ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ರಾಜ್ಯಪಾಲರು ಮಾಡುತ್ತಿದ್ದಾರೆ, ರಾಜ್ಯಪಾಲರು ರಾಜ್ಯದ ಕಾನೂನಿನ ಒಬ್ಬ ಮುಖಂಡ, ಅವರ ನಡುವಳಿಕೆ ಅತ್ಯಂತ ಖಂಡನೀಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೋಲಾರ (ಆ.22): ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ರಾಜ್ಯಪಾಲರು ಮಾಡುತ್ತಿದ್ದಾರೆ, ರಾಜ್ಯಪಾಲರು ರಾಜ್ಯದ ಕಾನೂನಿನ ಒಬ್ಬ ಮುಖಂಡ, ಅವರ ನಡುವಳಿಕೆ ಅತ್ಯಂತ ಖಂಡನೀಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜನನಾಯಕ, ಯಾವುದೇ ತಪ್ಪು ಮಾಡದ ವ್ಯಕ್ತಿ. ರಾಜ್ಯಪಾಲರೇ ಷಡ್ಯಂತ್ರದಲ್ಲಿ ಶಾಮೀಲಾದರೆ, ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಕೈ ಹಾಕಿದರೆ ಸುಮ್ಮನೇ ಕೂರಬೇಕಾ ಎಂದು ಪ್ರಶ್ನೆ ಮಾಡಿದರು.
ರಾಜ್ಯಪಾಲರ ನಡೆಯಿಂದ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರಿದೆ, ರಾಜ್ಯಪಾಲರು ಕರ್ನಾಟಕದ ಜನತೆ ಮೇಲೆ ಮಾಡಿರುವ ರಾಜಕೀಯ ದಾಳಿಯನ್ನು ಖಂಡಿಸಬಾರದಾ? ಬಿಜೆಪಿಯವರು ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಸಿಎಂ ಪತ್ನಿ ಪತ್ರ ಬರೆದಾಗ ತೀರ್ಮಾನ ಆಗಬಾರದು ಅಂತ ಹೇಳಿದರು, ಆಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ದರು, ತೀರ್ಮಾನ ಮಾಡಬಹುದಿತ್ತು, ಆಗ ಸಿದ್ದರಾಮಯ್ಯನವರು ತೀರ್ಮಾನ ಮಾಡಿದ್ದರೆ ಅಧಿಕಾರದ ದುರುಪಯೋಗ ಎಂದು ಹೇಳಬಹುದಿತ್ತು, ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಹಗರಣ ಮಾಡಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.
undefined
ಈ ಪ್ರಕರಣದಲ್ಲಿ ಯಾರ್‍ಯಾರು ಏನೇನೂ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ, ತಪ್ಪೇ ಮಾಡಿಲ್ಲ ಅಂದಮೇಲೆ ಸೈಟ್ ಏಕೆ ಬಿಟ್ಟು ಕೊಡಬೇಕು? ಎಂದು ಹೇಳಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅರ್ಜಿ ನೀಡಿರುವ ಕುರಿತು ಪ್ರತಿಕ್ರಿಯಿಸಿ, ತನಿಖೆ ಮಾಡಿ ತಪ್ಪು ಕಂಡಿದಕ್ಕೆ ಪ್ರಾಸಿಕ್ಯೂಷನ್‌ಗೆ ಕೇಳಿದ್ದಾರೆ. ಅದು ಸಾರ್ವಜನಿಕ ಪತ್ರಗಳು. ತನಿಖೆ ಮಾಡಿ ತಪ್ಪಿತಸ್ಥರು ಎಂದು ವರದಿ ಕೊಟ್ಟ ನಂತರ ಅನುಮತಿ ಕೇಳುತ್ತಿದ್ದಾರೆ, ಹುಚ್ಚುಚ್ಚಾಗಿ ಪೊಲೀಸರು ಬರಿಯೋದಕ್ಕೆ ಆಗಲ್ಲ, ಮಾನ್ಯತೆ ಇದೆ. ಇನ್ನೂ ವರದಿ ನೀಡಿದರೂ ರಾಜ್ಯಪಾಲರು ಗೌರವ ಕೊಡುತ್ತಿಲ್ಲ, ಮಾನ್ಯತೆ ನೀಡುತ್ತಿಲ್ಲ. ರಾಜ್ಯಪಾಲರ ನಡೆಯ ಬಗ್ಗೆ ನಮಗೆ ಅಸಮಾಧಾನ ಇದೆ ಎಂದರು.
ಬಂಟ್ವಾಳದಲ್ಲಿ ಎಸ್‌ಡಿಪಿಐ-ಕಾಂಗ್ರೆಸ್ ಮೈತ್ರಿ: ಬಿಜೆಪಿ ಕೈ ತಪ್ಪಿದ ಪುರಸಭೆ ಅಧಿಕಾರ!
ಸಿಎಂ ಬದಲಾವಣೆ ಕುರಿತು ಮಾತನಾಡಿದ ಅವರು, ಸಿಎಂ ಬದಲಾವಣೆಯಾಗುವ ಪ್ರಶ್ನೆಯೇ ಇಲ್ಲ, ಡಿ.ಕೆ.ಶಿವಕುಮಾರ್ ಸೇರಿ ಇಡೀ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇದೆಲ್ಲದರಿಂದ ಸಿಎಂ ಜನಪ್ರಿಯತೆ ಹೆಚ್ಚಾಗಿದೆ ಹೊರತು ಕಡಿಮೆಯಾಗಿಲ್ಲ. ನಾವು ಮತ್ತಷ್ಟು ಗಟ್ಟಿಯಾಗಿದ್ದೇವೆ, ಒಗ್ಗಾಟ್ಟಾಗಿದ್ದೇವೆ, ಕಾಂಗ್ರೆಸ್ ಶಕ್ತಿ ಮತ್ತಷ್ಟು ಹೆಚ್ಚಾಗಿದೆ ಎಂದರು. ಭ್ರೂಣ ಲಿಂಗ ಪತ್ತೆ ವಿಚಾರದಲ್ಲಿ ಹಲವು ಕಾರ್ಯಾಚರಣೆ ಮಾಡಲಾಗಿದೆ, ಮಂಡ್ಯದಲ್ಲೂ ಹಲವು ಕಾರ್ಯಾಚರಣೆ ಮಾಡಲಾಗುತ್ತಿದೆ. ಎಲ್ಲೆಡೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೋಲಾರದಲ್ಲಿ ನಕಲಿ ಕ್ಲಿನಿಕ್ ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದರು. ಐವಾನ್ ಡಿಸೋಜಾ ಹೇಳಿಕೆ ಕುರಿತು ಮಾತನಾಡಿ, ಯಾರೂ ಅಂತಹ ಹೇಳಿಕೆಗಳನ್ನು ನೀಡಬಾರದು, ಬಾಂಗ್ಲಾ ಮಾದರಿಯಲ್ಲೇ ದಂಗೆ ಏಳಬೇಕಾಗುತ್ತದೆ ಎಂಬುದು ಸರಿಯಲ್ಲ ಎಂದು ತಿಳಿಸಿದರು.