ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ತತ್ವ ಸಿದ್ದಾಂತವೇ ಇಲ್ಲ: ಸಚಿವ ಕಾರಜೋಳ ವ್ಯಂಗ್ಯ

By Govindaraj S  |  First Published Dec 9, 2022, 2:56 PM IST

ಜನತಾ ಪರಿವಾರದಿಂದ ಬಂದ ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣಕ್ಕೆ ಬಂದವರು, ಹೀಗಾಗಿ  ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಅವರು ಮೈಗೂಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಡಿ.09): ಜನತಾ ಪರಿವಾರದಿಂದ ಬಂದ ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣಕ್ಕೆ ಬಂದವರು, ಹೀಗಾಗಿ  ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಅವರು ಮೈಗೂಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರೇ ಇಂದು ಒತ್ತಾಯಪೂರ್ವಕವಾಗಿ ಕಾಂಗ್ರೆಸ್ ಬಗ್ಗೆ ಮಾತನಾಡುತ್ತೀರಿ. ಇನ್ಮುಂದೆ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಉಳಿಯಲು ಸಾಧ್ಯವಿಲ್ಲ. ಗುಜರಾತ್‌ನಲ್ಲಿರುವಂತಹ ಇಂದಿನ ಕಾಂಗ್ರೆಸ್ ದಯನೀಯ ಸ್ಥಿತಿ, ಕರ್ನಾಟಕ ರಾಜ್ಯದಲ್ಲೂ ಆಗುತ್ತೇ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

undefined

ಬಿಜೆಪಿ ಪಕ್ಷದಲ್ಲಿ ಹಿರಿಯರನ್ನ ಕೈ ಬಿಡ್ತಾರೆ ಅನ್ನೋದೆಲ್ಲ ಗಾಳಿ ಸುದ್ದಿ: ಮುಂಬರುವ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯಲ್ಲಿ ಯುವಕರಿಗೆ ಮಣೆ ಹಾಕುವ ವಿಚಾರ‌‌‌ಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಾರಜೋಳ ಅವರು, ನಮ್ಮ ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬದಲಾವಣೆ ಮಾಡುವಂತಹ ಅನಿವಾರ್ಯತೆ ಬಂದರೆ, ಬದಲಾವಣೆ ಮಾಡ್ತಾರೆ. ಹಿರಿಯರನ್ನ ಕೈ ಬಿಡ್ತಾರೆ ಅನ್ನೋದೆಲ್ಲ ಗಾಳಿ ಸುದ್ದಿ. ಅಂತಹ ಯಾವುದೇ ಪ್ರಕ್ರಿಯೆ ನಮ್ಮಲ್ಲಿ ನಡೆದಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ನಲ್ಲಿ ಸೈದ್ಧಾಂತಿಕ ಬದಲಾವಣೆ ಬೇಕು: ಸತೀಶ್‌ ಜಾರಕಿಹೊಳಿ

ದೇಶದ ಇತಿಹಾಸದಲ್ಲಿಯೇ ಗುಜರಾತ್ ಚುನಾವಣೆ ಫಲಿತಾಂಶ ಐತಿಹಾಸಿಕ: ದೇಶದ ಇತಿಹಾಸದಲ್ಲಿಯೇ ಗುಜರಾತ್ ಚುನಾವಣೆಯು ಐತಿಹಾಸಿಕ ಚುನಾವಣೆಯಾಗಿದೆ.120  ವರ್ಷಗಳ ಹಳೆಯ ಪಕ್ಷ ಕಾಂಗ್ರೆಸ್ ಗುಜರಾತ್‌ನಲ್ಲಿ ಕೇವಲ 16 ಸ್ಥಾನ ಗೆಲ್ಲೋ ಮೂಲಕ ಪ್ರತಿಪಕ್ಷದ ಸ್ಥಾನವೂ ಕೂಡಾ ಅವರಿಗೆ ಸಿಕ್ಕಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಅಂತ ಮೋದಿ 10 ವರ್ಷಗಳ ಹಿಂದೇನೆ ಹೇಳಿದ್ರು, ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದರು. ದೇಶದಲ್ಲಿ ಮೋದಿ ಆಡಳಿತಕ್ಕೆ ಮೆಚ್ಚಿದ್ದಾರೆ. ದೇಶ ಸುರಕ್ಷತೆ ಆಗಿರಬೇಕು ಅಂದ್ರೆ ಮೋದಿ ಆಡಳಿತವೇ ಇರಬೇಕು ಅನ್ನೋ ಜನರ ಬಯಕೆ ಆಗಿದೆ. ಇಡೀ ಪ್ರಪಂಚದ ಎಲ್ಲರೂ ಮೋದಿ ಅವರೇ ವಿಶ್ವದ ನಾಯಕರಾಗುವಂತೆ ಬಯಸುತ್ತಿದ್ದಾರೆ.ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಲ್ಲಿ ಭಾರತದ ಕೀರ್ತಿ, ಗೌರವವನ್ನು ಹೆಚ್ಚಿಸುವ ಕೆಲಸ ಮೋದಿ ಆಡಳಿತದಲ್ಲಿ ಆಗಿದೆ ಎಂದರು.

ದೇಶದ ಸುರಕ್ಷತೆ, ಭದ್ರತೆಗೆ ಇರುವ ಬಿಜೆಪಿ ಪಕ್ಷ ಸೇರಲು ಈಗಲೂ ಜನ ಕ್ಯೂನಲ್ಲಿದ್ದಾರೆ: ಆಪರೇಷನ್ ಕಮಲ ಹಿಮಾಚಲ ಪ್ರದೇಶದ ಎಲೆಕ್ಷನ್‌ನಲ್ಲಿ ಎಫೆಕ್ಟ್ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಾರಜೋಳ ಅವರು, ಜನರು ಬಯಸಿ ಪಕ್ಷಕ್ಕೆ ಬರ್ತಿದಾರೆ, ದೇಶದ ಸುರಕ್ಷತೆ, ಅಭಿವೃದ್ಧಿಗೆ ಒಂದೇ ಪಕ್ಷ ಅದು ಬಿಜೆಪಿ. ಅದಕ್ಕಾಗಿ ಬಿಜೆಪಿ ಸೇರಲು ಕ್ಯೂನಲ್ಲಿ ಇದಾರೆ.ಕಾಂಗ್ರೆಸ್ ನಾಯಕರು, ಗುಲಾಮ್ ನಬಿ ಆಜಾದನಂತವರು ರಾಜೀನಾಮೆ ನೀಡಿ ಹೊರಗೆ ಹೋದರು, ಆಜಾದ್ ಅಂತ ಶ್ರೇಷ್ಠ ವ್ಯಕ್ತಿ ಕಾಂಗ್ರೆಸ್ ನಲ್ಲಿ ಇರಲಿಲ್ಲ, ಅಂತವ್ರು ಪಕ್ಷ ಬಿಟ್ಟೋದ್ರು, ಕಾಂಗ್ರೆಸ್ ಈಗ ವಿಶ್ವಾಸ ಕಳೆದುಕೊಂಡಂತಹ ಪಕ್ಷ ಎಂದ ಕಾರಜೋಳ ಕುಟುಕಿದರು.

ಕುರಿಗಾಹಿಗಳಿಗೆ 21 ಕುರಿ ನೀಡಲು ಸಂಪುಟ ಒಪ್ಪಿಗೆ

ಕಾಂಗ್ರೆಸ್‌ನಂತಹ ಸ್ಥಿತಿ ಬಿಜೆಪಿಗೆ ಬಂದಿಲ್ಲ: ಸಾಮಾನ್ಯವಾಗಿ ಹಿಮಾಚಲ ಪ್ರದೇಶದಲ್ಲಿ ಒಂದು ಟ್ರೆಡಿಶನ್, ಕಲ್ಚರ್ ಇದ್ದು ಒಂದು ಸಾರಿ ಆಯ್ಕೆ ಮಾಡಿದವರನ್ನ ಮತ್ತೊಮ್ಮೆ ಆಯ್ಕೆ ಮಾಡೋದಿಲ್ಲ, ಕಾಂಗ್ರೆಸ್ ಪಕ್ಷ ಗುಜರಾತ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಹಿಂದೆ 77 ಇದ್ದದ್ದು ಈಗ 16ಕ್ಕೆ ಇಳಿದಿದೆ. ಬಿಜೆಪಿಗೆ ಅಂತಹ ದಯನೀಯ ಸ್ಥಿತಿಗೆ ಬಂದಿಲ್ಲ ಎಂದರು. ಈ ಸಂದರ್ಭದಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

click me!