ಸಿಎಂರದ್ದು ಜಾತಿ ರಾಜಕಾರಣ,ನಮ್ಮದು ನೀತಿ ರಾಜಕಾರಣ: ಡಿಕೆಶಿ

By Kannadaprabha News  |  First Published Oct 22, 2021, 8:10 AM IST

*  ಬಿಜೆಪಿಗರಿಂದ ಅಡ್ಡದಾರಿಯಲ್ಲಿ ಪ್ರಚಾರ
*  ನಮಗೆ ವೈಯಕ್ತಿಕ ನಿಂದನೆ ಮೇಲೆ ವಿಶ್ವಾಸವಿಲ್ಲ
*  ರಾಜುಗೌಡ ಬೆಡ್‌ ರೆಡಿ ಮಾಡಿಸಲಿ ನಾನು ಅಡ್ಮಿಟ್‌ ಆಗುವೆ 


ಹಾನಗಲ್‌(ಅ.22):  ಮುಖ್ಯಮಂತ್ರಿಗಳು(Chief Minister) ಜಾತಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ, ನಾವು ನೀತಿ ಮೇಲೆ ರಾಜಕೀಯ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.

ಹಾನಗಲ್‌ನಲ್ಲಿ(Hanagal) ಉಪಚುನಾವಣೆ(Byelection) ಕಾಂಗ್ರೆಸ್‌(Congress) ಪ್ರಚಾರದ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿಗರು(BJP) ಪ್ರಚಾರವನ್ನು ಅಡ್ಡದಾರಿಯಲ್ಲಿ ಮಾಡುತ್ತಿದ್ದಾರೆ. ಆದರೆ, ನಮಗೆ ವೈಯಕ್ತಿಕ ನಿಂದನೆ ಮೇಲೆ ವಿಶ್ವಾಸವಿಲ್ಲ ಎಂದರು.

Tap to resize

Latest Videos

ಇದೇ ವೇಳೆ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ(HD Kumaraswamy) ಅವರ ಬಗ್ಗೆಯೂ ನನಗೆ ಗೌರವ ಇದೆ ಎಂದ ಡಿ.ಕೆ.ಶಿವಕುಮಾರ್‌(DK Shivakumar), ಅವರ ಬಗೆಗೂ ವೈಯಕ್ತಿಕವಾಗಿ ಮಾತನಾಡಲ್ಲ. ಅಷ್ಟಕ್ಕೂ ಚುನಾವಣೆ(Election) ಸಂದರ್ಭದಲ್ಲಿ ವೈಯಕ್ತಿಕ ವಿಚಾರ ಏಕೆ ಮಾತನಾಡಬೇಕು? ಜಾತಿ ರಾಜಕಾರಣದ(Caste Politics) ಮೇಲೆ ನಮಗೆ ನಂಬಿಕೆ ಇಲ್ಲ. ಸಿದ್ಧಾಂತದ ಮೇಲೆ ನಾನು ಚುನಾವಣೆ ಮಾಡುತ್ತೇನೆ ಎಂದರು.

'ಅಧಿಕಾರದಲ್ಲಿದ್ದಾಗ ಹಾವೇರಿಯತ್ತ ಸಿದ್ದು ತಿರುಗಿಯೂ ನೋಡಿಲ್ಲ'

ಈಚೆಗೆ ನನಗೆ ಗೊತ್ತಿಲ್ಲದೆ ಕೆಲವರು ನನ್ನ ಹೆಸರಲ್ಲಿ ಟ್ವೀಟ್‌(Tweet) ಮಾಡಿದ್ದರು. ಪ್ರಧಾನಮಂತ್ರಿ(Prime Minister) ಬಗ್ಗೆ ತಪ್ಪಾಗಿ ಟ್ವೀಟ್‌ ಮಾಡಿದ್ದನ್ನ 10 ನಿಮಿಷದಲ್ಲಿ ತೆಗೆದು ಹಾಕಿ, ಕ್ಷಮೆ ಕೇಳಿದ್ದೇವೆ. ಸದನದಲ್ಲಿ(Session) ಯುದ್ಧ ಮಾಡುವ ಸಂದರ್ಭ ಬರುತ್ತದೆ. ಆಗ ಮಾತನಾಡೋಣ. ಸಾರ್ವತ್ರಿಕ ಚುನಾವಣೆಯಲ್ಲಿ(General Election) ಟೀಕೆ ಮಾಡೋಣ. ಉಪ ಚುನಾವಣೆ ಸಿದ್ಧಾಂತದ ಮೇಲೆ ಮಾಡೋಣ ಎಂದರು.

ಕೆಲವರು ನನ್ನ ಬಗ್ಗೆ ಹೊಸ ಹೊಸ ಗ್ರೂಪ್‌ ಕ್ರಿಯೆಟ್‌ ಮಾಡಿ ಟ್ವೀಟ್‌ ಮಾಡುತ್ತಿದ್ದರು. ನನ್‌ ಫೋಟೋ ಬಳಸಿ ಕಾಂಗ್ರೆಸ್‌ ವಿರುದ್ಧನೇ ಅಪಪ್ರಚಾರ ಮಾಡುತ್ತಿದ್ದರು. ಇಂತವೆಲ್ಲ ನನ್ನ ಗಮನಕ್ಕಿದೆ ಎಂದರು. ಡಿಕೆಶಿ ಅವರನ್ನು ಹುಚ್ಚಾಸ್ಪತ್ರೆಗೆ(Mental Hospital) ಸೇರಿಸಲಿ. ಉಚಿತ ಚಿಕಿತ್ಸೆ ಕೊಡಿಸುತ್ತೇವೆ ಎಂಬ ಶಾಸಕ ರಾಜುಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಜುಗೌಡ ಬೆಡ್‌ ರೆಡಿ ಮಾಡಿಸಲಿ ನಾನು ಅಡ್ಮಿಟ್‌ ಆಗುವೆ ಎಂದು ತಿರುಗೇಟು ನೀಡಿದರು.
 

click me!