ಸಿದ್ದರಾಮಯ್ಯ ಮಾತ್ರವಲ್ಲ, ರಾಹುಲ್‌ ಸಹ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ: ಸಚಿವ ಗೋವಿಂದ ಕಾರಜೋಳ

By Kannadaprabha NewsFirst Published Jan 30, 2023, 2:00 AM IST
Highlights

ಕೇವಲ ಸಿದ್ದರಾಮಯ್ಯ ಮಾತ್ರವಲ್ಲ ಅವರ ನಾಯಕ ರಾಹುಲ್‌ ಗಾಂ​ಧಿ ಸಹ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ವ್ಯಂಗ್ಯವಾಡಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಈ ಬಾರಿ ರಾಹುಲ್‌ ಗಾಂಧಿ ​ಸೋತು ಅವರ ಮುತ್ಯಾ ಕಟ್ಟಿಸಿದ ಮನೆಗೆ ಹೋಗಲಿದ್ದಾರೆ ಎಂದು ಲೇವಡಿ ಮಾಡಿದರು. 
 

ಬಾಗಲಕೋಟೆ (ಜ.30): ಕೇವಲ ಸಿದ್ದರಾಮಯ್ಯ ಮಾತ್ರವಲ್ಲ ಅವರ ನಾಯಕ ರಾಹುಲ್‌ ಗಾಂ​ಧಿ ಸಹ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ವ್ಯಂಗ್ಯವಾಡಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಈ ಬಾರಿ ರಾಹುಲ್‌ ಗಾಂಧಿ ​ಸೋತು ಅವರ ಮುತ್ಯಾ ಕಟ್ಟಿಸಿದ ಮನೆಗೆ ಹೋಗಲಿದ್ದಾರೆ ಎಂದು ಲೇವಡಿ ಮಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಹುಲ್‌ ಗಾಂಧಿ ​ಅವರು ತಾತ, ಮುತ್ತಾತ ಗೆದ್ದ ಕ್ಷೇತ್ರಗಳಲ್ಲಿ ಸೋತು ಸುಣ್ಣವಾಗಿ ಓಡಿ ಬಂದಿದ್ದಾನೆ. ಕೇರಳಕ್ಕೆ ಬಂದು ನೆಲೆ ಕಂಡುಕೊಂಡಿದ್ದಾನೆ. ಈ ಬಾರಿ ಕೇರಳದವರು ಸಹ ರಾಹುಲ್‌ ಗಾಂ​ಧಿಗೆ ಮತ ನೀಡುವುದಿಲ್ಲ ಎಂದು ಹೇಳಿದರು.

ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಪದೇ ಪದೇ ಕರೆ ತರುವುದಕ್ಕೆ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಟೀಕೆ ಕುರಿತು ಪ್ರತಿಕ್ರಿಯೆ ನೀಡಿದ ಕಾರಜೋಳ, ಇವರಿಬ್ಬರು ಮೊದಲು ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ. ಜನ ನಿಮ್ಮ ಸಾಧನೆ ನೋಡಿ ತಿರಸ್ಕಾರ ಮಾಡಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಳ್ಳಿ ಎಂದರು. ರಾಹುಲ್‌ ಗಾಂಧಿ ​ಕುರಿತು ರಾಹುಲ್‌ ಬಾಬಾ ಎಂದ ಸಚಿವ ಕಾರಜೋಳ, ಕಾಂಗ್ರೆಸ್‌ನವರು ಪ್ರಚಾರಕ್ಕಾಗಿ ರಾಹುಲ್‌ ಬಾಬಾನನ್ನು ಕರೆದುಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಮುಖಕ್ಕೆ ಮತ ಬೀಳುವುದಿಲ್ಲ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. 

Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ

ಉಚಿತ ವಿದ್ಯುತ್‌ ಹಾಗೂ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಹಾಗೂ ನೀರಾವರಿಗೆ ಎರಡು ಲಕ್ಷ ಕೋಟಿ ನೀಡುವುದಾಗಿ ಹೇಳುತ್ತಾರೆ. ಆದರೆ, ರಾಜ್ಯದ ಬಜೆಟ್‌ ಆದರೂ ಎಷ್ಟಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ನೀಡಿರುವ ಭರವಸೆಗೆ 5 ಲಕ್ಷ ಕೋಟಿ ಬೇಕಾಗುತ್ತದೆ. ರಾಜ್ಯದ ಬಜೆಟ್‌ ಇರುವುದೇ 2.5 ಲಕ್ಷ ಕೋಟಿ. ಹಾಗಾದರೆ ನೌಕರರಿಗೆ ವೇತನವನ್ನು ನೀಡಲು ಸಾಧ್ಯವೆ ಎಂದು ಪ್ರಶ್ನಿಸಿದ ಅವರು, ಸುಳ್ಳು ಭರವಸೆಗಳನ್ನು ಹೇಳಿಕೊಂಡು ಓಡಾಡುವುದನ್ನು ಬಿಡಿ. ರಾಜಸ್ಥಾನದಲ್ಲಿ ನೀವು ನೀಡಿದ ಭರವಸೆಗಳು ಏನಾಗಿವೆ. ರಾಜಸ್ಥಾನದಲ್ಲಿ ಪಾಕಿಸ್ತಾನದ ಪರಿಸ್ಥಿತಿ ಬಂದಿದೆ ಎಂದರು.

ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಖಚಿತ: ಕೆ.ಎಸ್‌.ಈಶ್ವರಪ್ಪ

ಪಕ್ಷದ ಆಂತರಿಕ ಸಮಸ್ಯೆ ಕಾರಣ: ರಾಜ್ಯದಲ್ಲಿ ಈ ಹಿಂದೆ ನಡೆದ ಚುನಾವಣೆಗಳಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನ ಗೆದ್ದು ನಂ.1 ಸ್ಥಾನದಲ್ಲಿ ಇದ್ದೇವೆ. ನಮಗೆ ಬಹುಮತ ಬರದೆ ಇರಬಹುದು. ಆದರೆ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಕೆಲವು ತಾಂತ್ರಿಕ ಕಾರಣಗಳಿಂದ ಸೀಟುಗಳ ಸಂಖ್ಯೆ ಕಡಿಮೆ ಆಗಿತ್ತು. ಅದಕ್ಕೆ ಪಕ್ಷದ ಆಂತರಿಕ ಸಮಸ್ಯೆ ಕಾರಣವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಲ್ಲಿ ಸರಿಯಾಗಿ ನಡೆಯದ್ದರಿಂದ ಕೆಲ ಸ್ಥಾನಗಳು ಕಡಿಮೆ ಬಂದಿವೆ ಎಂದ ತಿಳಿಸಿದರು. ಭವಾನಿ ರೇವಣ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಿದ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕಾರಜೋಳ, ಬಿಜೆಪಿ ನಿಂತ ನೀರಲ್ಲ. ಹರಿಯುವ ನೀರು. ಹರಿಯುವ ನೀರಿಗೆ ಹೊಸ ನೀರು ಬಂದು ಸೇರಿಕೊಂಡರೆ ಸ್ವಾಗತಿಸುತ್ತೇವೆ ಎಂದು ಹೇಳಿದರು.

click me!