ಸಿದ್ದರಾಮಯ್ಯ ಅವರು ತಮ್ಮ ಮೇಲೆ ಬಂದ ಆಪಾದನೆಗೆ ತನಿಖೆ ಮಾಡಿಸುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ತಮ್ಮ ಮೇಲೆ ತಾವೇ ತನಿಖೆ ಮಾಡಿದ್ದ ಉದಾಹರಣೆ ಇದೆಯಾ? ಎಂದು ಬಿಜೆಪಿಗರಿಗೆ ಪ್ರಶ್ನಿಸಿದ ಸಚಿವ ಎಚ್.ಕೆ. ಪಾಟೀಲ್
ಗದಗ(ಜು.28): ಪಾದಯಾತ್ರೆಗೆ ಮಾಜಿ ಸಿಎಂ ಯಡಿಯೂರಪ್ಪ ಚಾಲನೆ ಕೊಡಲಿ. ಕುಮಾರಸ್ವಾಮಿ, ಬೊಮ್ಮಾಯಿ ಭಾಗಿಯಾಗಲಿ, ಜಗದೀಶ್ ಶೆಟ್ಟರ್ ಮುಖಂಡತ್ವ ವಹಿಸಲಿ. ನಾನು ಕೇಳ್ತೀನಿ ನಿಮ್ಮ ಮೇಲೂ ಆಪಾದನೆ ಬಂದಿತ್ತಲ್ಲ. ನಿಮ್ಮ ಕುಟುಂಬಸ್ಥರ ಮೇಲೂ ಆರೋಪ ಇತ್ತು. ಅವಾಗ ನೀವೇನು ತನಿಖೆ ಮಾಡಲು ಮುಂದಾಗಿದ್ರಾ? ಎಂದು ಮುಡಾ ಪಾದಯಾತ್ರೆ ವಿರುದ್ಧ ಸಚಿವ ಎಚ್.ಕೆ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಕೆ. ಪಾಟೀಲ್ ಅವರು, ಸಿದ್ದರಾಮಯ್ಯ ಅವರು ತಮ್ಮ ಮೇಲೆ ಬಂದ ಆಪಾದನೆಗೆ ತನಿಖೆ ಮಾಡಿಸುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ತಮ್ಮ ಮೇಲೆ ತಾವೇ ತನಿಖೆ ಮಾಡಿದ್ದ ಉದಾಹರಣೆ ಇದೆಯಾ? ಎಂದು ಬಿಜೆಪಿಗರಿಗೆ ಪ್ರಶ್ನಿಸಿದ್ದಾರೆ.
undefined
ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದಿದ್ರೆ ಯಾಕೆ ಸುಮ್ನಿದ್ರಿ? 14 ತಿಂಗಳು ಕತ್ತೆ ಕಾಯ್ತಾ ಇದ್ರಾ?: ಯತ್ನಾಳ್ ಗರಂ
ಪ್ರಜಾಪ್ರಭುತ್ವದಲ್ಲಿ ಪಾರದರ್ಶಕವಾಗಿರಲು ಸಿಎಂ ಸಿದ್ದರಾಮಯ್ಯ ಇಟ್ಟ ದೊಡ್ಡ ಹೆಜ್ಜೆಯಾಗಿದೆ. ತಪ್ಪು ಸಂದೇಶ ಸಾರುವಾವರ ವಿರುದ್ಧವೇ ಆದಾಪದನೆ ಬಂದಿದ್ದವು. ಆಗ ಯಾಕೆ ತನಿಖೆಯಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.