* 100 ಕೋಟಿ ಕೊರೋನಾ ಲಸಿಕೆ ಸಂಭ್ರಮಕ್ಕೆ ಸಿದ್ದರಾಮಯ್ಯ ಲೇವಡಿ
* ಲೇವಡಿ ಮಾಡಿದ ಸಿದ್ದರಾಂಯ್ಯಗೆ ಅಶೋಕ್ ಅಭಿನಂದನೆ
* ಯಾರೇ ಕಾಮೆಂಟ್ ಮಾಡಿದ್ರು ಮೂರು ನಯಾ ಪೈಸದ ಬೆಲೆ ಇಲ್ಲ ಎಂದ ಅಶೋಕ್
ಬೆಂಗಳೂರು, (ಅ.22): 100 ಕೋಟಿ ಕೊರೋನಾ ಲಸಿಕೆ (Corona Vaccine) ಸಂಭ್ರಮವನ್ನು ಲೇವಡಿ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ (siddaramaiah) ಸಚಿವ ಆರ್. ಅಶೋಕ್ (R Ashok) ತಿರುಗೇಟು ಕೊಟ್ಟಿದ್ದಾರೆ.
ದೇಶದಲ್ಲಿ 50 ಲಕ್ಷ ಜನ ಕೊವಿಡ್‌ಗೆ ಬಲಿಯಾಗಿದ್ದಾರೆ. ಆದ್ರೆ 100 ಕೋಟಿ ಲಸಿಕೆ ಹಾಕಿದ್ದೀವಚಿ ಅಂತಾ ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ 29 ಕೋಟಿ ಜನರು 2 ಡೋಸ್ ಪಡೆದಿದ್ದಾರೆ. 42 ಕೋಟಿ ಜನರು ಸಿಂಗಲ್ ಡೋಸ್ ಪಡೆದಿದ್ದಾರೆ. ಇದು ವಿಪರ್ಯಾಸ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
undefined
Narendra Modi Speech Highlights: ಭಾರತದ ಶಕ್ತಿಗೆ ವಿಶ್ವವೇ ನಿಬ್ಬೆರಗು: ಮೋದಿ ಮಾತು
ಇದಕ್ಕೆ ಪ್ರತಿಕ್ರಿಯಿಸಿರುವ ಅಶೋಕ್, WHO ದೇಶದ ಪ್ರಧಾನಿಗಳು, ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೇ (World Health organization) ಅಭಿನಂದನೆ ಸಲ್ಲಿಸಿದ ಮೇಲೆ ಬೇರೆ ಯಾರೇ ಕಾಮೆಂಟ್ ಮಾಡಿದ್ರು ಮೂರು ನಯಾ ಪೈಸದ ಬೆಲೆ ಇಲ್ಲ. ಸಣ್ಣಪುಟ್ಟ ಜನ ಇದಕ್ಕೆ ಮಾತಾಡಿದ್ರೆ ಯಾರು ತಲೆ ಕೆಡಿಸಿಕೊಂಡಿಲ್ಲ. ಸಿದ್ದರಾಮಯ್ಯ ವಿರೋಧ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಹೀಗೆ ಮಾತಾಡ್ತಿರಲಿ. ಅದಕ್ಕೆ ಇನ್ನು ಕಳೆ ಬರುತ್ತೆ. ಪ್ರಧಾನಿ ಮೋದಿಯನ್ನ ಟೀಕೆ ಮಾಡದೇ ಹೋದ್ರೆ ಕಾಂಗ್ರೆಸ್‌ನವರಿಗೆ ಕುಡಿಯುವ ನೀರು ಜೀರ್ಣ ಆಗೊಲ್ಲ. ಟೀಕೆ ಮಾಡೋದು ಕಾಂಗ್ರೆಸ್ ಅವರ ಗುಣ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹೈಕಮಾಂಡ್ ಕೂಡಾ ಮೋದಿಯನ್ನ ಟೀಕೆ ಮಾಡಿ ಅಂತ ಹೇಳಿದೆ. ಯಾವುದಕ್ಕೆ ಟೀಕೆ ಮಾಡಬೇಕು ಅನ್ನೊ ಪರಿಜ್ಞಾನ ಸಿದ್ದರಾಮಯ್ಯಗೆ ಇಲ್ಲ. ಒಳ್ಳೆ ಕೆಲಸ ಮಾಡಿದಾಗ ಒಳ್ಳೆಯದನ್ನ ಹೇಳಬೇಕು. ಇಂತಹ ನಾಯಕನ ಬಗ್ಗೆ ನಮಗೆ ಬೇಸರ ಆಗ್ತಿದೆ ಎಂದರು.
ಭಾರತವು ಗುರುವಾರ ಬೆಳಗ್ಗೆ ದಾಖಲೆಯ 100 ಕೋಟಿ ಡೋಸ್ ಲಸಿಕೆ ನೀಡುವ ಮುಖಾಂತರ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದು, ಲಸಿಕೆ ಅಭಿಯಾನ ಆರಂಭವಾಗ 279 ದಿನಗಳಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ಸಾಧನೆ ಮಾಡಿದಂತಾಗಿದೆ.