ಕಾಂಗ್ರೆಸ್‌ನವರು ಅಪಪ್ರಚಾರದಲ್ಲಿ ನಿಸ್ಸೀಮರು: ಬಸವರಾಜ ಬೊಮ್ಮಾಯಿ ಕಿಡಿ

By Girish GoudarFirst Published Jul 28, 2024, 5:22 PM IST
Highlights

ಸಿಎಂ ಸಿದ್ದರಾಮಯ್ಯ ಅವರು ನೀತಿ ಆಯೋಗಕ್ಕೆ ಹೋಗಿಲ್ಲ. ರಾಜ್ಯಕ್ಕೆ ಯಾವ ಯೋಜನೆ ಬೇಕು ಅಂತಾ ಚರ್ಚೆ ಮಾಡ್ಬೇಕು. ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸುವ ವೇದಿಕೆ ಕಳೆದುಕೊಂಡು ರಾಜ್ಯಕ್ಕೆ ಅನ್ಯಾಯ ಮಾಡಿದ್ರಿ ಎಂದು  ಸಿದ್ದು ವಿರುದ್ಧ ಕೆಂಡ ಕಾರಿದ ಸಂಸದ ಬಸವರಾಜ ಬೊಮ್ಮಾಯಿ 
 

ಗದಗ(ಜು.28):  ಕಾಂಗ್ರೆಸ್ ಪಕ್ಷದವರು ಅಪಪ್ರಚಾರದಲ್ಲಿ ನಿಸ್ಸೀಮರು. ನಿರಂತರವಾಗಿ ಕೇಂದ್ರದ ಮೇಲೆ ಆಪಾದನೆ ಮಾಡೋದು ಚಟವಾಗಿದೆ. ಕಾಂಗ್ರೆಸ್ ಪಕ್ಷದವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ಬಾರಿ ರೈಲ್ವೆಗೆ 7,329 ಕೋಟಿ ರೂ. ಕೊಟ್ಟಿದ್ದೇವೆ‌. ಕಳೆದ ಬಾರಿ, ಅದರ ಹಿಂದಿನ ಬಾರಿಯೂ 7 ಸಾವಿರ ಕೋಟಿ ಕೊಡಲಾಗಿತ್ತು. ಯುಪಿಎ ಕಾಲದಲ್ಲಿ ಕೇವಲ 600 ಕೋಟಿ ಕೊಟ್ಟಿದ್ದರು. 10 ಪಟ್ಟು ಹೆಚ್ಚು ಕೊಟ್ಟರೂ ಏನೂ ಸಿಗ್ತಿಲ್ಲ ಅಂತಾರೆ ಎಂದು ಕಾಂಗ್ರೆಸ್‌ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರ ಮ್ಯಾಚಿಂಗ್ ದುಡ್ಡು ಕೊಟ್ಟಿಲ್ಲ, ಭೂ ಸ್ವಾಧೀನ ಮಾಡಿಲ್ಲ. ರಾಜ್ಯ ಸರ್ಕಾರ ಅಸಹಕಾರ ಮಾಡ್ತಿದೆ. ರಾಜ್ಯದ ಬೆಳೆವಣಿ, ಅಭಿವೃದ್ಧಿ, ಹಿತ ಕಾಪಾಡಲು ರಾಜ್ಯ ತಯಾರಿಲ್ಲ. ಸಾಗರ ಮಾಲಾ ಯೋಜನೆಯಲ್ಲಿ 700 ಕೋಟಿ ಬರುತ್ತೆ. ಬಂಡವಾಳ ಹೂಡಿಕೆಗೆ 6,280 ಕೋಟಿ ರೂಪಾಯಿ ಬಜೆಟ್ ನಲ್ಲಿ ಕೊಟ್ಟಿದ್ದೇವೆ. ಶೂನ್ಯ ಬಡ್ಡಿಯಲ್ಲಿ 50 ವರ್ಷದ ನಂತ್ರ ತೀರಿಸುವುದು ಬಹುತೇಕ ಗ್ರ್ಯಾಂಟ್ ಇದ್ದಹಾಗೆ. ನಾವಿದ್ದಾಗ ಉಳಿತಾಯ ಬಜೆಟ್. ಈಗ ಕೊರತೆ ಬಜೆಟ್ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ. 

Latest Videos

'ತನಿಖೆ ಮಾಡಿ, ಎದುರಿಸಲು ಸಿದ್ಧ' - 21 ಬಿಜೆಪಿ ಹಗರಣ ತನಿಖೆ ನಡೆಸುತ್ತೇವೆ ಎಂಬ ಸಿಎಂ ಹೇಳಿಕೆಗೆ ಬೊಮ್ಮಾಯಿ ತಿರುಗೇಟು!

1,631 ಕೋಟಿ ರೂಪಾಯಿ ತುಂಬಲು ಕೊರತೆ ಬಜೆಟ್. ವಿಪತ್ತು ನಿರ್ವಹಣೆಗೆ 6,396 ಕೋಟಿ ರೂಪಾಯಿ ಕೊಟ್ಟಿದೆ. ಇದಲ್ದೆ ರಸ್ತೆಗೆ, ಪಿಎಂ ಆವಾಸ್, ಸಡಕ್ ಯೋಜನೆಯಲ್ಲಿ ಹಲವಾರು ಯೋಜನೆಯಲ್ಲಿ ಹಣ ಬರ್ತಿದೆ. ಬಂದ ಹಣವನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡ್ಬೇಕಿದೆ. ಮ್ಯಾಚಿಂಗ್ ಗ್ರ್ಯಾಂಟ್ ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ..  ಹೀಗಾಗಿ ಅಪ ಪ್ರಚಾರ ಮಾಡ್ತಿದೆ. ಇದು ಅತ್ಯಂತ ಖಂಡನೀಯ ಎಂದಿದ್ದಾರೆ. 

ಸಿಎಂ ಸಿದ್ದರಾಮಯ್ಯ ಅವರು ನೀತಿ ಆಯೋಗಕ್ಕೆ ಹೋಗಿಲ್ಲ. ರಾಜ್ಯಕ್ಕೆ ಯಾವ ಯೋಜನೆ ಬೇಕು ಅಂತಾ ಚರ್ಚೆ ಮಾಡ್ಬೇಕು. ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸುವ ವೇದಿಕೆ ಕಳೆದುಕೊಂಡು ರಾಜ್ಯಕ್ಕೆ ಅನ್ಯಾಯ ಮಾಡಿದ್ರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದ್ದಾರೆ. 

ಬಾಕ್ಸ್ ನಲ್ಲಿ ಸಿಕ್ಕಿದ್ದು ಕುರಿ ಮಾಂಸವೇ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಗೃಹ ಸಚಿವರಿಗೆ ವೆಟರ್ನರಿ ಜ್ಞಾನ ಇದೆ ಅಂತಾ ನನಗೆ ಗೊತ್ತಿರಲಿಲ್ಲ.  ಆ ಮಾಂಸ ಯಾವುದು ಅಂತಾ ತಜ್ಞರೇ ಹೇಳಬೇಕು. ಜನಸಾಮಾನ್ಯರ ಆರೋಗ್ಯದ ಪ್ರಶ್ನೆ. ಆದ್ರೆ ಎಕ್ಸಪರ್ಟ್ಸ್ ಹೇಳಬೇಕು. ಅಲ್ಲಿವರೆಗೂ ಯಾರೇ ಕಮೆಂಟ್ ಮಾಡಿದ್ರೂ ಅರ್ಥ ಇಲ್ಲ. ಈಗಾಗ್ಲೇ ನೋಡಿದ್ದೀರಿ, ಕಡಿಮೆ ದರಕ್ಕೆ ಸಿಗುತ್ತೆ ಅಂತಾ ಏನ್ ಬೇಕಾದ್ರೂ ತಿನಿಸುವ ಹುನ್ನಾರ ಇದು. ಮೊದಲಿನಿಂದಲೂ ಮಾಫಿಯಾ ರೀತಿ ನಡೀತಿದೆ. ಅದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ. 

click me!