಾರರ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿಂದುಳಿದ ವರ್ಗಕ್ಕೆ(Backward Class) ಅನ್ಯಾಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ನಮ್ಮ ಪಕ್ಷದಲ್ಲಿ ಭಿನ್ನತೆ ಉಂಟುಮಾಡಲು ಯತ್ನಿಸಿದ್ದಾರೆ. ಆದರೆ, ಇದೇ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿದ್ದ ಮನೋಹರ ತಹಶೀಲ್ದಾರ ಅವರನ್ನು ಸಿದ್ದರಾಮಯ್ಯ ಸರ್ಕಾರ ಏಕಾಏಕಿ ಸಂಪುಟದಿಂದ ಕೈಬಿಟ್ಟಿತು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ(General Election) ಟಿಕೆಟ್‌ ನಿರಾಕರಿಸಿತು. ಇವು ಹಿಂದುಳಿದ ವರ್ಗಕ್ಕೆ ಮಾಡುವ ದ್ರೋಹವಲ್ಲದೆ ಇನ್ನೇನು? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನವರು ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಹೀನ ರಾಜಕೀಯ ಮಾಡಿದ್ದಾರೆ. ಮೋದಿ(Narendra Modi) ವ್ಯಾಕ್ಸಿನ್‌, ಬಿಜೆಪಿ ವ್ಯಾಕ್ಸಿನ್‌ ಎಂದು ಅಪಪ್ರಚಾರ ಮಾಡಿದರು. ಪರಿಹಾರಕ್ಕಾಗಿ ಒಂದು ಕೋಟಿ ರುಪಾಯಿ ಕೊಡುವುದಾಗಿ ಡ್ರಾಮಾ ಮಾಡಿದ್ದರು. ರಾಜ್ಯದಲ್ಲಿ(Karnataka) ವ್ಯಾಕ್ಸಿನೇಶನ್‌ ಕೆಲ ತಿಂಗಳು ವಿಳಂಬವಾಯಿತು ಎಂದರೆ ಅದಕ್ಕೆ ಕಾಂಗ್ರೆಸ್‌ ಕಾರಣ. ಅವರಿಂದ ವ್ಯಾಕ್ಸಿನ್‌ ತಯಾರಿಕಾ ಕಂಪನಿಗಳು ಕಂಗಾಲಾಗುವಂತೆ ಆಗಿತ್ತು ಎಂದರು.
 

click me!